ಪೌರತ್ವ ವಿವಾದ: ರಾಹುಲ್ ಗಾಂಧಿ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ರಾಹುಲ್ದೆ ಗಾಂಧಿ ಪೌರತ್ವ ಪ್ರಶ್ನಿಸಿ ದೆಹಲಿಯ ನಿವಾಸಿಗಳಾದ ಜೈ ಭಗ್ವಾನ್​ ಮತ್ತು ಚಂದೇರ್ ಪ್ರಕಾಶ್​ ತ್ಯಾಗಿ ಎಂಬುವವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

Last Updated : May 9, 2019, 01:48 PM IST
ಪೌರತ್ವ ವಿವಾದ: ರಾಹುಲ್ ಗಾಂಧಿ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ title=

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬ್ರಿಟನ್ ಪೋರತ್ವ ಹೊಂದಿದ್ದಾರೆ. ಹಾಗಾಗಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ನಿರ್ದೇಶಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.

ರಾಹುಲ್ ಗಾಂಧಿ ಬ್ರಿಟಿಷ್​ ಪೌರತ್ವ ಹೊಂದಿದ್ದಾರೆ ಎಂಬುದು ಇಂಗ್ಲೆಂಡ್​ನಲ್ಲಿ ಆರಂಭಿಸಿದ್ದ ಕಂಪನಿಯ ದಾಖಲೆಗಳು ಹೇಳುತ್ತಿವೆ ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆರೋಪ ಮಾಡಿದ ಬಳಿಕ ದೆಹಲಿಯ ನಿವಾಸಿಗಳಾದ ಜೈ ಭಗ್ವಾನ್​ ಮತ್ತು ಚಂದೇರ್ ಪ್ರಕಾಶ್​ ತ್ಯಾಗಿ ಎಂಬುವವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಸುಬ್ರಹ್ಮಣಿಯನ್ ಸ್ವಾಮಿ ಅವರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಕೂಡ ರಾಹುಲ್ ಗಾಂಧಿ ಅವರಿಗೆ ವಾಸ್ತವ ಸ್ಥಿತಿ ಬಗ್ಗೆ ವಿವರಣೆ ನೀಡುವಂತೆ ಕೋರಿ ನೋಟಿಸ್​ ಜಾರಿ ಮಾಡಿತ್ತು.

ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ, ಕೇವಲ ಕಾಗದ ಪತ್ರಗಳ ಆಧಾರದ ಮೇಲೆ ಪೌರತ್ವ ನಿರ್ಧರಿಸಲು ಸಾಧ್ಯವಿಲ್ಲ. "ಕೆಲ ಕಂಪನಿಯ ದಾಖಲೆಗಳಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ನಾಗರಿಕ ಎಂದು ಇದೆ. ಹಾಗೆಂದ ಮಾತ್ರಕ್ಕೆ ಅವರು ಬ್ರಿಟಿಷ್​ ನಾಗರಿಕರೇ? ಎಂದು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ. 

Trending News