Suspicious Drone: ಬಾರ್ಡರ್ ನಲ್ಲಿ ಕಂಡ ಅನುಮಾನಾಸ್ಪದ ಡ್ರೋನ್, ಆತಂಕಕ್ಕೊಳಗಾದ ಗ್ರಾಮಸ್ಥರು

Suspicious Drone Spotted: ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಗಡಿ ಗ್ರಾಮಗಳಲ್ಲಿ ಪಾಕಿಸ್ತಾನದ ಒಂದು ಅನುಮಾನಾಸ್ಪದ ಡ್ರೋನ್ ಅನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಕೂಡಲೇ ಭದ್ರತಾ ಪಡೆಗಳಿಗೆ ಮಾಹಿತಿಯನ್ನು ನೀಡಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.   

Written by - Nitin Tabib | Last Updated : Sep 18, 2022, 07:19 PM IST
  • ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಶನಿವಾರ ಅನುಮಾನಾಸ್ಪದ ಡ್ರೋನ್ ಕಾಣಿಸಿಕೊಂಡ ಹಿನ್ನೆಲೆ ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ.
  • ಡ್ರೋನ್ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಂತಾರಾಷ್ಟ್ರೀಯ ಗಡಿಯ ಹಲವು ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
Suspicious Drone: ಬಾರ್ಡರ್ ನಲ್ಲಿ ಕಂಡ ಅನುಮಾನಾಸ್ಪದ ಡ್ರೋನ್, ಆತಂಕಕ್ಕೊಳಗಾದ ಗ್ರಾಮಸ್ಥರು title=
suspicious drone spotted

Suspicious Drone Spotted: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಶನಿವಾರ ಅನುಮಾನಾಸ್ಪದ ಡ್ರೋನ್ ಕಾಣಿಸಿಕೊಂಡ ಹಿನ್ನೆಲೆ ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ. ಡ್ರೋನ್ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಂತಾರಾಷ್ಟ್ರೀಯ ಗಡಿಯ ಹಲವು ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಶಂಕಿತ ಡ್ರೋನ್ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ತನಿಖೆ ನಡೆಸಿದ ಭದ್ರತಾ ಪಡೆಗಳಿಗೆ ಇದುವರೆಗೆ ಯಾವುದೇ ಆಕ್ಷೇಪಾರ್ಹ ವಸ್ತು ಕಂಡುಬಂದಿಲ್ಲ ಎನ್ನಲಾಗಿದೆ.

ಶನಿವಾರ ರಾತ್ರಿ 7.30ರ ಸುಮಾರಿಗೆ ಆರಂಭವಾದ ಈ ಶೋಧ ಕಾರ್ಯಾಚರಣೆ ಭಾನುವಾರ ಬೆಳಗ್ಗೆ 9 ಗಂಟೆಯವರೆಗೂ ನಡೆದಿದ್ದು, ಈ ಅವಧಿಯಲ್ಲಿ ಯಾವುದೇ ದೋಷಾರೋಪಣೆಯ ವಸ್ತು ಪತ್ತೆಯಾಗಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಕಾರ್ಯಾಚರಣೆ) ಗರುರಾಮ್ ಭಾರದ್ವಾಜ್ ತಿಳಿಸಿದ್ದಾರೆ. "ಅನುಮಾನಾಸ್ಪದ ಹಾರುವ ವಸ್ತು" ವರದಿಯಾಗಿದೆ ಮತ್ತು ಇದು ಶನಿವಾರ ಸಂಜೆ 7.25 ರ ಸುಮಾರಿಗೆ ಸಾಂಬಾದಿಂದ ದಕ್ಷಿಣಕ್ಕೆ 10 ಕಿಮೀ ದೂರದಲ್ಲಿರುವ ರೀಗಲ್ ಪೋಸ್ಟ್ ಬಳಿಯ ಸಾರಥಿ ಕಲಾನ್, ಡೇರಾ ಮತ್ತು ಮಾಡೂನ್ ಗ್ರಾಮಗಳ ಮೇಲೆ ಐದು ನಿಮಿಷಗಳ ಕಾಲ ಹಾರಾಟ ನಡೆಸಿರುವ ಪಾಕಿಸ್ತಾನದ ಡ್ರೋನ್ ಆಗಿದೆ ಎನ್ನಲಾಗಿದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-PFI ಗೆ ಸಂಬಂಧಿಸಿದ 40 ಠಿಕಾಣಿಗಳ ಮೇಲೆ NIA ದಾಳಿ, ಆಂಧ್ರ-ತೆಲಂಗಾಣದಿಂದ ನಾಲ್ವರ ಬಂಧನ

5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧಕಾರ್ಯ ನಡೆಸಲಾಗಿದೆ
ಡ್ರೋನ್‌ ಮೂಲಕ ಯಾವುದೇ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಅಥವಾ ಮಾದಕವಸ್ತುಗಳನ್ನು ಕೆಳಗೆ ಇಲಿಸಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಆರ್‌ಪಿಎಫ್‌ನೊಂದಿಗೆ ತಕ್ಷಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. “ತಡರಾತ್ರಿಯವರೆಗೆ ಶೋಧ ಕಾರ್ಯಾಚರಣೆ ನಡೆಯಿತು ಮತ್ತು ಬೆಳಗಿನ ಜಾವದಲ್ಲಿಯೂ ಕೂಡ ಅದನ್ನು ತಕ್ಷಣ ಪುನರಾರಂಭಿಸಲಾಯಿತು. ಉಲ್ಲೇಖಿಸಲಾದ ಸೈಟ್‌ನ ಸಂಪೂರ್ಣ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹುಡುಕಾಟಗಳನ್ನು ನಡೆಸಲಾಯಿತು. ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ಚಕ್ವಾಲ್ ಮತ್ತು ಬಂಡಾರಾಲಿ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶೋಧ ಕಾರ್ಯಾಚರಣೆಯ ನೇತೃತ್ವವನ್ನು ತಾವೇ ಖುದ್ದಾಗಿ ವಹಿಸಿರುವುದಾಗಿ" ಭಾರದ್ವಾಜ್ ಹೇಳಿದ್ದಾರೆ.

ಇದನ್ನೂ ಓದಿ-Congress President: ಕಾಂಗ್ರೆಸ್ ಅಧ್ಯಕ್ಷ ರೇಸ್ ನಲ್ಲಿ ರಾಹುಲ್ ಸ್ಥಾನ ಯಾವುದು? ಯಾರು ಪರ-ವಿರೋಧ?

ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳ ಸಾಗಾಟ
ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಗಳು ಕಣ್ಗಾವಲು ಹೆಚ್ಚಿಸಿದ ಬಳಿಕೆ ಪಾಕಿಸ್ತಾನದಲ್ಲಿ ಅವಿತು ಕುಳಿತಿರುವ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿದ  ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಕಣಿವೆಯಲ್ಲಿ ಇಂತಹ ಹಲವು ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಭಯೋತ್ಪಾದಕರು ಭಾರತದೊಳಗೆ ಇತರ ಆಕ್ಷೇಪಾರ್ಹ ವಸ್ತುಗಳನ್ನು ಕಳುಹಿಸಲು ಕೂಡ ಡ್ರೋನ್‌ಗಳನ್ನು ಬಳಸುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News