ಅಪ್ರಾಪ್ತ ಬುಡುಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಮೂವರ ಬಂಧನ

    

Last Updated : Jun 4, 2018, 04:04 PM IST
ಅಪ್ರಾಪ್ತ ಬುಡುಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಮೂವರ ಬಂಧನ  title=
Photo courtesy: ANI

ನವದೆಹಲಿ: ಜಾರ್ಖಂಡ್ ನ ದಮ್ಕಾ ಜಿಲ್ಲೆಯ ಬರ್ತಲಾ ಗ್ರಾಮದಲ್ಲಿ 12 ವರ್ಷ ವಯಸ್ಸಿನ ಬುಡಕಟ್ಟು ಬಾಲಕಿಯನ್ನು ಗ್ಯಾಂಗ್ ರೇಪ್ ಮಾಡಿದ್ದಕ್ಕಾಗಿ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
 
 ಬರ್ತಲಾ ಗ್ರಾಮದಲ್ಲಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದ ಆ ಬಾಲಕಿ ಬುಧವಾರದಂದು ರಾತ್ರಿವೇಳೆ  ಗ್ರಾಮದ ಹತ್ತಿರವಿರುವ ಶಾಲೆಗೆ ಹೋದಾಗ ಇಸ್ಲಾಂ ಅನ್ಸಾರಿ, ಹುಸೇನ್ ಅನ್ಸಾರಿ ಮತ್ತು ಮುಜಾಫರ್ ಅನ್ಸಾರಿ ಎಂಬ ಮೂವರು ಬಾಲಕಿಯನ್ನು ಅಪಹರಿಸಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂದು ತಿಳಿದುಬಂದಿದೆ. 

ಈ ಘಟನೆಯ ಬಗ್ಗೆ ಆ ಬಾಲಕಿಯು ತನ್ನ ಕುಟುಂಬಕ್ಕೆ ತಿಳಿಸಿದಾಗ ಅವರು ಈ ವಿಷಯವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ಆದರೆ ಅಲ್ಲಿನ ಹಿರಿಯರು ಕನಿಷ್ಠ ಮಟ್ಟದ ಶಿಕ್ಷೆ ನೀಡಿದ್ದರಿಂದಾಗಿ ಅತೃಪ್ತಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ನಡೆದ ನಾಲ್ಕು ದಿನಗಳ ಒಳಗೆ ವಿವಿಧ ಸ್ಥಳಗಳಿಂದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Trending News