ತೆಲಂಗಾಣದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ತಮಿಳಿಸೈ ಸುಂದರರಾಜನ್ ಪ್ರಮಾಣ ವಚನ

 ಹೈದರಾಬಾದ್‌ನ ರಾಜ್ ಭವನದಲ್ಲಿ ತೆಲಂಗಾಣದ ಮೊದಲ ಮಹಿಳಾ ಗವರ್ನರ್ ಆಗಿ ತಮಿಳಿಸೈ ಸುಂದರರಾಜನ್ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

Last Updated : Sep 8, 2019, 05:29 PM IST
ತೆಲಂಗಾಣದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ತಮಿಳಿಸೈ ಸುಂದರರಾಜನ್ ಪ್ರಮಾಣ ವಚನ  title=
file photo

ನವದೆಹಲಿ:  ಹೈದರಾಬಾದ್‌ನ ರಾಜ್ ಭವನದಲ್ಲಿ ತೆಲಂಗಾಣದ ಮೊದಲ ಮಹಿಳಾ ಗವರ್ನರ್ ಆಗಿ ತಮಿಳಿಸೈ ಸುಂದರರಾಜನ್ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.

ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಅವರು ಸೌಂದರರಾಜನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಐವತ್ತೆಂಟು ವರ್ಷದ ಸೌಂದರರಾಜನ್ ತಮಿಳುನಾಡಿನ ಮಾಜಿ ಬಿಜೆಪಿ ಮುಖ್ಯಸ್ಥೆ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಸೆಪ್ಟೆಂಬರ್ 1 ರಂದು ರಾಷ್ಟ್ರಪತಿಗಳು 2014 ರ ಜೂನ್ 2 ರಂದು ರಚನೆಯಾದ ತೆಲಂಗಾಣದ ಎರಡನೇ ರಾಜ್ಯಪಾಲರಾಗಿ ಅವರನ್ನು ನೇಮಕ ಮಾಡಿದರು. ಇದಕ್ಕೂ ಮೊದಲು ಇ ಎಸ್ ಎಲ್ ನರಸಿಂಹನ್ ಅವರು ಈ ಹುದ್ದೆಯನ್ನು ಅಲಂಕರಿಸಿದ್ದರು.

ನೂತನ ರಾಜ್ಯಪಾಲರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು.

 
 

Trending News