ಫರೀದಾಬಾದ್: ಟಾಟಾ ಸ್ಟೀಲ್ ಮ್ಯಾನೇಜರ್ ಕೊಲೆ

ಮ್ಯಾನೇಜರ್ ಅರವಿಂದಮ್ ಪಲ್ ಅವರನ್ನು ಮಾಜಿ ನೌಕರ ವಿಶ್ವನಾಥ್ ಪಾಂಡೆ ಗುಂಡು ಹಾರಿಸಿ ಕೊಂದಿದ್ದಾನೆ.

Last Updated : Nov 10, 2018, 01:04 PM IST
ಫರೀದಾಬಾದ್: ಟಾಟಾ ಸ್ಟೀಲ್ ಮ್ಯಾನೇಜರ್ ಕೊಲೆ title=
Pic: ANI

ಫರೀದಾಬಾದ್: ಟಾಟಾ ಸ್ಟೀಲ್ ಕಂಪನಿಯ ಹಿರಿಯ ಮ್ಯಾನೇಜರ್ ಗೆ ಕಂಪನಿಯ ಮಾಜಿ ನೌಕರನೊಬ್ಬ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಕಂಪನಿಯ ಆವರಣದಲ್ಲಿ ಶುಕ್ರವಾರ ನಡೆದಿದೆ. 

ಶುಕ್ರವಾರ ಮಧ್ಯಾಹ್ನ ಸುಮಾರು 1.10ಕ್ಕೆ ಫರೀದಾಬಾದ್ ನ ಕಚೇರಿಯಲ್ಲಿ ಮ್ಯಾನೇಜರ್ ಅರವಿಂದಮ್ ಪಲ್ ಅವರನ್ನು ಮಾಜಿ ನೌಕರ ವಿಶ್ವನಾಥ್ ಪಾಂಡೆ ಗುಂಡು ಹಾರಿಸಿ ಕೊಂದಿದ್ದಾನೆ. ಕೂಡಲೇ ಅರವಿಂದಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯವೇ ಕೊನೆಯುಸಿರೆಳೆದಿದ್ದಾರೆ ಎಂದು  ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.

ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಕಂಪನಿಯಲ್ಲಿ ಪಾಂಡೆ, 2015ರಿಂದ 2018ರ ವರೆಗೆ ಕೆಲಸ ಮಾಡಿದ್ದ, ಈ ವರ್ಷದ ಆಗಸ್ಟ್ ತಿಂಗಳಿನಿಂದ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅರವಿಂದ್ ದೇಹದೊಳಗೆ ಐದು ಬುಲೆಟ್ ಗಳು ಹೊಕ್ಕಿದ್ದವು ಎಂದು ಮತನೋತ್ತ್ರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. 
 

Trending News