ಕಳೆದ 6 ತಿಂಗಳಿನಿಂದ Depressionಗೆ ಒಳಗಾಗಿದ್ದರಂತೆ Shushant, ಏನಿದರ ಲಕ್ಷಣಗಳು?

 ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ತನ್ನ 34ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

Last Updated : Jun 14, 2020, 09:16 PM IST
ಕಳೆದ 6 ತಿಂಗಳಿನಿಂದ Depressionಗೆ ಒಳಗಾಗಿದ್ದರಂತೆ Shushant, ಏನಿದರ ಲಕ್ಷಣಗಳು? title=

ನವದೆಹಲಿ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ತನ್ನ 34ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಭಾನುವಾರ ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ಅವರ ಸಾವಿನಿಂದ ಇಡೀ ಬಾಲಿವುಡ್ ಶೋಕಸಾಗರದಲ್ಲಿ ಮುಳುಗಿದೆ. ಸುಶಾಂತ್ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಸುಶಾಂತ್ ಕಳೆದ 6 ತಿಂಗಳಿನಿಂದ ಡಿಪ್ರೆಶನ್ ಗೆ ಗುರಿಯಾಗಿದ್ದರು ಎಂದಿದ್ದಾರೆ. ಯಾವ ಕಾರಣಕ್ಕೆ ಸುಶಾಂತ್ ಡಿಪ್ರೆಶನ್ ಗೆ ಗುರಿಯಾಗಿದ್ದರು ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

ತಮ್ಮ ಕೊನೆಯ ಪೋಸ್ಟ್ ನಲ್ಲಿ ಸುಶಾಂತ್ ತಮ್ಮ ತಾಯಿಯವರಿಗೆ ಪತ್ರವೊಂದನ್ನು ಬರೆದಿದ್ದರು. ಈ ಪೋಸ್ಟ್ ನಲ್ಲಿ ಸುಶಾಂತ್, "ಆಂಸುವೊಂಸೆ ವಾಪ್ಶಿತ್ ಹೋತಾ ಅತೀತ್, ಮುಸ್ಕುರಾಹಟ್ ಕೆ ಏಕ್ ಆರ್ಕ್ ಕೋ ಉಕೆರ್ತೆ ಸಪನೇ ಔರ್ ಏಕ್ ಕ್ಷಣಭಂಗೂರ್ ಜೀವನ್, ದೋನೋ ಕೆ ಬೀಚ್ ಬಾತ್ ಚೀತ್' ಎಂದು ಬರೆದಿದ್ದರು. ಸುಶಾಂತ್ ಕೇವಲ 16 ವರ್ಷದವರಿದ್ದಾಗ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ.

ಯಾವುದೇ ಓರ್ವ ವ್ಯಕ್ತಿಗೆ ಭಾವನಾತ್ಮಕವಾಗಿ ಗಂಭೀರವಾಗಿ ಗಾಯಗೊಂದರೆ ಮಾತ್ರ ಡಿಪ್ರೆಶನ್ ನಲ್ಲಿ ಆತ್ಮಹತ್ಯೆಯ ಸ್ಟೇಜ್ ಬರುತ್ತದೆ. ಯಾವುದೇ ಓರ್ವ ನಟನ ಜೀವನದಲ್ಲಿ ದುಃಖ ಇರುವುದಿಲ್ಲ ಎಂದು ಭಾವಿಸುವುದು ತಪ್ಪು. ಪ್ರತಿಯೊಬ್ಬ ವ್ಯಕ್ತಿ ಮೊದಲು ಓರ್ವ ಮನುಷ್ಯನಾಗಿರುತ್ತಾನೆ ನಂತರ ಆತ ಓರ್ವ ಚಿತ್ರನಟನಾಗಿರುತ್ತಾನೆ. ಎಂದು ಮನೋವೈದ್ಯರು ಹೇಳಿದ್ದಾರೆ.

ಈ ಕುರಿತು ಈ ವರ್ಷದ ಜನವರಿಯಲ್ಲಿ ವರದಿಯೊಂದನ್ನು ಜಾರಿಗೊಳಿಸಿರುವ WHO, ಡಿಪ್ರೆಶನ್ ಒಂದು ಸಾಮಾನ್ಯ ಮೆಂಟಲ್ ಡಿಸ್ ಆರ್ಡರ್ ಆಗಿದೆ ಎಂದು ಹೇಳಿದೆ. ಅಂದರೆ, ಇದೊಂದು ಗಂಭೀರ ಮಾನಸಿಕ ರೋಗವಾಗಿದೆ. ಈ ರೋಗದಿಂದ ಬಳಲುತ್ತಿರುವವರಲ್ಲಿನ ಸ್ಟ್ರೆಸ್ಅವರನ್ನು ಸಾವಿನೆಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ. ಇಡೀ ವಿಶ್ವಾದ್ಯಂತ ಸುಮಾರು 26 ಕೋಟಿ ಜನರು ಡಿಪ್ರೆಶನ್ ನಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.

ಅಷ್ಟೇ ಅಲ್ಲ ಪುರುಷರ ಹೋಲಿಕೆಯಲ್ಲಿ ಮಹಿಳೆಯರು ಡಿಪ್ರೆಶನ್ ಗೆ ಹೆಚ್ಚು ಒಳಗಾಗುತ್ತಾರೆ ಎಂದೂ ಕೂಡ ವರದಿ ಹೇಳಿದೆ. ಸಮಯ ಇರುವಂತೆ ಈ  ಗಂಭೀರ ರೋಗವನ್ನು ನಿಯಂತ್ರಣಕ್ಕೆ ತರದೇ ಹೋದಲ್ಲಿ, ಜನರು ತಮ್ಮ ಪ್ರಾಣದ ಭಯ ತೊರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸೈಕಾಲಾಜಿಕಲಿ ಹಾಗೂ ಫಾರ್ಮಾಕೋಲಾಜಿಕಲ್ ಮೂಲಕ ಡಿಪ್ರೆಶನ್ ಚಿಕಿತ್ಸೆ ಮಾಡಬಹುದಾಗಿದೆ.

WHO ವರದಿಯ ಪ್ರಕಾರ ಡಿಪ್ರೆಶನ್ ಹಿನ್ನೆಲೆ ಪ್ರತಿವರ್ಷ ಸುಮಾರು 8 ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ. 15 ರಿಂದ 29 ವರ್ಷ ವಯಸ್ಸಿನ ಒಳಗಿನವರು ಇದಕ್ಕೆ ಹೆಚ್ಚು ಒಳಗಾಗುತ್ತಾರೆ . ಆಕಸ್ಮಿಕವಾಗಿ ಸಂಭವಿಸುವ ಹಲವು ಘಟನೆಗಳ ಕಾರಣ ಮನುಷ್ಯ ಡಿಪ್ರೆಶನ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತದೆ.

Trending News