ರಾಹುಲ್ ಗಾಂಧಿ ಹೇಳಿಕೆ ತಿರುಚಿದ ವಿಡಿಯೋ ಪ್ರಕರಣ: ZEE News ಆ್ಯಂಕರ್ ಗೆ ಸುಪ್ರೀಂ ಬಿಗ್ ರಿಲೀಫ್!

ಇಂದು ಸುಪ್ರೀಂ ವಿಚಾರಣೆ ನಡೆಸಿ ಆ್ಯಂಕರ್ ರೋಹಿತ್ ರಂಜನ್ ಗೆ ಬಿಗ್ ರಿಲೀಫ್ ನೀಡಿದೆ.

Written by - Channabasava A Kashinakunti | Last Updated : Jul 8, 2022, 01:33 PM IST
  • ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಡಿದ್ದ ಆರೋಪ
  • ಜೀ ನ್ಯೂಸ್ ಆ್ಯಂಕರ್ ರೋಹಿತ್ ರಂಜನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್
  • ಇಂದು ಸುಪ್ರೀಂ ವಿಚಾರಣೆ ನಡೆಸಿ ಆ್ಯಂಕರ್ ರೋಹಿತ್ ರಂಜನ್ ಗೆ ಬಿಗ್ ರಿಲೀಫ್
ರಾಹುಲ್ ಗಾಂಧಿ ಹೇಳಿಕೆ ತಿರುಚಿದ ವಿಡಿಯೋ ಪ್ರಕರಣ: ZEE News ಆ್ಯಂಕರ್ ಗೆ ಸುಪ್ರೀಂ ಬಿಗ್ ರಿಲೀಫ್! title=

ನವದೆಹಲಿ : ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಹರಡಿದ್ದ ಆರೋಪದಡಿ ನಮ್ಮ ಜೀ ನ್ಯೂಸ್ ಆ್ಯಂಕರ್ ರೋಹಿತ್ ರಂಜನ್ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್ಐಆರ್ ಗಳು ದಾಖಲಾಗಿದ್ದವು, ಈ ಬಗ್ಗೆ ರೋಹಿತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಸುಪ್ರೀಂ ವಿಚಾರಣೆ ನಡೆಸಿ ಆ್ಯಂಕರ್ ರೋಹಿತ್ ರಂಜನ್ ಗೆ ಬಿಗ್ ರಿಲೀಫ್ ನೀಡಿದೆ.

ಪ್ರಕರಣದಲ್ಲಿ ರೋಹಿತ್ ರಂಜನ್ ವಿರುದ್ಧ ಯಾವುದೇ ಬಲವಾದ ಸಾಕ್ಷಿಗಳಿಲ್ಲದ ಕಾರಣ ಅವರ ವಿರುದ್ಧ ಯಾವುದೆ ಕ್ರಮ ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ರೋಹಿತ್ ರಂಜನ್ ತಮ್ಮ ವಿರುದ್ಧ ಹಲವು ಕಡೆಗಳಲ್ಲಿ ಎಫ್ಐಆರ್ ದಾಖಲಾಗಿರುವುದರಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿ ತಕ್ಷಣವೇ ಪ್ರಕರಣದ ವಿಚಾರಣೆಯನ್ನು ಕೋರಿದ್ದರು. ರಜೆ ಪೀಠದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಗುರುವಾರದಂದು ವಿಚಾರಣೆಗೆ ಪಟ್ಟಿ ಮಾಡಿತ್ತು.

ಇದನ್ನು ನಮಗೆ ನೀಡಲಾಗಿಲ್ಲ. ಈ ಪ್ರಕರಣದ ವಿಚಾರಣೆಯ ಹಂಚಿಕೆಯನ್ನು ಮುಖ್ಯನ್ಯಾಯಾಧೀಶರು ಮಾಡಬೇಕಾಗುತ್ತದೆ ಎಂದು ನ್ಯಾ.ಜೆ.ಕೆ ಮಹೇಶ್ವರಿ ಅವರೂ ಇದ್ದ ಪೀಠ ಹೇಳಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News