ನವದೆಹಲಿ: ದೇಶೀಯ ಕಂಪನಿಗಳು ಮತ್ತು ಹೊಸ ಉತ್ಪಾದನಾ ಸಂಸ್ಥೆಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಈ ನಿರ್ಧಾರದಿಂದಾಗಿ ನಿಧಾನಗತಿಯ ಆರ್ಥಿಕತೆ ಪುನಚ್ಚೇತನಗೊಳ್ಳಲಿದೆ ಎನ್ನಲಾಗುತ್ತಿದೆ.
ಒಂದೆಡೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ನಂತರ ಮಾರುಕಟ್ಟೆಗಳು ತಕ್ಷಣವೇ ಸೆನ್ಸೆಕ್ಸ್ 1000 ಅಂಕ ಮತ್ತು ನಿಫ್ಟಿ 11,067 ಮಾರ್ಕ್‌ಗಿಂತ ಮೇಲೇರಿದೆ. ಇದು ನಂತರ 2,100 ಪಾಯಿಂಟ್ ತಲುಪಿದೆ.
ಗೋವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ನೂತನ ಪರಿಣಾಮಕಾರಿ ತೆರಿಗೆ ದರವನ್ನು ಶೇಕಡ 30 ರಿಂದ 25.2 ಕ್ಕೆ ಇಳಿಸಲಾಗುವುದು, ಇದರಲ್ಲಿ ಎಲ್ಲಾ ಹೆಚ್ಚುವರಿ ಶುಲ್ಕಗಳು ಸೇರಿವೆ ಮತ್ತು ಯಾವುದೇ ಪ್ರೋತ್ಸಾಹವನ್ನು ಪಡೆಯದ ಕಂಪನಿಗಳಿಗೆ ಅನ್ವಯಿಸುತ್ತದೆ. ಆದಾಯ ತೆರಿಗೆ ಕಾಯ್ದೆ 1961ಕ್ಕೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯ ಮೂಲಕ ಈ ಬದಲಾವಣೆಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಬೆಳವಣಿಗೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ, 2019-20ರ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ನಿಬಂಧನೆಯನ್ನು ಸೇರಿಸಲಾಗಿದೆ' ಎಂದು ಹೇಳಿದರು. ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡಲು ಒಟ್ಟು ಆದಾಯವು ವರ್ಷಕ್ಕೆ 1.45 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಎಫ್ಪಿಐ ಕೈಯಲ್ಲಿರುವ ಉತ್ಪನ್ನಗಳನ್ನು ಒಳಗೊಂಡಂತೆ ಯಾವುದೇ ಭದ್ರತೆಯ ಮಾರಾಟದಿಂದ ಉಂಟಾಗುವ ಬಂಡವಾಳ ಲಾಭದ ಮೇಲೆ ಸೂಪರ್-ರಿಚ್ ತೆರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದರು.
ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಶೇಕಡಾ 5ಕ್ಕೆ ಇಳಿದಿದ್ದರಿಂದ ಬೇಡಿಕೆ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಸರ್ಕಾರ ಘೋಷಿಸಿದ ಕ್ರಮಗಳ ಜೊತೆಗೆ ಈ ಕ್ರಮಗಳು ಸೇರಿವೆ. ಆದಾಯ ಕಡಿತದ ಸ್ಥಿತಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು.