ಶಬರಿ ಮಲೆಯ ಪವಿತ್ರ ತೀರ್ಥಕ್ಕೆ ಅವಮಾನ? ಘಟನೆಯ ನಂತರ ಸಚಿವರು ನೀಡಿದ ಸ್ಪಷ್ಟನೆ ಇದು

ಪ್ರಸಿದ್ದ ಶಬರಿಮಲೆ ದೇವಸ್ಥಾನದ ತೀರ್ಥಕ್ಕೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

Written by - Ranjitha R K | Last Updated : Nov 18, 2021, 07:26 PM IST
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ವಿಡಿಯೋ
  • ಶಬರಿಮಲೆ ತೀರ್ಥಕ್ಕೆ ಅವಮಾನ ಮಾಡಿದರೇ ಸಚಿವರು
  • ಸಚಿವರು ನೀಡಿದ ಸ್ಪಷ್ಟಮೆ ಏನು?
ಶಬರಿ ಮಲೆಯ ಪವಿತ್ರ ತೀರ್ಥಕ್ಕೆ ಅವಮಾನ? ಘಟನೆಯ ನಂತರ ಸಚಿವರು ನೀಡಿದ ಸ್ಪಷ್ಟನೆ ಇದು title=
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ವಿಡಿಯೋ (file photo)

ತಿರುವನಂತಪುರಂ: ಪ್ರಸಿದ್ದ ಶಬರಿಮಲೆ ದೇವಸ್ಥಾನದ ತೀರ್ಥಕ್ಕೆ (Shabarimala temple holy water) ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಸಚಿವ ಕೆ. ರಾಧಾಕೃಷ್ಣನ್ (K. Radhakrishnan), ದೇವರ ಹಣವನ್ನು ಕದಿಯುವವರಿಗೆ  ಭಯ ಇರುತ್ತದೆ. ತಾನು ಅಂಥಹ ಯಾವುದೇ ಕೆಲಸ ಮಾಡಿದರ ಕಾರಣ, ಭಯ ಪಡುವ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಜೀವನದಲ್ಲಿ ಎಂದೂ ಸೇವಿಸದ ಕೆಲವು ವಸ್ತುಗಳಿದ್ದು, ನಂಬಿಕೆಯ ಹೆಸರಲ್ಲಿಯೂ ಅವುಗಳನ್ನು ತಾವು ಸ್ವೀಕರಿಸುವುದಿಲ್ಲ ಎಂದಿದ್ದಾರೆ. 

ಏನಿದು ಇಡೀ ಪ್ರಕರಣ ? 
ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಕೇಳಿದಾಗ, ಸಚಿವರು ಈ ಉತ್ತರ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ಶಬರಿಮಲೆ ದೇಗುಲದ (Shabarimala temple) ಗರ್ಭಗುಡಿಯ ವಾರ್ಷಿಕ ತೀರ್ಥೋದ್ಭವಕ್ಕಾಗಿ ದೇವಾಲಯ ತೆರೆದಾಗ ಸಚಿವರು ಕೈ ಮುಗಿದಿರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆರೋಪ ಮಾಡಿದ್ದಾರೆ. 

ಇದನ್ನೂ ಓದಿ :   Vegetable Price : ಗಗನಕ್ಕೇರುತ್ತಿರುವ ತರಕಾರಿ ಬೆಲೆ, ಆತಂಕಕ್ಕೀಡಾದ ಜನ ; ಈಗ ಸಿಗಲಿದೆ ರಿಲೀಫ್!

ದೇವಸ್ಥಾನಕ್ಕೆ ಸಚಿವರಿಂದ ಆಯಿತೇ ಅವಮಾನ ?
ಅರ್ಚಕರು ನೀಡಿದ ಪವಿತ್ರ ತೀರ್ಥವನ್ನು (holy water) ಸೇವಿಸುವ ಬದಲು ಅದನ್ನು ಸ್ಯಾನಿಟೈಸರ್ ತರಹ ಬಳಸುವ ಮೂಲಕ ದೇವಸ್ಥಾನದ ಪವಿತ್ರ ತೀರ್ಥಕ್ಕೆ ಅವಮಾನ ಮಾಡಲಾಗಿದೆ ಎನ್ನುವುದು ಭಕ್ತರ ಆರೋಪ.  ಸಚಿವರು ಪವಿತ್ರ ತೀರ್ಥವನ್ನು ಸೇವಿಸದೆ ಎರಡೂ ಕೈಗಳಿಗೆ ಉಜ್ಜಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗುತ್ತಿದೆ. ದೇವಾಲಯದ ಸಂಪ್ರದಾಯದಂತೆ, ಭಕ್ತರು ತೀರ್ಥವನ್ನು ಸೇವಿಸಬೇಕು ಮತ್ತು ಉಳಿದ ತೀರ್ಥವನ್ನು ತಲೆಯ ಮೇಲೆ ಸಿಂಪಡಿಸಬೇಕು.

ಘಟನೆಯ ಬಗ್ಗೆ ಸಚಿವರು ನೀಡಿದ ಸ್ಪಷ್ಟನೆ ಏನು ? 
ನಾನು ನನ್ನ ತಾಯಿಗೆ ಪ್ರತಿ ನಿತ್ಯ ಕೈ ಮುಗಿಯುವುದಿಲ್ಲ. ಇದರ ಅರ್ಥ ನಾನು ನನ್ನ ತಾಯಿಯನ್ನು ಗೌರವಿಸುವುದಿಲ್ಲ ಎಂದೇ ಎಂದು ಸಚಿವ ಕೆ. ರಾಧಾಕೃಷ್ಣನ್ (K Radhakrishnan) ಪ್ರಶ್ನಿಸಿದ್ದಾರೆ. ಇನ್ನು ಬಾಲ್ಯದಿಂದಲೂ ತನ್ನದೇ ಆದ ರೀತಿಯಲ್ಲಿ ನಡೆದುಕೊಂಡು ಬಂದಿದ್ದೇನೆ. ನಾನು  ಆ ಜಲವನ್ನು ಸೇವಿಸುವುದಿಲ್ಲ. ನಂಬಿಕೆಯ ಹೆಸರಿನಲ್ಲಿ ಯಾರಾದರೂ ಸ್ವೀಕರಿಸಲು ಹೇಳಿದರೂ ನಾನು ಹಾಗೆ ಮಾಡುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಆಲೋಚನೆಗಳಿರುತ್ತವೆ. ಆದರೆ ಇತರರ ನಂಬಿಕೆಯನ್ನು ತಪ್ಪು ಎಂದು ಕೂಡಾ ಯಾವತ್ತಿಗೂ ಹೇಳುವುದಿಲ್ಲ ಎಂದಿದ್ದಾರೆ. 

ಇದನ್ನೂ ಓದಿ:   ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News