ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿ ಆರಂಭಿಕ ವಹಿವಾಟಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ 300 ಸೂಚ್ಯಂಕ ಕುಸಿತವಾಗಿದೆ.ನಿಫ್ಟಿ ದಿನದ ಕನಿಷ್ಠ ಮಟ್ಟದಲ್ಲಿ 11,257 ಕ್ಕೆ ಇಳಿದಿದೆ.
ಇತ್ತೀಚಿನ ತೀವ್ರ ಕುಸಿತದ ನಂತರ ಇಂದು ಯೆಸ್ ಬ್ಯಾಂಕ್ ಷೇರಿನಲ್ಲಿ ಚೇತರಿಕೆ ಕಂಡು ಬಂದಿದ್ದು 20% ಕ್ಕಿಂತ ಹೆಚ್ಚಿವೆ ಎನ್ನಲಾಗಿದೆ.100 ಮಿಲಿಯನ್ ಷೇರುಗಳ ಮಾರಾಟದ ನಂತರ ಮಂಗಳವಾರ ಸಾಲದಾತ ಷೇರುಗಳು 22% ನಷ್ಟು ಕುಸಿದ ನಂತರ ಬ್ಯಾಂಕ್ ನಿರ್ವಹಣೆಯು ಕಳವಳವನ್ನು ನಿವಾರಿಸಿದೆ, ಇದು ಬ್ಯಾಂಕಿನ ಷೇರು ಬಂಡವಾಳದ 3.92% ಅನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್ ಹಾಗೂ ಲೋಹದ ಶೇರುಗಳು ಹೆಚ್ಚಿಗೆ ನಷ್ಟ ಅನುಭವಿವೆ ಎಂದು ತಿಳಿದುಬಂದಿದೆ.
ಯುಎಸ್ ಇಕ್ವಿಟಿಯಲ್ಲಿ ನಷ್ಟ ಅನುಭವಿಸಿದ ನಂತರ ಏಷ್ಯಾದ ಮಾರುಕಟ್ಟೆ ಕೂಡ ಇದರ ಪ್ರಭಾವಕ್ಕೆ ಒಳಾಗಿದೆ. ಈ ಹಿನ್ನಲೆಯಲ್ಲಿ ಟೋಕಿಯೊ ಮತ್ತು ಸಿಡ್ನಿಯಲ್ಲಿ ಷೇರುಗಳು ಸುಮಾರು 2% ರಷ್ಟು ಕುಸಿತ ಕಂಡು ಬಂದರೆ, ಹಾಂಗ್ ಕಾಂಗ್‌ನಲ್ಲಿ ಸಾಧಾರಣ ಕುಸಿತ ಕಂಡಿದೆ. ಇನ್ನು ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿನ ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಎಂದು ವರದಿಯಾಗಿದೆ.