Tejashwi Yadav: 'ಅನ್ನದಾತರಿಗಾಗಿ ನಾನು ಗಲ್ಲಿಗೇರಲೂ ಸಿದ್ಧ, ತಾಕತ್ತಿದ್ದರೆ ಅರೆಸ್ಟ್ ಮಾಡಿ'

ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ  ನಿತೀಶ್ ಕುಮಾರ್ ಅವರಿಗೆ ಸವಾಲು

Last Updated : Dec 6, 2020, 04:58 PM IST
  • ರೈತರಿಗಾಗಿ ನಾವು ಗಲ್ಲಿಗೇರಲೂ ಸಿದ್ಧ, ಸಾಧ್ಯವಾದರೆ ನಮ್ಮನ್ನು ಬಂಧಿಸಿ
  • ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸವಾಲು
  • ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಇಡೀ ದೇಶದ ರೈತರು ಕಳೆದ 11 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ
Tejashwi Yadav: 'ಅನ್ನದಾತರಿಗಾಗಿ ನಾನು ಗಲ್ಲಿಗೇರಲೂ ಸಿದ್ಧ, ತಾಕತ್ತಿದ್ದರೆ ಅರೆಸ್ಟ್ ಮಾಡಿ' title=

ಬಿಹಾರ: "ರೈತರಿಗಾಗಿ ನಾವು ಗಲ್ಲಿಗೇರಲೂ ಸಿದ್ಧ, ಸಾಧ್ಯವಾದರೆ ನಮ್ಮನ್ನು ಬಂಧಿಸಿ" ಎಂದು ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿ  ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಇಡೀ ದೇಶದ ರೈತರು ಕಳೆದ 11 ದಿನಗಳಿಂದ ದೆಹಲಿ(Dehli)ಯಲ್ಲಿ  ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ನಡುವೆ ಬಿಹಾರದ ವಿರೋಧ ಪಕ್ಷವಾದ ಮಹಾಘಟಬಂಧನ್ ಮೈತ್ರಿಕೂಟದ ನಾಯಕರೂ ಸಹ ರೈತರ ಪರವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.

ತಪ್ಪದೆ ಓದಿ: 2021 ರಲ್ಲಿ ರಜಾ ದಿನಗಳ ಭಡಿಮಾರ, ಇಲ್ಲಿದೆ Holidays List 2021

ಆದರೆ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಅನುಮತಿಯಿಲ್ಲದೆ ಪ್ರತಿಭಟಿಸಿದ್ದಕ್ಕಾಗಿ ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಮತ್ತು ಮಹಾಘಟಬಂಧನ್‌ನ ಇತರ 18 ನಾಯಕರ ವಿರುದ್ಧ ಬಿಹಾರ ಸರ್ಕಾರ ಪ್ರಕರಣ ದಾಖಲಿಸಿದೆ.

ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿಗೆ ಸೋಲು

ಬಿಹಾರ ಸರ್ಕಾರ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳ ಕುರಿತು ಮಾತನಾಡಿರುವ ತೇಜಸ್ವಿ ಯಾದವ್, "ಹೇಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ರೈತರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ಅವರು ಬಂಧಿಸಲು ಸಿದ್ದರಿದ್ದರೆ ನಾನೇ ಶರಣಾಗುತ್ತೇನೆ, ರೈತರಿಗಾಗಿ ನಾನು ಗಲ್ಲಿಗೇರಲು ಸಿದ್ಧವಾಗಿದ್ದೇನೆ" ಎಂದು ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ Corona Vaccineನ ತುರ್ತು ಬಳಕೆಗೆ ಅನುಮತಿ ಕೋರಿದ Pfizer

ಇದಕ್ಕೂ ಮುನ್ನ ಆರ್‌ಜೆಡಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಅಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ವ್ಯಂಗ್ಯವಾಡಿದೆ. ಆ ಸಭೆಯಲ್ಲಿ ಆರೋಗ್ಯ ಸಚಿವ ಮಂಗಲ್ ಪಾಂಡೆ ಸೇರಿದಂತೆ ಇತರರು ಭಾಗವಹಿಸಿದ್ದರು ಎಂಬುದನ್ನು ಎತ್ತಿ ತೋರಿಸಿದ ಪಕ್ಷವು, "ಆಡಳಿತಾರೂಡ ಸಮ್ಮಿಶ್ರ ಸರ್ಕಾರವು ಕೊರೋನಾ ಕಾರಣ ನೀಡಿ ವಿರೋಧ ಪಕ್ಷದ ನಾಯಕರ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಆದರೆ, ಅವರ ಸಭೆಗಳಲ್ಲಿ ಯಾವುದೇ ಕೊರೋನಾ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಿಲ್ಲ. ಇದಕ್ಕೆ ಯಾವ ಪ್ರಕರಣ?" ಎಂದು ಟೀಕಿಸಿದೆ.

Covid-19ಗೆ ಔಷಧಿ ಕಂಡು ಹಿಡಿದ ವಿಜ್ಞಾನಿಗಳು, ಕೇವಲ 24ಗಂಟೆಗಳಲ್ಲಿ ರೋಗಿಗಳು ಗುಣಮುಖರಾಗುತ್ತಾರಂತೆ

Trending News