12 ಸಂಸದರ ಅಮಾನತು ಎಂದರೆ ಜನರ ಧ್ವನಿಯನ್ನು ಹತ್ತಿಕ್ಕುವುದು: ರಾಹುಲ್ ಗಾಂಧಿ

Suspension of 12 MPs: 12 ರಾಜ್ಯಸಭಾ ಸಂಸದರ ಅಮಾನತು "ಭಾರತದ ಜನರ ಧ್ವನಿಯನ್ನು ಹತ್ತಿಕ್ಕುವದರ ಸಂಕೇತ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬಣ್ಣಿಸಿದ್ದಾರೆ.  

Edited by - Zee Kannada News Desk | Last Updated : Dec 14, 2021, 04:04 PM IST
  • 12 ರಾಜ್ಯಸಭಾ ಸಂಸದರ ಅಮಾನತು "ಭಾರತದ ಜನರ ಧ್ವನಿಯನ್ನು ಹತ್ತಿಕ್ಕುವುದರ ಸಂಕೇತ" ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
  • ಸಂಸತ್ತಿನಲ್ಲಿ ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
  • ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.
12 ಸಂಸದರ ಅಮಾನತು ಎಂದರೆ ಜನರ ಧ್ವನಿಯನ್ನು ಹತ್ತಿಕ್ಕುವುದು: ರಾಹುಲ್ ಗಾಂಧಿ title=
ರಾಹುಲ್ ಗಾಂಧಿ

ನವದೆಹಲಿ: 12 ರಾಜ್ಯಸಭಾ ಸಂಸದರ ಅಮಾನತು "ಭಾರತದ ಜನರ ಧ್ವನಿಯನ್ನು ಹತ್ತಿಕ್ಕುವುದರ ಸಂಕೇತ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬಣ್ಣಿಸಿದ್ದಾರೆ. ಸಂಸತ್ತಿನಲ್ಲಿ ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. 

ವಿಜಯ್ ಚೌಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 12 ಸಂಸದರ ಅಮಾನತು ಭಾರತದ ಜನರ ಧ್ವನಿಯನ್ನು ಹತ್ತಿಕ್ಕುವುದರ ಸಂಕೇತವಾಗಿದೆ. ಅವರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ. ಸಂಸತ್ತಿನಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಿ ಎಂದು ಹೇಳಿದ್ದಾರೆ.
 
ಸಂಸತ್ತಿನಲ್ಲಿ ಗದ್ದಲದ ಮಧ್ಯೆ ವಿಧೇಯಕ ಅಂಗೀಕಾರವಾಗುತ್ತಿದೆ. ಇದು ಸಂಸತ್ತನ್ನು ನಡೆಸುವ ವಿಧಾನವಲ್ಲ. ಪ್ರಧಾನಿ ಸದನಕ್ಕೆ ಬರುವುದಿಲ್ಲ. ರಾಷ್ಟ್ರೀಯ ಮಹತ್ವದ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶವಿಲ್ಲ. ಇದು ದುರದೃಷ್ಟಕರ. ಪ್ರಜಾಪ್ರಭುತ್ವದ ಹತ್ಯೆ ಎಂದು  ಅವರು ಹೇಳಿದ್ದಾರೆ.

ಸಚಿವರೊಬ್ಬರು ರೈತರನ್ನು ಕೊಂದಿದ್ದಾರೆ. ಪ್ರಧಾನಿಗೆ ಗೊತ್ತಿದೆ. 2-3 ಬಂಡವಾಳಶಾಹಿಗಳು ರೈತರ ವಿರುದ್ಧ ಎಂಬುದು ಸತ್ಯ. ಈ ಸಂಸದರನ್ನು ರಾಜ್ಯಸಭಾ ಅಧ್ಯಕ್ಷರಾಗಲಿ, ಪ್ರಧಾನಿಯಾಗಲಿ ಅಮಾನತು ಮಾಡಿಲ್ಲ ಎಂದಿದ್ದಾರೆ.

12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಉಭಯ ಸದನಗಳ ವಿರೋಧ ಪಕ್ಷದ ನಾಯಕರು ಸಂಸತ್ತಿನಿಂದ ವಿಜಯ್ ಚೌಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಏತನ್ಮಧ್ಯೆ, 12 ಸಂಸದರನ್ನು ಸದನದಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯುವಂತೆ ಕೋರಿ ಪ್ರತಿಪಕ್ಷಗಳು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. 12 ಸದಸ್ಯರ ಅಮಾನತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನದಿಂದಲೂ ಮೇಲ್ಮನೆ ನಿರಂತರ ಮುಂದೂಡಿಕೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಸಾವಿರ ಕೋಟಿ ಒಡೆಯನಿಗೆ ಕೈಹಿಡಿಯದ ಅದೃಷ್ಟ: ‘ಕೆಜಿಎಫ್ ಬಾಬು’ಗೆ ಹೀನಾಯ ಸೋಲು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News