ಸಂದರ್ಶನದ ಮೊದಲು ಡೆಂಗ್ಯೂ ಬಂದರೂ ಛಲ ಬಿಡಲಿಲ್ಲ: ರೈತನ ಮಗನಿಗೆ 1 ಕೋಟಿ ವೇತನದ ಉದ್ಯೋಗ!

ಅಮೆಜಾನ್ ಕಂಪನಿಯಲ್ಲಿ ಸಂದರ್ಶನಕ್ಕೆ ಮುನ್ನ ಸೌರಭ್‌ಗೆ ಡೆಂಗ್ಯೂ ಇತ್ತು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.

Written by - Puttaraj K Alur | Last Updated : Dec 22, 2021, 08:16 PM IST
  • ರಾಜಸ್ಥಾನದಲ್ಲಿ ರೈತನ ಮಗನೊಬ್ಬ ತನ್ನದೇ ಆದ ಛಾಪು ಮೂಡಿಸಿದ್ದಾನೆ
  • ಅಮೆಜಾನ್ ಕಂಪನಿಯು 1.06 ಕೋಟಿ ರೂ. ವೇತನದ ಜಾಬ್ ಆಫರ್ ನೀಡಿದೆ
  • ಕಾನ್ಪುರದ ಐಐಟಿಯಲ್ಲಿ ಓದುತ್ತಿರುವ ಸೌರಭ್ ಕುಲ್ಹಾರಿ ಮಹತ್ತರ ಸಾಧನೆ
ಸಂದರ್ಶನದ ಮೊದಲು ಡೆಂಗ್ಯೂ ಬಂದರೂ ಛಲ ಬಿಡಲಿಲ್ಲ: ರೈತನ ಮಗನಿಗೆ 1 ಕೋಟಿ ವೇತನದ ಉದ್ಯೋಗ! title=
ರಾಜಸ್ಥಾನದ ರೈತನ ಮಗನ ಸಾಧನೆ

ನವದೆಹಲಿ: ರಾಜಸ್ಥಾನ(Rajasthan)ದಲ್ಲಿ ರೈತನ ಮಗನೊಬ್ಬ ತನ್ನದೇ ಆದ ಛಾಪು ಮೂಡಿಸಿದ್ದಾನೆ. ಅಮೆಜಾನ್ ಕಂಪನಿಯು ರೈತನ ಮಗನಿಗೆ ವಾರ್ಷಿಕ 1.06 ಕೋಟಿ ರೂ. ಮೊತ್ತದ ಜಾಬ್(Amazon Jobs) ಆಫರ್ ನೀಡಿದೆ. ರಾಜಸ್ಥಾನದ ಜುಂಜುನು ನಿವಾಸಿ ಸೌರಭ್ ಕುಲ್ಹಾರಿ(Saurabh Kulhari)ಅವರಿಗೆ ಅಮೆಜಾನ್ ಕಂಪನಿಯು ತನ್ನ ಲಂಡನ್ ಕಚೇರಿಯಲ್ಲಿ 1.06 ಕೋಟಿ ರೂ. ವೇತನದ ಉದ್ಯೋಗವನ್ನು ನೀಡಿದೆ. ಅಮೆಜಾನ್ ಕಂಪನಿಯಲ್ಲಿ ಸಾಫ್ಟ್‌ ವೇರ್ ಡೆವಲಪರ್‌ನ ಕೆಲಸವನ್ನು ಸೌರಭ್ ನೋಡಿಕೊಳ್ಳುತ್ತಾರೆ. ಸೌರಭ್ ತಂದೆ-ತಾಯಿ ಕೃಷಿಯಲ್ಲಿ ದುಡಿಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ.

ಸೌರಭ್ ಹುಟ್ಟಿನಿಂದ ಅಮೆಜಾನ್ ಕಂಪನಿ(Amazon Company)ಉದ್ಯೋಗದವರೆಗಿನ ಅವರ ಪ್ರಯಾಣವು ಸಾಕಷ್ಟು ಆಸಕ್ತಿದಾಯಕವಾಗಿದೆ. ಅಮೆಜಾನ್ ಕಂಪನಿಯಲ್ಲಿ ಸಂದರ್ಶನಕ್ಕೆ ಮುನ್ನ ಸೌರಭ್‌ಗೆ ಡೆಂಗ್ಯೂ ಇತ್ತು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಇದಾದ ನಂತರವೂ ಎದೆಗುಂದದೆ ದೌರ್ಬಲ್ಯವಿದ್ದರೂ ಸಂದರ್ಶನ ನೀಡಿ ಅವರು ಯಶಸ್ಸು ಗಳಿಸಿದ್ದಾರೆ. ಸದ್ಯ ಹಳ್ಳಿಯನ್ನು ತೊರೆದಿರುವ ಸೌರಭ್ ಲಂಡನ್‌ನಲ್ಲಿ ಅಮೆಜಾನ್ ಪ್ರಯಾಣವನ್ನು ಆರಂಭಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: Terrorist attack:ಶ್ರೀನಗರದಲ್ಲಿ ನಾಗರಿಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

10ರ ನಂತರವೇ ಐಐಟಿಗೆ ತಯಾರಿ ಆರಂಭ

ತನ್ನ ಹಳ್ಳಿ ಮಾಲ್ಸಿಸರ್‌ನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ನಂತರ ಸೌರಭ್‌ನನ್ನು ಅವರ ತಂದೆ ಉತ್ತಮ ಶಿಕ್ಷಣಕ್ಕಾಗಿ ಜುಂಜುನುವಿನಲ್ಲಿ ಶಾಲೆಗೆ ಸೇರಿಸಿದರು. ಕುಟುಂಬದ ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೂ ತಂದೆ ಹಗಲಿರುಳು ಕಷ್ಟಪಟ್ಟು ಮಗನಿಗೆ ಶಿಕ್ಷಣ ಕೊಡಿಸಿದರು. ಸೌರಭ್ 10ನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ ಚಿಕ್ಕಮ್ಮನ ಇಬ್ಬರು ಹೆಣ್ಣುಮಕ್ಕಳು ಐಐಟಿ(IIT)ಗೆ ತಯಾರಿ ನಡೆಸುತ್ತಿದ್ದರು. ಇದಾದ ನಂತರ ಸೌರಭ್ ತಂದೆ-ತಾಯಿ ಕೂಡ ಐಐಟಿಯಲ್ಲಿ ಶಿಕ್ಷಣ ಪಡೆಯುವ ಕನಸನ್ನು ತೋರಿಸಿದ್ದರು.

ತಾನು 10ನೇ ತರಗತಿ ಪಾಸಾದ ತಕ್ಷಣ ಸಿಕಾರ್‌ಗೆ ಹೋಗಿದ್ದೆ ಎಂದು ಸೌರಭ್ ಹೇಳಿದ್ದಾರೆ. ಅಲ್ಲಿ ತಯಾರಿ ನಡೆಸುತ್ತಲೇ ಐಐಟಿ ಕಾನ್ಪುರಕ್ಕೆ ಆಯ್ಕೆಯಾದರು. ಐಐಟಿಯಿಂದ ಇಂಜಿನಿಯರಿಂಗ್ ಮುಗಿಯುವ ಮುನ್ನವೇ ಅಮೆಜಾನ್ ಕಂಪನಿಯಿಂದ ಕರೆ ಬಂತು. ಐಐಟಿ ಕಾನ್ಪುರದಲ್ಲಿ ಈ ವರ್ಷ ತನ್ನ ಕೊನೆಯ ವರ್ಷ ಎಂದು ಸೌರಭ್ ಹೇಳಿದ್ದಾರೆ. ಕೋರ್ಸ್ ಮುಗಿದ ನಂತರ ಅವರು ಮುಂದಿನ ವರ್ಷ ಅಮೆಜಾನ್(Amazon) ಕಂಪನಿಗೆ ಸೇರಲಿದ್ದಾರೆ.

ಇದನ್ನೂ ಓದಿ: ಚೀನಾ ಮಿಸೈಲ್​​ಗಳ ಪಾಲಿನ ಶತ್ರು: ಹೊಸ ತಲೆಮಾರಿನ 'ಪ್ರಳಯ್' ಕ್ಷಿಪಣಿ ಮೊದಲ ಪರೀಕ್ಷೆ ಯಶಸ್ವಿ

ಸಂದರ್ಶನಕ್ಕೂ ಮುನ್ನ ಡೆಂಗ್ಯೂ ಬಂದಿತ್ತು

ಅಮೆಜಾನ್ ಕಂಪನಿಯ ಸಂದರ್ಶನ(Farmer Son Achievement)ಕ್ಕೂ ಮುನ್ನ ತನಗೆ ಡೆಂಗ್ಯೂ ಬಂದಿತ್ತು ಎಂದು ಸೌರಭ್ ಹೇಳಿದ್ದಾರೆ. ನವೆಂಬರ್ 8ರಂದು ಅವರಿಗೆ ಡೆಂಗ್ಯೂ ಪಾಸಿಟಿವ್ ಆಗಿತ್ತು, ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಅವರ ಪ್ಲೇಟ್ಲೆಟ್ 64 ಸಾವಿರಕ್ಕೆ ಇಳಿದಿತ್ತು. ಇದರ ನಂತರ ಅವರು 20 ದಿನಗಳವರೆಗೆ ಸಂಪೂರ್ಣವಾಗಿ ಹಾಸಿಗೆಯ ಮೇಲೆ ಮಲಗಿದ್ದರು. ನವೆಂಬರ್ 28ರ ಸಂಜೆ ಅಮೆಜಾನ್ ಸಂದರ್ಶನಕ್ಕಾಗಿ ಮೇಲ್ ಮಾಡಿದೆ. ಇದಾದ ಬಳಿಕ ಡಿಸೆಂಬರ್ 2ರಂದು ಸಂದರ್ಶನ ನೀಡಿದ್ದು, ಕಂಪನಿ 1 ಕೋಟಿ 6 ಲಕ್ಷ ರೂ. ವೇತನ(Amazon Package)ಕೆಲಸವನ್ನು ಆಫರ್ ಮಾಡಿದೆ. ಇದಕ್ಕೂ ಮುನ್ನ ಎಪಿಟಿ ಪೋರ್ಟ್ ಫೋಲಿಯೊ ಕಂಪನಿಯಿಂದ 50 ಲಕ್ಷ ರೂ. ಜಾಬ್ ಆಫರ್ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News