ನವದೆಹಲಿ: ದೆಹಲಿ ಸರ್ಕಾರ ಮತ್ತೊಮ್ಮೆ ಕಾರ್ಮಿಕರಿಗಾಗಿ ದೊಡ್ಡ ಘೋಷಣೆ ಮಾಡಿದೆ. ಈ ಯೋಜನೆಯಡಿ ನೋಂದಾಯಿತ ಕಾರ್ಮಿಕರಿಗೆ 2,000 ರೂ.ನಿಂದ 2 ಲಕ್ಷ ರೂ.ಗಳವರೆಗೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸರ್ಕಾರ ಮತ್ತೊಮ್ಮೆ ಪುನರುಚ್ಚರಿಸಿದೆ. ಕಾರ್ಮಿಕರ ಮಕ್ಕಳ ಶಿಕ್ಷಣದಿಂದ ಹಿಡಿದು ಅವರ ಮದುವೆ ಖರ್ಚಿನವರೆಗೆ ಈ ಯೋಜನೆಯಡಿ ಸೌಲಭ್ಯ ಸಿಗಲಿದೆ.
ಕಾರ್ಮಿಕರ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಈ ಯೋಜನೆಯಡಿ ಸಹಾಯ ಮಾಡಲಾಗುವುದು. ಈ ಯೋಜನೆಯಡಿ ತಲೆಯ ಮೇಲಿನ ಇಟ್ಟಿಗೆ ಹೊರುವವರನ್ನು ಮಾತ್ರ ಲೇಬರ್ (Labour) ಎಂದು ಕರೆಯಲಾಗುವುದಿಲ್ಲ. ಆದರೆ 20ಕ್ಕೂ ಹೆಚ್ಚು ಕಾರ್ಮಿಕ ವರ್ಗಗಳು ಇದರಲ್ಲಿ ಭಾಗಿಯಾಗುತ್ತವೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಅದೇ ಸಮಯದಲ್ಲಿ ಕಾರ್ಮಿಕರು ಇನ್ನು ಮುಂದೆ ನೋಂದಣಿ ಪಡೆಯಲು ಕಾರ್ಮಿಕ ಇಲಾಖೆಯ ಸುತ್ತುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಕುಳಿತು ಈ ಕೆಲಸ ಮಾಡಬಹುದು ಎಂದವರು ತಿಳಿಸಿದರು.
ಯೋಜನೆಯ ವಿಭಾಗದಲ್ಲಿ ಇಂತಹ ಕಾರ್ಮಿಕರನ್ನು ಪರಿಗಣಿಸಲಾಗುತ್ತದೆ:
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಕಾನೂನಿನಡಿಯಲ್ಲಿ ನಿರ್ಮಾಣ ಕಾರ್ಮಿಕರ ವ್ಯಾಖ್ಯಾನವು ಸಾಕಷ್ಟು ದೊಡ್ಡದಾಗಿದೆ ಎಂದು ಹೇಳುತ್ತಾರೆ. ಇದರ ಅಡಿಯಲ್ಲಿ ಬಿಲ್ಡರ್, ಕೂಲಿ, ಮಿಸ್ತ್ರಿ, ಗಾರೆ ಕೆಲಸದವರು, ಟೈಲ್ಸ್ ಕೆಲಸದವರು, ಕಲ್ಲಿನ ಕೆಲಸದವರು, ಕಬ್ಬಿಣದ ಕೆಲಸದವರು, ಬಣ್ಣ ಹೊಡೆಯುವವರು, ವಾಚ್ ಮ್ಯಾನ್, ಪ್ಲಂಬರ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್ಮ್ಯಾನ್, ತೋಟದಲ್ಲಿ ಕೆಲಸ ಮಾಡುವವರು, ಬಾರ್ ಬೈಂಡರ್, ಕ್ರೇನ್ ಆಪರೇಟರ್ ಇತ್ಯಾದಿ ವರ್ಗಗಳಲ್ಲಿ ಬರುವವರನ್ನು ನಿರ್ಮಾಣ ಕಾರ್ಮಿಕ ವಿಭಾಗದಲ್ಲಿ ಸೇರಿಸಲಾಗಿದೆ.
ಕಾರ್ಮಿಕರಿಗೆ ಈ ಕೆಳಗಿನ ಸೌಲಭ್ಯಗಳು ಸಿಗುತ್ತವೆ :-
- ಕಾರ್ಮಿಕರ ಮಗ/ಮಗಳ ಮದುವೆಗೆ 35000 ರಿಂದ 51000 ರೂಪಾಯಿ
- ಅನಾರೋಗ್ಯಕ್ಕೆ ತುತ್ತಾದರೆ 2000 ರಿಂದ ಹತ್ತು ಸಾವಿರ ರೂ.
- ಮಾತೃತ್ವ ಲಾಭವಾಗಿ 30000 ರೂ.
- ಅರವತ್ತು ವರ್ಷಗಳ ನಂತರ ಮೂರು ಸಾವಿರ ಮಾಸಿಕ ಪಿಂಚಣಿ
- ಆಕಸ್ಮಿಕವಾಗಿ ಸಾವಿಗೀಡಾದರೆ ಎರಡು ಲಕ್ಷ ರೂಪಾಯಿ, ಸಹಜ ಸಾವಿಗೆ ಒಂದು ಲಕ್ಷ ರೂಪಾಯಿ ಮತ್ತು ಅಂತ್ಯಕ್ರಿಯೆಗೆ ಹತ್ತು ಸಾವಿರ ರೂಪಾಯಿ.
- ಅಂಗವೈಕಲ್ಯದ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ
- ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 500 ರಿಂದ ಹತ್ತು ಸಾವಿರ ರೂಪಾಯಿಗಳವರೆಗೆ ಮಾಸಿಕ ವಿದ್ಯಾರ್ಥಿವೇತನದ ಸೌಲಭ್ಯ ಸಿಗಲಿದೆ.
ವಾಣಿಜ್ಯ ನಗರಿಯಂತೆ ಬದಲಾಗಲಿದೆಯೇ ರಾಷ್ಟ್ರ ರಾಜಧಾನಿ, ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ
ದೆಹಲಿಯಲ್ಲಿ 10 ಲಕ್ಷ ಕಾರ್ಮಿಕರಿದ್ದು ಇದುವರೆಗೆ ಕೇವಲ 1.11 ಲಕ್ಷ ಕಾರ್ಮಿಕರು ಮಾತ್ರ ನೋಂದಣಿಯಾಗಿದ್ದಾರೆ. ಎಲ್ಲಾ ವರ್ಗದ ಕಾರ್ಮಿಕರಿಗೆ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ನೀಡಲು ಸರ್ಕಾರ ಬಯಸಿದೆ. ಆದರೆ ಇಲ್ಲಿಯವರೆಗೆ ಕೇವಲ ಒಂದು ಲಕ್ಷ ಹನ್ನೊಂದು ಸಾವಿರ ಕಾರ್ಮಿಕರನ್ನು ಮಾತ್ರ ನೋಂದಾಯಿಸಲಾಗಿದ್ದು, ದೆಹಲಿಯಲ್ಲಿ ಸುಮಾರು ಒಂದು ಮಿಲಿಯನ್ ನಿರ್ಮಾಣ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಎಲ್ಲಾ ಕಾರ್ಮಿಕರ ನೋಂದಣಿ ಮತ್ತು ನಿಯಮಿತ ನವೀಕರಣದ ಮೂಲಕ ಯೋಜನೆಗಳ ಪ್ರಯೋಜನಗಳನ್ನು ಎಲ್ಲರಿಗೂ ನೀಡಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದರು.
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಕಲರ್ ಕೋಡೆಡ್ ಸ್ಟಿಕ್ಕರ್ಗಳಿಲ್ಲದ ವಾಹನಗಳಿದ್ದರೆ ಎಚ್ಚರ...!
ಮನೆಯಿಂದಲೇ ನೋಂದಣಿ ಮಾಡಲು ಹೀಗೆ ಮಾಡಿ:
-1076 ಸಂಖ್ಯೆಗೆ ಕರೆ ಮಾಡಬೇಕು.
- ದೆಹಲಿ ಸರ್ಕಾರದ (Delhi Government) ಮನೆ ಬಾಗಿಲಿನ ವಿತರಣಾ ತಂಡದ ಸದಸ್ಯರೊಬ್ಬರು ಆ ನಿರ್ಮಾಣ ಕಾರ್ಮಿಕರ ಮನೆಗೆ ಬಂದು ಅವರಿಂದ ದಾಖಲೆಗಳನ್ನು ತೆಗೆದುಕೊಂಡು ಫಾರ್ಮ್ ಅನ್ನು ಭರ್ತಿ ಮಾಡುತ್ತಾರೆ. ಅಲ್ಲದೆ ಆ ದಾಖಲೆಗಳನ್ನು ಮತ್ತು ಕಾರ್ಮಿಕರ ಫೋಟೋವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
-ಅಪ್ಲಿಕೇಶನ್ ಅನ್ನು ಆನ್ಲೈನ್ನಲ್ಲಿ ಅನುಮೋದಿಸಲಾಗುವುದು.
-ನಿರ್ಮಾಣ ಕೆಲಸಗಾರನು ತನ್ನ ಪ್ರಮಾಣಪತ್ರವನ್ನು ಇಂಟರ್ನೆಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಅದನ್ನು ನಾಲ್ಕೈದು ದಿನಗಳಲ್ಲಿ ಅವರ ಮನೆಗೆ ಕಳುಹಿಸಲಾಗುತ್ತದೆ.