ಸಂಶೋಧನೆಯಲ್ಲಿನ ಕೃತಿ ಚೌರ್ಯದ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯಲ್ಲಿನ ಕೃತಿ ಚೌರ್ಯದ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಜೆ.ಅಲ್ಪೋನ್ಸ್ ಸರ್ಕಾರಕ್ಕೆ ಆಗ್ರಹಿಸಿದರು.

Last Updated : Jul 30, 2019, 05:29 PM IST
ಸಂಶೋಧನೆಯಲ್ಲಿನ ಕೃತಿ ಚೌರ್ಯದ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ  title=
file photo

ನವದೆಹಲಿ: ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯಲ್ಲಿನ ಕೃತಿ ಚೌರ್ಯದ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಜೆ.ಅಲ್ಪೋನ್ಸ್ ಸರ್ಕಾರಕ್ಕೆ ಆಗ್ರಹಿಸಿದರು.

ಸಂಸತ್ತಿನ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು ' ಒಂದು ವೇಳೆ ಭೋಧಕ ವರ್ಗವು ಕೃತಿ ಚೌರ್ಯದಲ್ಲಿ ಭಾಗಿಯಾಗಿದ್ದರೆ ಅವರನ್ನು ಸೇವೆಯಿಂದ ತೆಗೆದುಹಾಕಬೇಕೆಂದರು.ಕೃತಿ ಚೌರ್ಯವನ್ನು ಗಂಭೀರ ವಿಷಯವೆಂದು ಹೇಳಿದ ಸಂಸದರು, ಇದರಿಂದಾಗಿ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಂತರಾಷ್ಟ್ರೀಯ ನಿಯತಕಾಲಿಕೆಗಳಿಗೆ ಕಳುಹಿಸಿದ ಸಂಶೋಧನೆಗಳನ್ನು ಪ್ರಕಟಿಸದೆ ವಾಪಾಸ್ ಕಳುಹಿಸಲಾಗುತ್ತಿದೆ.

ದೇಶದಲ್ಲಿ ಗಂಭೀರವಾದ ಸಂಶೋಧನೆ ಇರಬೇಕು ಹೊರತು ನಕಲಿ ಮಾಡುವ ಸಂಶೋಧನೆಯಲ್ಲ. ಆದ್ದರಿಂದ ಕೃತಿ ಚೌರ್ಯದ ವಿರುದ್ಧವಾಗಿ ಶೂನ್ಯ ಸಹಿಷ್ಣ ನಿಲುವನ್ನು ತಾಳಬೇಕು, ಕೃತಿ ಚೌರ್ಯದ ಬಗ್ಗೆ ಶೋಧನೆ ನಡೆಸಲು ಕಚೇರಿಯನ್ನು ತೆರೆದು ಇದರ ಬಗ್ಗೆ ಪ್ರಧಾನಿಗೆ ವರದಿ ನೀಡಬೇಕು ಎಂದು ಅವರು ಪ್ರಸ್ತಾಪಿಸಿದರು.

ದೇಶದಲ್ಲಿನ ಬಹುತೇಕ ವಿವಿಗಳಲ್ಲಿ ಕೃತಿ ಚೌರ್ಯ ಹೇರಳವಾಗಿ ನಡೆಯುತ್ತಿದೆ. ಇದರರ್ಥ ಈಗಾಗಲೇ ಪ್ರಕಟನೆಯಾಗಿರುವುದರಿಂದ ಅವರು ವಿಚಾರಗಳನ್ನು ಖದಿಯುತ್ತಿದ್ದಾರೆ ಎಂದು ತಿಳಿಸಿದರು.

ಇಂದು ವಿವಿ ಆವರಣದ ಹೊರಗಿರುವ ಅಂಗಡಿಗಳಲ್ಲಿ ಪಿಎಚ್ಡಿ ಪ್ರಕಟಣೆಗಳು ಮಾರಾಟಕ್ಕೆ ಸಿಗುತ್ತವೆ ಎನ್ನುವುದನ್ನು ನಾನು ಕೇಳಲ್ಪಟ್ಟಿದ್ದೇನೆ. ಒಂದು ವೇಳೆ ನೀವು ಕೃತಿ ಚೌರ್ಯಕ್ಕೆ ಅವಕಾಶ ನೀಡಿಲ್ಲವೆಂದಾದಲ್ಲಿ ಈ ಪಿಎಚ್ಡಿ ಹಾಗೂ ಎಂಪಿಎಲ್ ಗಳು ಬಂದಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು. 

Trending News