ಸ್ಟ್ರೀಟ್‌ ಫುಡ್‌ ಪ್ರಿಯರಿಗೆ ಬಿಗ್ ಶಾಕ್, ಮಯೋನೀಸ್‌ ನಿಷೇಧಿಸಿದ ಸರ್ಕಾರ..!

Mayonnaise ban : ಮಯೋನೀಸ್‌ ಬಳಕೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.. ಸ್ಟೀಟ್‌ ಫುಡ್‌ ಪ್ರೀಯರಿಗೆ ಶಾಕ್‌ ನೀಡಿದೆ.. ಮಯೋನೇಸ್‌ ಬಳಕೆಯನ್ನು ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Nov 1, 2024, 08:09 PM IST
    • ಮಯೋನೇಸ್ ಬಳಕೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ..
    • ಮಯೋನೇಸ್‌ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ..
    • ಕೆಲ ದಿನಗಳ ಹಿಂದೆ ರಾಜ್ಯ ಸರಕಾರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದರು.
ಸ್ಟ್ರೀಟ್‌ ಫುಡ್‌ ಪ್ರಿಯರಿಗೆ ಬಿಗ್ ಶಾಕ್,  ಮಯೋನೀಸ್‌ ನಿಷೇಧಿಸಿದ ಸರ್ಕಾರ..! title=

Govt ban Mayonnaise : ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಮಯೋನೀಸ್‌ ಅನ್ನು ನಿಷೇಧಿಸಲು ನಿರ್ಧರಿಸಿತ್ತು. ಜನರ ಪ್ರಾಣ ತೆಗೆಯುತ್ತಿರುವ ಈ ಪದಾರ್ಥವನ್ನು ನಿಷೇಧಿಸುವಂತೆ ಜಿಎಚ್‌ಎಂಸಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ತೆಲಂಗಾಣ ಸರಕಾರಕ್ಕೆ ಪತ್ರ ಬರೆದಿದ್ದರು. 

ಬಂಜಾರಾ ಹಿಲ್ಸ್ ನ ನಂದಿನಗರದ ಬಸ್ತಿಯಲ್ಲಿ ಮಹಿಳೆಯೊಬ್ಬರು ಮೊಮೊಸ್ ತಿಂದು ಸಾವನ್ನಪ್ಪಿದ್ದರು. ಅಲ್ಲದೆ, ಹೈದರಾಬಾದ್‌ನ ಹಲವೆಡೆ ಮಯೋನೀಸ್‌ ಬಳಕೆಯಿಂದ ಗ್ರಾಹಕರು ತೀವ್ರ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಾಮೋದರ ರಾಜನರಸಿಂಹ ಅವರು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಈ ಹಣ್ಣಿನ ಸಿಪ್ಪೆ ಬೇಯಿಸಿದ ನೀರು ಕುಡಿದರೆ ದುಂಡು ಹೊಟ್ಟೆ ವಾರದಲ್ಲಿಯೇ ಚಪ್ಪಟ್ಟೆಯಾಗುವುದು !ಕ್ಯಾನ್ಸರ್ ನಿಂದಲೂ ನೀಡುವುದು ಮುಕ್ತಿ

ಪರಿಶೀಲನೆ ವೇಳೆ ಮಯೋನೀಸ್‌ನಿಂದ ಆಹಾರ ವಿಷವಾಗುತ್ತಿದೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಅದಕ್ಕಾಗಿ ನಿಷೇಧದ ನಿರ್ಧಾರ ಕೈಗೊಂಡಿದ್ದರು. ಇದೀಗ ತೆಲಂಗಾಣದಲ್ಲಿ ಮಯೋನೀಸ್‌ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಬುಧವಾರ ಆದೇಶ ಹೊರಡಿಸಿದ್ದಾರೆ. 

ಈ ನಿಷೇಧ ಒಂದು ವರ್ಷದವರೆಗೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಿಎಚ್‌ಎಂಸಿ ವ್ಯಾಪ್ತಿಯಲ್ಲಿ ಕಲುಷಿತ ಮತ್ತು ಕಲಬೆರಕೆ ಮಯೋನೇಸ್‌ನ ತಿಂದು ಅನೇಕ ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಇದನ್ನೂ ಓದಿ:ನೆಗಡಿಯಿಂದ ಮೂಗು ಕಟ್ಟಿದೆಯೇ... ಈ ಹಣ್ಣಿನ ಸಿಪ್ಪೆಯ ಚಹಾ ಕುಡಿದರೆ 10 ನಿಮಿಷದಲ್ಲೇ ಸರಿಯಾಗುವುದು!

ಅಲ್ಲದೆ, ಮಯೋನೀಸ್‌ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಬಹುದು. ಮಧುಮೇಹ, ಅಧಿಕ ತೂಕ, ಅಧಿಕ ರಕ್ತದೊತ್ತಡ, ಹೃದ್ರೋಗ, ತಲೆನೋವು, ವಾಕರಿಕೆ ಮುಂತಾದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿ ಹೃದ್ರೋಗದ ಅಪಾಯವನ್ನು ಉಂಟಾಗಬಹುದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News