ನವದೆಹಲಿ: ನಿಧಾನಗತಿಯಲ್ಲಿ ಸಾಗುತ್ತಿರುವ ವಾಹನ ವಲಯವನ್ನು ವೃದ್ದಿಸುವ ನಿಟ್ಟಿನಲ್ಲಿ ಈಗ ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ವಾಹನವನ್ನು ರದ್ದುಗೊಳಿಸುವ ಕಾಯ್ದೆಯನ್ನು ಜಾರಿಗೆ ತರಲಿದೆ ಎಂದು ಮೂಲಗಳು ಜೀ ನ್ಯೂಸ್ ಗೆ ತಿಳಿಸಿವೆ.
ರಸ್ತೆ ಸಾರಿಗೆ ಸಚಿವಾಲಯವು ಸಿದ್ಧಪಡಿಸುತ್ತಿರುವ ವಾಹನ ರದ್ದು ನೀತಿಗೆ ಈಗಾಗಲೇ ಹಣಕಾಸು ಸಚಿವಾಲಯದಿಂದ ಹಸಿರು ಸಿಗ್ನಲ್ ದೊರೆತಿದೆ ಮತ್ತು ಹೆಚ್ಚಿನ ಅನುಮತಿಗಾಗಿ ಇತ್ತೀಚೆಗೆ ಪಿಎಂಒಗೆ ಕಳುಹಿಸಲಾಗಿದೆ. ಪಿಎಂಒ ಕೂಡ ಇದಕ್ಕೆ ಒಪ್ಪಿಗೆ ನೀಡಲು ಮುಂದಾಗಿದೆ ಎಂದು ಜೀ ನ್ಯೂಸ್ ಮೂಲಗಳು ತಿಳಿಸಿವೆ.
ಈ ಹೊಸ ನೀತಿ ಅನ್ವಯ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ರಸ್ತೆಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಗುರಿಯನ್ನು ಹೊಂದಿದೆ. ಮರು ನೋಂದಣಿ ಶುಲ್ಕವನ್ನು ಹಲವಾರು ಹಂತಗಳಿಂದ ಹೆಚ್ಚಿಸಲು ಸಹ ಇದು ಶಿಫಾರಸು ಮಾಡುತ್ತದೆ.
15 ವರ್ಷಗಳಿಂದ ಚಾಲನೆಯಲ್ಲಿರುವ ವಾಹನವು ಮರು ನೋಂದಣಿಗೆ ಮಾಡಿಸಿಕೊಳ್ಳಬೇಕು ಇದಕ್ಕಾಗಿ ಖಾಸಗಿ ನಾಲ್ಕು ಚಕ್ರಗಳ ವಾಹನದ ಮರು ನೋಂದಣಿಯು ಪ್ರಸ್ತುತ 600 ರೂ.ನಿಂದ 15,000 ರೂ.ಗಳವರೆಗೆ ಆಗಬಹುದು, ವಾಣಿಜ್ಯ ನಾಲ್ಕು ವಾಹನಗಳಿಗೆ ಪ್ರಸ್ತುತ 1000 ರೂ.ಗಳಿಂದ 20,000 ರೂ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಈಗ ಕೇಂದ್ರ ಸರ್ಕಾರದ ಕಾಯ್ದೆಯಿಂದ ಮತ್ತೆ ವಾಹನ ವಲಯ ಸುಧಾರಿಸಬಹುದು ಎನ್ನಲಾಗಿದೆ.