Supreme Court On Quota - ಎಷ್ಟು ತಲೆಮಾರಿನವರೆಗೆ ಜಾರಿಯಲ್ಲಿರಲಿದೆ ಕೋಟಾ?: ಸುಪ್ರೀಂ ಪ್ರಶ್ನೆ

Maratha Quota - ಮರಾಠಾ ಕೋಟಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಶುಕ್ರವಾರ ಎಷ್ಟು ತಲೆಮಾರುಗಳ ಮೀಸಲಾತಿ ಮುಂದುವರೆಯಲಿದೆ ಎಂಬುದನ್ನು  ತಿಳಿಯಲು ಬಯಸಿದೆ. ಶೇಕಡಾ 50 ರ ಮಿತಿಯನ್ನು ತೆಗೆದುಹಾಕಿದ ಸಂದರ್ಭದಲ್ಲಿ ಉಂಟಾಗುವ ಅಸಮಾನತೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. 

Written by - Nitin Tabib | Last Updated : Mar 20, 2021, 11:31 AM IST
  • ಮರಾಠಾ ಮೀಸಲಾತಿ ಕುರಿತು ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಆಲಿಸಿದ ಸುಪ್ರೀಂ.
  • ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸಲು ಬಯಸುವಿರಿ?
  • ಇದರಿಂದ ಉಂಟಾಗುತ್ತಿರುವ ಅಸಮಾನತೆಯ ಕುರಿತು ನೀವೇನು ಹೇಳಲು ಬಯಸುತ್ತಿರುವಿರಿ?
Supreme Court On Quota - ಎಷ್ಟು ತಲೆಮಾರಿನವರೆಗೆ ಜಾರಿಯಲ್ಲಿರಲಿದೆ ಕೋಟಾ?: ಸುಪ್ರೀಂ ಪ್ರಶ್ನೆ  title=
Supreme Court Of India(File Photo)

Maratha Quota - ಮರಾಠಾ ಕೋಟಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಶುಕ್ರವಾರ ಎಷ್ಟು ತಲೆಮಾರುಗಳ ಮೀಸಲಾತಿ ಮುಂದುವರೆಯಲಿದೆ ಎಂಬುದನ್ನು  ತಿಳಿಯಲು ಬಯಸಿದೆ. ಶೇಕಡಾ 50 ರ ಮಿತಿಯನ್ನು ತೆಗೆದುಹಾಕಿದ ಸಂದರ್ಭದಲ್ಲಿ ಉಂಟಾಗುವ ಅಸಮಾನತೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ (Mukul Rohatgi), ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ, ಕೋಟಾ ಮಿತಿಯನ್ನು ನಿಗದಿಪಡಿಸುವ ಕುರಿತು ಮಂಡಲ್ ಪ್ರಕರಣದಲ್ಲಿ (Supreme Court) ತೀರ್ಮಾನವನ್ನು ಬದಲಾದ ಪರಿಸ್ಥಿತಿಗಳಲ್ಲಿ ಪುನರ್ಪರಿಶೀಲಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಬದಲಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ (Reservation) ಕೋಟಾವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ನ್ಯಾಯಾಲಯಗಳು ಆಯಾ ರಾಜ್ಯಗಳಿಗೆ ಬಿಟ್ಟುಕೊಡಬೇಕು ಮತ್ತು ಮಂಡಲ್ ಪ್ರಕರಣಕ್ಕೆ ಸಂಬಂಧಿಸಿದ ನಿರ್ಧಾರವು 1931 ರ ಜನಗಣತಿಯನ್ನು ಆಧರಿಸಿದೆ. ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ಕಾನೂನಿನ ಪರ ವಾದಿಸಿದ ರೋಹಟ್ಗಿ, ಮಂಡಲ್ ಪ್ರಕರಣದಲ್ಲಿ ತೀರ್ಪಿನ ವಿವಿಧ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಈ ತೀರ್ಪನ್ನು ಇಂದಿರಾ ಸಾಹ್ನಿ ಪ್ರಕರಣ ಎಂದೂ ಕೂಡ ಕರೆಯುತ್ತಾರೆ.

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) 10 ಪ್ರತಿಶತ ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವು 50 ಪ್ರತಿಶತ ಮಿತಿಯನ್ನು ಉಲ್ಲಂಘಿಸುತ್ತದೆ. ಇದಕ್ಕೆ ಟಿಪ್ಪಣಿ ಮಾಡಿದ ನ್ಯಾಯಪೀಠ 'ನೀವು ಸೂಚಿಸಿದಂತೆ 50 ಪ್ರತಿಶತ ಮಿತಿ ಅಥವಾ ಮಿತಿಯಿಲ್ಲದಿದ್ದರೆ, ಸಮಾನತೆಯ ಪರಿಕಲ್ಪನೆ ಏನು? ಅಂತಿಮವಾಗಿ, ನಾವು ಅದನ್ನು ಎದುರಿಸಬೇಕಾಗಿದೆ. ಇದರ ಬಗ್ಗೆ ನೀವೇನು ಹೇಳುವಿರಿ ?... ಇದರಿಂದ ಉದ್ಭವಿಸುವ ಅಸಮಾನತೆಯ ಬಗ್ಗೆ ನೀವೇನು ಹೇಳಲು ಬಯಸುತ್ತೀರಿ? ಇದನ್ನು ಎಷ್ಟು ತಲೆಮಾರುಗಳವರೆಗೆ ಮುಂದುವರೆಸಲು ಬಯಸುತ್ತಿರುವಿರಿ?' ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದೆ.

ಈ ಪೀಠ (SC) ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್, ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಅವರನ್ನು ಒಳಗೊಂಡಿದೆ. 1931 ರ ಜನಗಣತಿಯನ್ನು ಆಧರಿಸಿದ ಮಂಡಲ್ ತೀರ್ಪನ್ನು ಮರುಪರಿಶೀಲಿಸಲು ಹಲವಾರು ಕಾರಣಗಳಿವೆ ಎಂದು ರೋಹಟ್ಗಿ ಹೇಳಿದ್ದಾರೆ. 1931 ರ ಜನಗಣತಿಯ ತುಲನೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜನಸಂಖ್ಯೆ ಹಲವು ಪಟ್ಟು ಹೆಚ್ಚಾಗಿ 135 ಕೋಟಿಗಳಿಗೆ ತಲುಪಿದೆ ಎಂದು ಅವರು ಇದೆ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳು ಕಳೆದಿವೆ ಮತ್ತು ರಾಜ್ಯ ಸರ್ಕಾರಗಳು ಅನೇಕ ಕಲ್ಯಾಣ ಯೋಜನೆಗಳನ್ನು ನಡೆಸುತ್ತಿವೆ ಮತ್ತು ಯಾವುದೇ ಅಭಿವೃದ್ಧಿ ನಡೆದಿಲ್ಲ, ಯಾವುದೇ ಹಿಂದುಳಿದ ಜಾತಿ ಪ್ರಗತಿ ಹೊಂದಿಲ್ಲ ಎಂದು ನಾವು ಒಪ್ಪಿಕೊಳ್ಳಬಹುದೇ? ಹಿಂದುಳಿದಿರುವಿಕೆಯಿಂದ ಹೊರಗುಳಿದವರನ್ನು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಮಂಡಳಿಗೆ ಸಂಬಂಧಿಸಿದ ನಿರ್ಧಾರವನ್ನು ಪರಿಶೀಲಿಸುವ ಉದ್ದೇಶವೂ ಇದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ-"ಆಧಾರ್ ಲಿಂಕ್ ಮಾಡದಿರುವುದಕ್ಕೆ 3 ಕೋಟಿ ರೇಷನ್ ಕಾರ್ಡ್ ರದ್ದುಪಡಿಸುವುದು ಗಂಭೀರ ವಿಷಯ"

ಇದಕ್ಕೆ ತಮ್ಮ ವಾದ ಮಂಡಿಸಿರುವ ರೋಹಟ್ಗಿ, "'ಹೌದು, ನಾವು ಮುಂದೆ ಸಾಗಿದ್ದೇವೆ, ಆದರೆ ಹಿಂದುಳಿದ ವರ್ಗಗಳ ಸಂಖ್ಯೆ 50 ಪ್ರತಿಶತದಿಂದ 20 ಪ್ರತಿಶತಕ್ಕೆ ಇಳಿದಿದೆ ಎಂದು ಅಲ್ಲ. ನಾವು ಇನ್ನೂ ದೇಶದಲ್ಲಿ ಹಸಿವಿನಿಂದ ಬಳಲುತ್ತಿದ್ದೇವೆ… ಇಂದಿರಾ ಸಾಹ್ನಿ ಪ್ರಕರಣದ ತೀರ್ಪು ಸಂಪೂರ್ಣವಾಗಿ ತಪ್ಪಾಗಿದೆ ಮತ್ತು ಅದನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಹೇಳಲು ನಾನು ಪ್ರಯತ್ನಿಸುತ್ತಿಲ್ಲ. ನಾನು 30 ವರ್ಷಗಳುಗಳು ಗತಿಸಿವೆ, ಕಾನೂನು ಬದಲಾಗಿದೆ, ಜನಸಂಖ್ಯೆ ಹೆಚ್ಚಾಗಿದೆ, ಹಿಂದುಳಿದವರ ಸಂಖ್ಯೆಯೂ ಹೆಚ್ಚಾಗಿದೆ ಎಂಬ ವಿಷಯವನ್ನು ನಾನು ಮಂಡಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ-Supreme Court ಗೂ ದೇಶಾದ್ಯಂತ 4 ಬೆಂಚ್ ಗಳಿರಬೇಕು, ಸಂಸದೀಯ ಸಮಿತಿ ಶಿಫಾರಸ್ಸು

ಅಂತಹ ಪರಿಸ್ಥಿತಿಯಲ್ಲಿ, ಅನೇಕ ರಾಜ್ಯಗಳಲ್ಲಿ ಮೀಸಲಾತಿ ಮಿತಿ ಶೇಕಡಾ 50 ಕ್ಕಿಂತ ಹೆಚ್ಚಿರುವಾಗ, ಇದೊಂದು ಜ್ವಲಂತ ವಿಷಯವಾಗಿ  ಉಳಿದಿಲ್ಲ ಮತ್ತು 30 ವರ್ಷಗಳ ನಂತರ ಅದನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ರೋಹಟ್ಗಿ ತಮ್ಮ ವಾದ ಮಂಡಿಸಿದ್ದಾರೆ. ಸದ್ಯ  ಪ್ರಕರಣದ ಚರ್ಚೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದ್ದು ಮತ್ತು ಸೋಮವಾರವೂ ವಾದ-ಪ್ರತಿವಾದಗಳು ಮುಂದುವರೆಯಲಿವೆ. ವಿಶೇಷವೆಂದರೆ, ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರವೇಶದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಆಲಿಸುತ್ತಿದೆ.

ಇದನ್ನೂ ಓದಿ-ನೋಟಾಗೆ ಅಧಿಕ ಮತ ಬಂದರೆ ಮರು ಚುನಾವಣೆ ನಡೆಸಿ-ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News