ಮೋದಿಗೆ ಬೆಂಬಲವಿದೆ, ಆದರೆ ನಿತೀಶ್ ಕುಮಾರ್ ಕೂಡ ಪ್ರಧಾನಿ ಅಭ್ಯರ್ಥಿಗೆ ಸ್ಪರ್ಧಿ-ಜೆಡಿಯು

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತಾದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಒಂದೆಡೆ ಈಗಾಗಲೇ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನೇ ಬಿಜೆಪಿ ಘೋಷಿಸಿಕೊಂಡಿದೆ.ಆದರೆ ಈಗ ಎನ್ ಡಿ ಎ ಮೈತ್ರಿಕೂಟದಲ್ಲಿ ಒಳಗೊಳಗೇ ಈಗ ಪ್ರಧಾನಿ ಹುದ್ದೆ ವಿಚಾರವಾಗಿ ಚರ್ಚೆ ನಡೆಯುತ್ತಿದೆ.

Last Updated : Jan 6, 2019, 03:32 PM IST
ಮೋದಿಗೆ ಬೆಂಬಲವಿದೆ, ಆದರೆ ನಿತೀಶ್ ಕುಮಾರ್ ಕೂಡ ಪ್ರಧಾನಿ ಅಭ್ಯರ್ಥಿಗೆ ಸ್ಪರ್ಧಿ-ಜೆಡಿಯು title=

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಮಂತ್ರಿ ಅಭ್ಯರ್ಥಿ ಕುರಿತಾದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಒಂದೆಡೆ ಈಗಾಗಲೇ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನೇ ಬಿಜೆಪಿ ಘೋಷಿಸಿಕೊಂಡಿದೆ.ಆದರೆ ಈಗ ಎನ್ ಡಿ ಎ ಮೈತ್ರಿಕೂಟದಲ್ಲಿ ಒಳಗೊಳಗೇ ಈಗ ಪ್ರಧಾನಿ ಹುದ್ದೆ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಬಿಹಾರದಲ್ಲಿ ಬಿಜೆಪಿ ಮೈತ್ರಿಯಾಗಿರುವ ಜೆಡಿಯು ಮೋದಿಯವರು ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.ಆದರೆ ತಮ್ಮ ಪಕ್ಷದ ಮುಖ್ಯಸ್ಥರಾಗಿರುವ ಸಿಎಂ ನಿತೀಶ್ ಕುಮಾರ್ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಜೆಡಿಯು ತಿಳಿಸಿದೆ.

ಈ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಜೆಡಿಯು ವಕ್ತಾರ ರಾಜೀವ್ ರಂಜನ್ "ನಿತೀಶ್ ಕುಮಾರ್ ರವರ ರಾಜಕೀಯ ಕರಿಯರ್ ದೇಶಕ್ಕೆ ಸ್ಪೂರ್ತಿದಾಯಕ, ಅವರ ನಾಯಕತ್ವದಲ್ಲಿ ಬಿಹಾರ ಅಭಿವೃದ್ದಿಯನ್ನು ಕಂಡಿದೆ, ಪ್ರಧಾನಿ ಮೋದಿಯವರು ಎನ್ ಡಿ ಎ ನ  ಅಭ್ಯರ್ಥಿಯಾಗಿದ್ದರೂ ಕೂಡ ಒಂದು ವೇಳೆ ಆ ಹುದ್ದೆಯ ವಿಚಾರವಾಗಿ ಚರ್ಚೆ ನಡೆದದ್ದೇ ಆದಲ್ಲಿ ಅದರಲ್ಲಿ  ನಿತೀಶ್ ಕುಮಾರ್ ಆ ಉನ್ನತ ಹುದ್ದೆಗೆ ಸ್ಪರ್ಧಿಯಾಗಿದ್ದಾರೆ ಎಂದು ರಂಜನ್ ತಿಳಿಸಿದರು.

ಇನ್ನೊಂದೆಡೆ ಜೆಡಿಯುನ ಈ ಅಭಿಪ್ರಾಯವನ್ನು ತಿರಸ್ಕರಿಸಿರುವ ಬಿಜೆಪಿ ಈ ವಿಚಾರವಾಗಿ ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ. ನರೇಂದ್ರ ಮೋದಿ ಬಿಹಾರದಲ್ಲಿಯೂ ಕೂಡ ಪ್ರಧಾನಿ ಮುಖ. ಸ್ವತ ನಿತೀಶ್ ಕುಮಾರ್ ಅವರೆ ನರೇಂದ್ರ ಮೋದಿಯವರ ಹೆಸರನ್ನು  ಪ್ರಧಾನಿ ಅಭ್ಯರ್ಥಿಗೆ ಸೂಚಿಸಿದ್ದಾರೆ.ಬಿಹಾರದ ಜನರು ನರೇಂದ್ರ ಮೋದಿಯವರನ್ನು  ಪ್ರಧಾನಿ ಅಭ್ಯರ್ಥಿಯಾಗಿ ಮಾಡಿದ್ದಾರೆ. ಆದ್ದರಿಂದ ಈ ವಿಚಾರವಾಗಿ ಚರ್ಚಿಸುವುದರಲ್ಲಿ ಯಾವುದೇ ಆರ್ಥವಿಲ್ಲ ಎಂದು ಬಿಜೆಪಿ ಸಂಸದ ಸಿ.ಪಿ.ಠಾಕೂರ್ ತಿಳಿಸಿದರು.

Trending News