ತನ್ನ ಸಂಗಾತಿಯನ್ನು ಸೇರಲು 2000 kms ಪಯಣಿಸಿದ...! ಹೌದು ಹುಲಿಯಾ

ಮ್ಯಾಪ್ ಟ್ರೇನಿಂಗ್ ಜೊತೆಗೆ ಒಂದು ಹುಲಿಯ ಭಾವಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ.

Last Updated : Mar 7, 2020, 01:45 PM IST
ತನ್ನ ಸಂಗಾತಿಯನ್ನು ಸೇರಲು 2000 kms ಪಯಣಿಸಿದ...! ಹೌದು ಹುಲಿಯಾ  title=

ನವದೆಹಲಿ: ಕೊರೊನಾ ವೈರಸ್, ರಕ್ತಪಾತ ಹಾಗೂ ರಾಜಕೀಯದ ಕಥೆಗಳ ಮಧ್ಯೆ ಓರ್ವ ಹೀರೋ ಆಗಿ ಹೊರಹೊಮ್ಮಿದ್ದು, ಜನರು ಆತನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ನಿಜ ಹೇಳುವುದಾದರೆ ನಮ್ಮ ಈ ಕಥೆಯ ಹೀರೋ ಓರ್ವ ಹುಲಿರಾಯ. ಈತ ತನ್ನ ಸಂಗಾತಿಯನ್ನು ಸೇರಲು 2000 km ಪ್ರವಾಸ ನಡೆಸಿದ್ದಾನೆ. ಮ್ಯಾಪ್ ಟ್ರೇನಿಂಗ್ ಜೊತೆಗೆ ಹುಲಿಯೊಂದರ ಭಾವಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಪ್ರವೀಣ್ ಕಾಸವಾನ್ ಹೆಸರಿನ ಅರಣ್ಯ ಅಧಿಕಾರಿಯೊಬ್ಬರು ಮನ ಮುಟ್ಟುವ ಈ ಹುಲಿಯ ಭಾವಚಿತ್ರವನ್ನು ಹಂಚಿಕೊಂಡಿದ್ದು,  "ತನ್ನ ಸಂಗಾತಿಯನ್ನು ಸೇರಲು ಈ ಹುಲಿರಾಯ ಹಗಲು-ರಾತ್ರಿ, ನದಿ-ಕೆರೆ, ತೋಟ-ಗದ್ದೆ ಎನ್ನದೆ ರಸ್ತೆಯ ಮೂಲಕ ಸುಮಾರು 2000 ಕಿಮೀ ಸಂಚರಿಸಿದ್ದಾನೆ" ಎಂದು ಬರೆದುಕೊಂಡಿದ್ದಾರೆ.

"ಸುಮಾರು 2000 ಕಿಮೀ ಸಂಚರಿಸಿರುವ ಈ ಹುಲಿರಾಯ ಸದ್ಯ ಜ್ಞಾನಗಂಗಾ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾನೆ. ಈ ಅಭಯಾರಣ್ಯ ಮಹಾರಾಷ್ಟ್ರದ ಬುಲ್ಢಾಣಾ ಜಿಲ್ಲೆಯಲ್ಲಿದೆ ಹಾಗೂ ಇದು ಮೇಳಘಾಟ್ ಟೈಗರ್ ರಿಸರ್ವ್ ಅಡಿ ಬರುತ್ತದೆ' ಅಂದು ಅಡಿಬರಹ ಬರೆದಿದ್ದಾರೆ.

ಈ ಫೋಟೋ ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ಬಳಕೆದಾರರು "ಯಾವ ಹೆಣ್ಣು ಹುಲಿಗಾಗಿ ಈ ಹುಲಿರಾಯ 2000 ಕಿಮೀ ಪಯಣಿಸಿದ್ದಾನೆಯೋ ಆ ಹೆಣ್ಣು ಹುಲಿ ಎಷ್ಟು ಭಾಗ್ಯಶಾಲಿಯಾಗಿದೆ. ಇನ್ನೊಂದೆಡೆ ತಮ್ಮ ಪ್ರೀತಿಯ ಸಂಘರ್ಷದ ಕುರಿತು ಅತಿಶಯೋಕ್ತಿ ಕಥೆ ಹೇಳುವ ಮನುಷ್ಯರಿಗೆ ಇದು ಮಾದರಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಮತ್ತೋರ್ವ ಟ್ವಿಟ್ಟರ್ ಬಳಕೆದಾರ "ವಾಹ್, 2000 ಕಿಮೀ ಪ್ರವಾಸ, ಅದೂ ಕೂಡ ಯಾವುದೇ ರೀತಿಯ ಜಗಳ ಇಲ್ಲ, ಈತ ನಿಜವಾದ ಹೀರೋ, ರಸ್ತೆಯಲ್ಲಿಯೇ ತನ್ನ ಆಹಾರ ಹುಡುಕುತ್ತಾನೆ, ಬೇಟೆಗಾರರಿಂದ ದೂರ ಇರುತ್ತಾನೆ, ಒಂದು ವೇಳೆ ಈ ಹುಲಿರಾಯನಿಗೆ ಆತನ ಸಂಗಾತಿ ಸಿಕ್ಕರೆ ಆತನ ಶ್ರಮ ನಿಜವಾಗಿಯೂ ಫಲಿಸಲಿದೆ" ಎಂದು ಬರೆದುಕೊಂಡಿದ್ದಾರೆ.

Trending News