ಬಿಜ್ನೋರ್: ಪೆಟ್ರೊರಾಸಾಯನಿಕ ಫ್ಯಾಕ್ಟರಿನಲ್ಲಿ ಮೀಥೇನ್ ಅನಿಲ ಟ್ಯಾಂಕ್ ಬ್ಲಾಸ್ಟ್, 6 ಸಾವು

ಬೆಂಕಿ ಅವಘಡದ ಸುದ್ದಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

Last Updated : Sep 12, 2018, 10:12 AM IST
ಬಿಜ್ನೋರ್: ಪೆಟ್ರೊರಾಸಾಯನಿಕ ಫ್ಯಾಕ್ಟರಿನಲ್ಲಿ ಮೀಥೇನ್ ಅನಿಲ ಟ್ಯಾಂಕ್ ಬ್ಲಾಸ್ಟ್, 6 ಸಾವು title=
ಸಾಂದರ್ಭಿಕ ಚಿತ್ರ

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿಯ ಅವಘಡ ಸಂಭವಿಸಿದೆ. ಬಿಜ್ನೋರ್-ಮೊಹಿತ್ ಪೆಟ್ರೊ ಕೆಮಿಕಲ್ ಫ್ಯಾಕ್ಟರಿನಲ್ಲಿ ಮೀಥೇನ್ ಅನಿಲದ ಟ್ಯಾಂಕ್ ಬ್ಲಾಸ್ಟ್ ಆಗಿದ್ದು, ಅದರಿಂದ ಇಡೀ ಕಾರ್ಖಾನೆ ಹೊತ್ತಿ ಉರಿದಿದೆ ಎಂದು ಹೇಳಲಾಗಿದೆ. ಕಾರ್ಖಾನೆಯಲ್ಲಿ ಬೆಂಕಿ ತಗುಲಿರುವ ಸುದ್ದಿ ತಿಳಿದ ನಂತರ ಅಲ್ಲಿ ಕೆಲಸ ಮಾಡುವವರಲ್ಲಿ ಆತಂಕ ಉಂಟಾಯಿತು.

6 ಕಾರ್ಮಿಕರ ಸಾವು:
ಬೆಂಕಿ ಅವಘಡದ ಸುದ್ದಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಬೆಂಕಿ ಅವಘಡದಲ್ಲಿ ಇಲ್ಲಿಯವರೆಗೆ ಆರು ಮಂದಿ ಮೃತಪಟ್ಟಿರುವ ಬಗ್ಗೆ ಆಡಳಿತಾಧಿಕಾರಿಗಳು ದೃಢಪಡಿಸಿದ್ದಾರೆ. ೮ ಮಂದಿ ಗಾಯಗೊಂಡಿರುವ ಬಗ್ಗೆ ವರದಿಗಳಾಗಿವೆ. ಅದೇ ಸಮಯದಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

Trending News