ಛತ್ತರ್ರ್ಪುರ್ : ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದ ಗುಣಮಟ್ಟದ ಬಗ್ಗೆ ಈಗಾಗಲೇ ಹಲವಾರು ಟೀಕೆಗಳು ಮತ್ತು ದೂರುಗಳು ಕೇಳಿಬಂದಿದ್ದವು. ಇದೀಗ ಅಂತಹದೇ ಒಂದು ಘಟನೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮತ್ತೆ ಬೆಳಕಿಗೆ ಬಂದಿದೆ.
ಚತರ್ಪುರ್ ರಾಸ್ನಲ್ಲಿನ ಸೂರಜ್ಪುರಾದಲ್ಲಿನ ಒಂದು ಶಾಲೆಯಲ್ಲಿನ ಮಧ್ಯಾಹ್ನದ ಊಟಕ್ಕೆ ನಿಡುವ ಆಹಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇಲ್ಲಿನ ಮಕ್ಕಳು ಕಾಲುವೆ ನೀರು ಕುಡಿದು, ಊಟಕ್ಕೆ ಉಪ್ಪು ಮತ್ತು ಚಪಾತಿಯನ್ನು ತಿನ್ನುತ್ತಾರೆ. ಅಲ್ಲದೆ, ಈ ಶಾಲೆ ವಿದ್ಯಾರ್ಥಿಗಳು ಮುಕ್ತವಾಗಿ ಕುಳಿತು ಅಧ್ಯಯನ ಮಾಡಲು ಒಂದು ತರಗತಿಯನ್ನೂ ಹೊಂದಿಲ್ಲ.
Madhya Pradesh: Children at a school study in open, drink canal water, eat salt & chapati in mid-day meal in Chhatarpur's Surajpura pic.twitter.com/Wp3TOyfVYE
— ANI (@ANI) January 9, 2018
ಈ ವಿಷಯದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಛತ್ತರ್ರ್ಪುರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
"ನಾನು ಅಲ್ಲಿಗೆ ಒಂದು ವಿಚಾರಣಾ ತಂಡವನ್ನು ಕಳುಹಿಸಿದ್ದೇನೆ. ಅವರು ಅಲ್ಲಿನ ಮಧ್ಯಾಹ್ನದ ಊಟದಲ್ಲಿ ಅಕ್ರಮ ನಡೆಯುತ್ತಿರುವುದನ್ನು ಗಮನಿಸಿದ್ದು, ನಾವು ಅದರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ" ಮಧ್ಯ ದಿನದ ಊಟದಲ್ಲಿ ಅಕ್ರಮಗಳಾಗಿದ್ದೇವೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಆದರೆ ನೀರಿನ ಸಮಸ್ಯೆ ಇಲ್ಲ" ಎಂದು ಛತ್ತರ್ರ್ಪುರ್ ಡಿಎಂ ರಮೇಶ್ ಭಂಡಾರಿ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಅಚಾನಾ ಚಿಟ್ನಿಸ್ ಮಾತನಾಡಿ, ತಪ್ಪು ಮಾಡಿದವರನ್ನು ಕೆಲಸದಿಂದ ವಜಾಮಾಡಲಾಗಿದೆ ಎಂದು ಹೇಳಿದರು. "ನಾನು ಛತ್ತರ್ರ್ಪುರ್ ಕಲೆಕ್ಟರ್ ಜೊತೆ ಮಾತನಾಡಿದ್ದೇನೆ, ಈ ಅವ್ಯವಹಾರಕ್ಕಾಗಿ ಜವಾಬ್ದಾರರಾದ ಜನರನ್ನು ತೆಗೆದುಹಾಕಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಈ ವಿಷಯದ ಕುರಿತು ಮೇಲ್ವಿಚಾರಣೆಗೆ ತಂಡವನ್ನು ರಚಿಸಲಾಗಿದೆ" ಎಂದು ಅವರು ಹೇಳಿದ್ದಾರೆ.