ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿಯ ವಿಚಾರದಲ್ಲಿ ಮತ್ತೆ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಸುಪ್ರಿಂ ಕೋರ್ಟ್, ಕೇಂದ್ರ ಸರ್ಕಾರವು ಕೋರ್ಟ್ ನ ಆದೇಶವನ್ನು ಜಾರಿಗೊಳಿಸಬೇಕೆಂದು ಪುನರುಚ್ಚರಿಸಿದೆ.
ಇದೇ ಸಂದರ್ಭದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರಿಂಕೋರ್ಟ್ ಮಂಡಳಿಯನ್ನು ರಚಿಸುವ ಪೂರ್ಣ ಜವಾಬ್ದಾರಿಯ ಸರ್ಕಾರದ್ದಾಗಿರುತ್ತದೆ ಪ್ರತಿ ಬಾರಿಯೂ ನ್ಯಾಯಾಲಯವೇ ವಿವಾದವನ್ನು ಬಗೆ ಹರಿಸಲು ಸಾದ್ಯವಿಲ್ಲ ಎಂದು ಕಿಡಿಕಾರಿದೆ
ಕೇಂದ್ರ ಸರ್ಕಾರವು ಸ್ಕೀಂ ನ ವಿಚಾರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತೆ ಈ ಹಿಂದೆ ಹೇಳಿರುವುದನ್ನೇ ಪುನರುಚ್ಚಿಸಿ ಕೇಂದ್ರ ಸರ್ಕಾರವು ಮೇ 3 ರೊಳಗೆ ಸ್ಕೀಂ ನ ಕರಡು ಪ್ರತಿ ಸಲ್ಲಿಸಬೇಕೆಂದು ಗಡುವು ನೀಡಿದ್ದಾರೆ.
ಆ ಮೂಲಕ ಸುಪ್ರಿಂ ಕೋರ್ಟ್ ಪರೋಕ್ಷವಾಗಿ ಮಂಡಳಿ ಸ್ಥಾಪನೆಯ ಸಾಧ್ಯತೆಯನ್ನು ತಳ್ಳಿಹಾಕಿದೆ. ಕೇಂದ್ರ ಸರ್ಕಾರವು ರಚಿಸುವ ಸ್ಕೀಂ ನ ಅನ್ವಯ ಕಾವೇರಿ ನೀರನ್ನು ಹಂಚಿಕೆ ಮಾಡಲು ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.