ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಎಲ್ಲಾ ಕೆಲಸಗಳನ್ನು ವಾಟ್ಸ್ ಆಪ್ (WhatsApp) ಮೂಲಕವೇ ನಿರ್ವಹಿಸುತ್ತಿದ್ದೇವೆ. ಫೋಟೋ ಕಳುಧಿಸುವುದರಿಂದ ಹಿಡಿದು ಯಾವುದೇ ಮಹತ್ವದ ದಾಖಲೆಯನ್ನು ಕಳುಹಿಸುವವರೆಗೆ ನಾವು ನಮ್ಮ ಎಲ್ಲಾ ಕೆಲಸಗಳಿಗಾಗಿ ವಾಟ್ಸ್ ಆಪ್ ಅನ್ನು ಬಳಸುತ್ತಿದ್ದೇವೆ. ಇನ್ನೊಂದೆಡೆ ವಾಟ್ಸ್ ಆಪ್ ಕೂಡ ತನ್ನ ಬಳಕೆದಾರರ ದಿನನಿತ್ಯದ ಅನುಭವವನ್ನು ಹೆಚ್ಚಿಸಲು ನಿರಂತರವಾಗಿ ತನ್ನ ಆಪ್ ನವೀಕರಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆಮಾಡುತಲೇ. ಇದೆ. ಆದರೆ, ವಾಟ್ಸ್ ಆಪ್ ನ ಇಂತಹ ಹಲವು ವೈಶಿಷ್ಟ್ಯಗಳಿದ್ದು, ಅವುಗಳ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಅಥವಾ ಅವುಗಳ ಬಗ್ಗೆ ನಮಗೆ ಕಡಿಮೆ ಮಾಹಿತಿ ಇದೆ. ಇದರಿಂದ ನಮಗೆ ಆ ವೈಶಿಷ್ಟ್ಯಗಳ ಲಾಭ ಪಡೆಯಲು ಆಗುವುದಿಲ್ಲ. ವಾಟ್ಸ್ ಆಪ್ ಮೇಲೆ ನಮಗೆ ಬೇಕಾಗುವ ಹಲವು ವಿಶೇಷ ವ್ಯಕ್ತಿಗಳಿರುತ್ತಾರೆ. ಅವರ ಜೊತೆಗೆ ನಾವು ನಿರಂತರ ಸಂವಾದ ನಡೆಸುತ್ತೇವೆ. ಅಷ್ಟೇ ಅಲ್ಲ ಅವೊರೊಂದಿಗೆ ನಾವು ನಮ್ಮ ಹೆಚ್ಚಿನ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತೇವೆ. ಹಾಗಾದರೆ ಬನ್ನಿ ನೀವು ಯಾರ ಜೊತೆಗೆ ಹೆಚ್ಚು ಚಾಟ್ ನಡೆಸುತ್ತಿರಿ ಎಂದು ತಿಳಿದುಕೊಳ್ಳುವ ಒಂದು ವಾಟ್ಸ್ ಆಪ್ ವೈಶಿಷ್ಟ್ಯದ ಬಗ್ಗೆ ಅರಿಯೋಣ.
- ಇದಕ್ಕಾಗಿ ಮೊದಲು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ತೆರೆಯಿರಿ.
- ಬಲಕ್ಕೆ ಮೇಲ್ಭಾಗದಲ್ಲಿ ನೀಡಲಾಗಿರುವ ಮೂರು ಬಿಂದುಗಳ ಮೇಲೆ ಒಮ್ಮೆ ಕ್ಲಿಕ್ಕಿಸಿ
- ಬಳಿಕ ಸೆಟ್ಟಿಂಗ್ ವಿಭಾಗದಲ್ಲಿ ನೀಡಲಾಗಿರುವ ಡೇಟಾ ಹಾಗೂ ಯುಸೆಜ್ ಮೇಲೆ ಕ್ಲಿಕ್ಕ ಮಾಡಿ. ಬಳಿಕ ಕಾಣಿಸಿಕೊಳ್ಳಲಿರುವ ಆಪ್ಶನ್ ನಲ್ಲಿ ಸ್ಟೋರೇಜ್ ಆಪ್ಶನ್ ಅನ್ನು ಆಯ್ಕೆ ಮಾಡಿ.
- ಇದಾದ ಬಳಿಕ ನಿಮ್ಮ ಮುಂದೆ ಕಾಂಟ್ಯಾಕ್ಟ್ ಲಿಸ್ಟ್ ತೆರೆದುಕೊಳ್ಳಲಿದ್ದು, ಈ ಲಿಸ್ಟ್ ನಲ್ಲಿ ನೀವು ಯಾರ ಜೊತೆಗೆ ಎಷ್ಟು ಸಂವಾದ ನಡೆಸಿದ್ದೀರಿ ಎಂಬುದು ತಿಳಿಯುತ್ತದೆ.
- ಕಾಣಿಸಿಕೊಂಡ ಕಾಂಟಾಕ್ಟ್ ಲಿಸ್ಟ್ ನಿಂದ ಯಾವುದೇ ಒಂದು ಕಾಂಟಾಕ್ಟ್ ಮೇಲೆ ಕ್ಲಿಕ್ಕಿಸಿ ಅವರೊಂದಿಗೆ ನಡೆಸಿರುವ ಸಂವಾದದ ಕುರಿತು ನೀವು ತಿಳಿಯಬಹುದು.
ಹಲವು ಬಾರಿಗೆ ಯಾವುದೇ ಒಂದು ನಿರ್ಧಿಷ್ಟ ವ್ಯಕ್ತಿಯ ಜೊತೆಗೆ ನಾವು ಮಾತುಕತೆ ನಡೆಸಿರುತ್ತೇವೆ. ಅವರೊಂದಿಗೆ ಭಾವಚಿತ್ರಗಳನ್ನು ಕೂಡ ಹಂಚಿಕೊಂಡಿರುತ್ತೇವೆ. ಕೇವಲ ಆ ವ್ಯಕ್ತಿ ಮಾತ್ರ ನಮ್ಮ ಭಾವಚಿತ್ರಗಳನ್ನು ನೋಡಬೇಕು ಎಂದು ನಾವು ಬಯಸುತ್ತೇವೆ. ಆದರೆ, ಆ ವ್ಯಕ್ತಿಗೆ ಕಳುಹಿಸಿದ ಚಿತ್ರಗಳು ಅವರ ಗ್ಯಾಲರಿ ಸೆಕ್ಷನ್ ಗೆ ಹೋಗುತ್ತವೆ. ಇದನ್ನು ತಪ್ಪಿಸಲು ಇಲ್ಲಿದೆ ಒಂದು ಟ್ರಿಕ್
-ಮೊದಲು ವಾಟ್ಸ್ ಆಪ್ ಓಪನ್ ಮಾಡಿ, ಯಾರ ಮೀಡಿಯಾಗಳನ್ನು ನೀವು ಮರೆಮಾಚಲು ಬಯಸುತ್ತಿರುವಿರೋ ಅವರ ಕಾಂಟಾಕ್ಟ್ ಮೇಲೆ ಕ್ಲಿಕ್ಕಿಸಿ.
- ಚ್ಯಾಟ್ ತೆರೆದುಕೊಂಡಾಗ ಕಾಂಟಾಕ್ಟ್ ಇನ್ಫಾರ್ಮಶನ್ ಮೇಲೆ ಕ್ಲಿಕ್ಕಿಸಿ
- ಅಲ್ಲಿ ನಿಮಗೆ ಮೀಡಿಯಾ ವಿಸೆಬಿಲಿಟಿ ಆಪ್ಶನ್ ಕಾಣಿಸಿಕೊಳ್ಳಲಿದೆ. ಅದನ್ನು ಆಯ್ಕೆ ಮಾಡಿ.
-ಈಗ ನೀವು ನಿಮ್ಮ ಅನಕೂಲಕ್ಕೆ ತಕ್ಕಂತೆ ಆಯ್ಕೆಯನ್ನು ಆಯ್ದುಕೊಳ್ಳಬಹುದು.
ನಿಮ್ಮ ವೈಯಕ್ತಿಕ ಚಾಟ್ ಅನ್ನು ಹೀಗೆ ಮರೆಮಾಚಿ
-ಮೊದಲು ವಾಟ್ಸ್ ಆಪ್ ಓಪನ್ ಮಾಡಿ
-ಯಾರ ಚಾಟ್ ಮರೆಮಾಚಲು ಬಯಸುತ್ತಿರುವಿರು ಅವರ ಹೆಸರಿನ ಮೇಲೆ ಲಾಂಗ್ ಪ್ರೆಸ್ ಮಾಡಿ.
-ಈಗ ನಿಮಗೆ ಆರ್ಕೈವ್ ಆಪ್ಶನ್ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಟ್ಯಾಪ್ ಮಾಡಿ.
-ನೀವು ಬಯಸುತ್ತಿರುವ ಚಾಟ್ ಮರೆಯಾಗುತ್ತದೆ.