ವಾಜಪೇಯಿ ಚಿತಾಭಸ್ಮ ವಿಸರ್ಜನೆಗೆ ವ್ಯಯಿಸಿದ್ದ 2.54 ಕೋಟಿ ರೂ ಪಾವತಿಸದ ಯೋಗಿ ಸರ್ಕಾರ

 ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈಗ ಮುಜುಗರದ ಸಂಗತಿಯೊಂದು ಎದುರಾಗಿದೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮ ವಿಸರ್ಜನೆಗೆ ವ್ಯಯಸಿದ್ದ 2.54 ಕೋಟಿ ರೂ.ಗಳ ಬಿಲ್ ನ್ನು ಉ.ಪ್ರದೇಶ ಸರ್ಕಾರ ಇದುವರೆಗೆ ಪಾವತಿಸಿಲ್ಲ ಎನ್ನಲಾಗಿದೆ. ಇದರಿಂದ ಈಗ ಬಿಜೆಪಿ ಸರ್ಕಾರಕ್ಕೆ ಈ ವಿಚಾರ ಸಾಕಷ್ಟು ಇರಿಸು ಮುರಿಸು ಉಂಟು ಮಾಡಿದೆ. 

Last Updated : Jun 26, 2019, 07:34 PM IST
ವಾಜಪೇಯಿ ಚಿತಾಭಸ್ಮ ವಿಸರ್ಜನೆಗೆ ವ್ಯಯಿಸಿದ್ದ 2.54 ಕೋಟಿ ರೂ ಪಾವತಿಸದ ಯೋಗಿ ಸರ್ಕಾರ    title=

ನವದೆಹಲಿ:  ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈಗ ಮುಜುಗರದ ಸಂಗತಿಯೊಂದು ಎದುರಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮ ವಿಸರ್ಜನೆಗೆ ವ್ಯಯಸಿದ್ದ 2.54 ಕೋಟಿ ರೂ.ಗಳ ಬಿಲ್ ನ್ನು ಉ.ಪ್ರದೇಶ ಸರ್ಕಾರ ಇದುವರೆಗೆ ಪಾವತಿಸಿಲ್ಲ ಎನ್ನಲಾಗಿದೆ. ಇದರಿಂದ ಈಗ ಬಿಜೆಪಿ ಸರ್ಕಾರಕ್ಕೆ ಈ ವಿಚಾರದಿಂದಾಗಿ ಸಾಕಷ್ಟು ಇರಿಸು ಮುರಿಸು ಉಂಟಾಗಿದೆ.

ವರದಿಗಳ ಪ್ರಕಾರ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಕಳೆದ ವರ್ಷ ಅಗಸ್ಟ್‌ನಲ್ಲಿ ವಾಜಪೇಯಿ ಅವರ ಚಿತಾಭಸ್ಮವನ್ನು ವಿಸರ್ಜಿಸಿದ್ದಕ್ಕಾಗಿ ಲಖನೌದ ಗೋಮತಿ ನದಿಯ ಮುಂಭಾಗದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದಕ್ಕಾಗಿ ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಸರಿಸುಮಾರು 2.54 ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ನಂತರ ಪೂರ್ಣ ಮೊತ್ತವನ್ನು ನಂತರದಲ್ಲಿ ಸರಿದೂಗಿಸಲಾಗುವುದು ಎಂಬ ಭರವಸೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲು ವಿನಂತಿಸಿಕೊಳ್ಳಲಾಯಿತು. ಆದರೆ ಇದುವರೆಗೆ ಕೂಡ ಚಿತಾ ಭಸ್ಮ ಕಾರ್ಯಕ್ರಮಕ್ಕೆ ವ್ಯಯಿಸಿದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. 

ಈ ಕಾರ್ಯಕ್ರಮಕ್ಕಾಗಿ ವ್ಯಯಿಸಿದ ಹಣವನ್ನು ನೀಡಲು ಲಕ್ನೋ ಅಭಿವೃದ್ದಿ ಪ್ರಾಧಿಕಾರ ಕಳೆದ ಒಂದು ವರ್ಷದಿಂದಲೂ ಯೋಗಿ ನೇತೃತ್ವದ ಸರ್ಕಾರಕ್ಕೆ ಪತ್ರ ಬರೆಯುತ್ತಿದೆ ಎನ್ನಲಾಗಿದೆ. ಈಗ ಈ ವಿಚಾರವಾಗಿ ಸ್ಥಳೀಯ ದಿನಪತ್ರಿಕೆ ವರದಿಯನ್ನು ಪ್ರಕಟಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ
 

Trending News