ನವದೆಹಲಿ: ಜಮಾತ್ ಇಸ್ಲಾಮಿ ಹಿಂದ್‌ನ ಮೊಹಮ್ಮದ್ ಸಲೀಂ ಎಂಜಿನಿಯರ್ ಅಯೋಧ್ಯೆಯ ತೀರ್ಪನ್ನು ಯಾರೊಬ್ಬರ ಗೆಲುವು ಅಥವಾ ಸೋಲಲ್ಲ ಎಂದು ಶ್ಲಾಘಿಸಿದರು. "ಈ ತೀರ್ಪು ಯಾರೊಬ್ಬರ ಗೆಲುವು ಅಥವಾ ಸೋಲಲ್ಲ. ನ್ಯಾಯ, ಶಾಂತಿ, ಸಮಾನತೆ, ಸ್ವಾತಂತ್ರ್ಯದ ಮೌಲ್ಯಗಳನ್ನು ಬಲಪಡಿಸುವುದು ಮತ್ತು ಅವರೊಂದಿಗೆ ದೇಶವನ್ನು ಮುಂದೆ ಕೊಂಡೊಯ್ಯುವುದು. ಇದು ಭಾರತಕ್ಕೆ ಜಯವಾಗಿದೆ" ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಅಜಿತ್ ದೋವಲ್ ಅವರ ನಿವಾಸ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಮೊಹಮ್ಮದ್ ಸಲೀಮ್ ಎಂಜಿನಿಯರ್ ತಿಳಿಸಿದ್ದಾರೆ.
Mohd Salim Engineer, Jamaat-e-Islami Hind at a meet at NSA's residence in Delhi, yesterday: This verdict is not anyone's victory or loss. Strengthening values of justice, peace, equality,& freedom & taking the country forward with them will be a victory for India. #AyodhyaVerdict pic.twitter.com/pIXiyGOBAF
— ANI (@ANI) November 10, 2019
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ, ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಭಾನುವಾರ ಇಲ್ಲಿ ನಡೆದ ಅಂತರ್-ಧಾರ್ಮಿಕ ನಂಬಿಕೆ ಸಭೆಯಲ್ಲಿ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ದೇವಾಲಯ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶನಿವಾರ ನಿರ್ದೇಶನ ನೀಡಿದೆ. ಐದು ಎಕರೆ ಅಳತೆಯ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು.