ಗೋಮೂತ್ರ ಮತ್ತು ಸಗಣಿಯಿಂದ ಕೊರೋನಾ ವೈರಸ್ ಗುಣಪಡಿಸಬಹುದು - ಬಿಜೆಪಿ ಶಾಸಕಿ

ಪ್ರಪಂಚದಾದ್ಯಂತ ಸಾವಿರಾರು ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಅನ್ನು ಗುಣಪಡಿಸಲು ಜಗತ್ತು ಚಿಂತಾಕ್ರಾಂತರಾಗಿರುವಾಗ ಅಸ್ಸಾಂನ ಬಿಜೆಪಿ ಶಾಸಕರೊಬ್ಬರು ಈ ರೋಗ ನಿವಾರಣೆ ಗೋಮೂತ್ರ ಮತ್ತು ಸಗಣಿಯಿಂದ ನಿವಾರಣೆಯಾಗುತ್ತದೆ ಎನ್ನುವ ವಿಚಿತ್ರ ಹೇಳಿಕೆಯಿಂದಾಗಿ ಸುದ್ದಿಯಾಗಿದ್ದಾರೆ.

Last Updated : Mar 2, 2020, 08:25 PM IST
 ಗೋಮೂತ್ರ ಮತ್ತು ಸಗಣಿಯಿಂದ ಕೊರೋನಾ ವೈರಸ್ ಗುಣಪಡಿಸಬಹುದು - ಬಿಜೆಪಿ ಶಾಸಕಿ title=
Photo courtesy: facebook

ನವದೆಹಲಿ: ಪ್ರಪಂಚದಾದ್ಯಂತ ಸಾವಿರಾರು ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಅನ್ನು ಗುಣಪಡಿಸಲು ಜಗತ್ತು ಚಿಂತಾಕ್ರಾಂತರಾಗಿರುವಾಗ ಅಸ್ಸಾಂನ ಬಿಜೆಪಿ ಶಾಸಕರೊಬ್ಬರು ಈ ರೋಗ ನಿವಾರಣೆ ಗೋಮೂತ್ರ ಮತ್ತು ಸಗಣಿಯಿಂದ ನಿವಾರಣೆಯಾಗುತ್ತದೆ ಎನ್ನುವ ವಿಚಿತ್ರ ಹೇಳಿಕೆಯಿಂದಾಗಿ ಸುದ್ದಿಯಾಗಿದ್ದಾರೆ.

ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸಲು ಹಸುವಿನ ಮೂತ್ರ ಮತ್ತು ಹಸುವಿನ ಸಗಣಿ ಸಹಾಯ ಮಾಡುತ್ತದೆ ಎಂದು ಸುಮನ್ ಹರಿಪ್ರಿಯಾ ಹೇಳಿದ್ದಾರೆ. 'ಹಸುವಿನ ಸಗಣಿ ಬಹಳ ಸಹಾಯಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತೆಯೇ, ಹಸುವಿನ ಮೂತ್ರವನ್ನು ಸಿಂಪಡಿಸಿದಾಗ, ಅದು ಒಂದು ಪ್ರದೇಶವನ್ನು ಶುದ್ಧೀಕರಿಸುತ್ತದೆ...ಕೊರೋನಾ ವೈರಸ್ ರೋಗವನ್ನು ಗುಣಪಡಿಸಲು 'ಗೋಮೂತ್ರ' ಮತ್ತು 'ಸಗಣಿ ಸಹಾಯವಾಗಬಹುದು ಎಂದು ನಾನು ನಂಬಿದ್ದೇನೆ' ಎಂದು ಹೇಳಿದರು.

ಇದೇ ವೇಳೆ ಬಾಂಗ್ಲಾದೇಶದ ಆರ್ಥಿಕತೆ ಬಲಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸುಮನ್ ಹರಿಪ್ರಿಯಾ, ಅಸ್ಸಾಂನಿಂದ ಕಳ್ಳ ಸಾಗಾಣೆಯಾಗಿರುವ ಹಸುವಿನಿಂದಾಗಿ ಅದರ ಆರ್ಥಿಕತೆ ವೃದ್ದಿಗೊಂಡಿದೆ ಎಂದರು.'ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಗೋಮಾಂಸ ರಫ್ತುದಾರ ದೇಶವಾಗಿದೆ. ಈ ಎಲ್ಲಾ ಹಸುಗಳು ನಮ್ಮವೇ ಆಗಿವೆ.ಈ ಹಿಂದೆ ಇದ್ದಂತಹ ಕಾಂಗ್ರೆಸ್ ಸರ್ಕಾರ ಹಸುಗಳ ಕಳ್ಳಸಾಗಣೆ ತಡೆಯಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ 'ಎಂದು ಅವರು ಹೇಳಿದರು.

ಏತನ್ಮಧ್ಯೆ, ದೇಶದಲ್ಲಿ ಇನ್ನೂ ಎರಡು ಕೊರೊನಾವೈರಸ್ ಪ್ರಕರಣಗಳು ದೆಹಲಿ ಮತ್ತು ತೆಲಂಗಾಣದಲ್ಲಿ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.ಆ ಮೂಲಕ ಭಾರತದಲ್ಲಿ ಈಗ ಐದು ಕೊರೊನಾ ವೈರಸ್ ಪ್ರಕರಣಗಳು ದಾಖಲಾದಂತಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ವಿಚಾರವಾಗಿ  25,738 ಜನರು ಸಮುದಾಯ ಕಣ್ಗಾವಲಿನಲ್ಲಿದ್ದರೆ, COVID-19 ರೋಗ ಲಕ್ಷಣಗಳನ್ನು ಹೊಂದಿರುವ ಶಂಕಿತ 37 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೋನಾ ವೈರಸ್ ನಿಂದಾಗಿ ಚೀನಾದಲ್ಲಿ ಇದುವರೆಗೆ 2,912 ಸಾವುಗಳಾಗಿವೆ.

Trending News