ಇಂದು ಸುಪ್ರೀಂನಲ್ಲಿ ಕಾಂಗ್ರೆಸ್-ಶಿವಸೇನಾ-ಎನ್ಸಿಪಿ ತುರ್ತು ಅರ್ಜಿ ವಿಚಾರಣೆ

 ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ನಿಯಮವನ್ನು ಕೊನೆಗೊಳಿಸುವ ಕೇಂದ್ರದ ಕ್ರಮ ಮತ್ತು ರಾಜ್ಯ ಸರ್ಕಾರ ರಚನೆಗೆ ದೇವೇಂದ್ರ ಫಡ್ನವೀಸ್ ಅವರನ್ನು ಆಹ್ವಾನಿಸುವ ರಾಜ್ಯಪಾಲರ ಕ್ರಮದ ವಿರುದ್ಧ ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಬೆಳಿಗ್ಗೆ ವಿಚಾರಣೆ ನಡೆಸಲಿದೆ. 

Last Updated : Nov 24, 2019, 10:31 AM IST
ಇಂದು ಸುಪ್ರೀಂನಲ್ಲಿ ಕಾಂಗ್ರೆಸ್-ಶಿವಸೇನಾ-ಎನ್ಸಿಪಿ ತುರ್ತು ಅರ್ಜಿ ವಿಚಾರಣೆ   title=

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ನಿಯಮವನ್ನು ಕೊನೆಗೊಳಿಸುವ ಕೇಂದ್ರದ ಕ್ರಮ ಮತ್ತು ರಾಜ್ಯ ಸರ್ಕಾರ ರಚನೆಗೆ ದೇವೇಂದ್ರ ಫಡ್ನವೀಸ್ ಅವರನ್ನು ಆಹ್ವಾನಿಸುವ ರಾಜ್ಯಪಾಲರ ಕ್ರಮದ ವಿರುದ್ಧ ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಬೆಳಿಗ್ಗೆ ವಿಚಾರಣೆ ನಡೆಸಲಿದೆ. 

ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರ ಮೂರು ನ್ಯಾಯಾಧೀಶರ ಪೀಠವು ಬೆಳಿಗ್ಗೆ 11: 30 ಕ್ಕೆ ಅರ್ಜಿಯನ್ನು ಆಲಿಸಲಿದೆ. ಬಿಜೆಪಿ ಶನಿವಾರದಂದು ಮಹಾರಾಷ್ಟ್ರದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದೆ, ಕೆಲವು ಚತುರ ರಾಜಕೀಯ ಕುಶಲತೆಯಿಂದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಅವರನ್ನು ಸೆಳೆದು ಎನ್ಸಿಪಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾಗಿದೆ.

ಇದಕ್ಕೂ ಮೊದಲು ಕಾಂಗ್ರೆಸ್-ಶಿವಸೇನಾ-ಎನ್ಸಿಪಿ ಪಕ್ಷಗಳು ಸರ್ಕಾರ ರಚನೆಗೆ ಸಿದ್ದತೆ ನಡೆಸಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ನಿಯಮವನ್ನು ಬೆಳಿಗ್ಗೆ 5.47ಕ್ಕೆ ರದ್ದುಗೊಳಿಸುವ ಮೂಲಕ ಬಿಜೆಪಿ ಮತ್ತು ಎನ್ಸಿಪಿ ಸರ್ಕಾರವನ್ನು ರಚಿಸಿದೆ. ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಮತ್ತು ಅಜಿತ್ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಬೆಳಿಗ್ಗೆ 7.50 ಕ್ಕೆ ಪ್ರಮಾಣವಚನ ಸಮಾರಂಭ ನಡೆಯಿತು. ಇದರಲ್ಲಿ ಬೆರಳೆಣಿಕೆಯಷ್ಟು ಎನ್‌ಸಿಪಿ ಸದಸ್ಯರು ಭಾಗವಹಿಸಿದ್ದರು.

Trending News