ಮಾಸ್ಕ್‌ ಧರಿಸದೇ ರಸ್ತೆಗಿಳಿಯುವವರಿಗೆ ಕಡಿವಾಣ ಹಾಕಲು ಈ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ

ಉತ್ತರಪ್ರದೇಶದಲ್ಲಿ 4 ಲಕ್ಷ 17 ಸಾವಿರ 437 ಜನರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 6092 ಜನರು ಪ್ರಾಣ ಕಳೆದುಕೊಂಡಿದ್ದಾರೆ.

Last Updated : Oct 7, 2020, 11:10 AM IST
  • ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
  • ಮಾಸ್ಕ್‌ಗಳಿಲ್ಲದೆ ಹೊರಗೆ ಹೋಗುವ ಜನರಿಗೆ ಉತ್ತರ ಪ್ರದೇಶದಲ್ಲಿ ಮೊದಲ ಮತ್ತು ಎರಡನೇ ಬಾರಿಗೆ 100 ರೂ.ಗಳ ದಂಡ ವಿಧಿಸಲಾಗುತ್ತದೆ.
  • ಮೂರನೇ ಬಾರಿಗೆ ಮುಖ ಕವರ್ ಅಥವಾ ಮಾಸ್ಕ್ ಧರಿಸದೆ ಮನೆಯಿಂದ ಹೊರಬಂದರೆ 500 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.
ಮಾಸ್ಕ್‌ ಧರಿಸದೇ ರಸ್ತೆಗಿಳಿಯುವವರಿಗೆ ಕಡಿವಾಣ ಹಾಕಲು ಈ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ  title=

ಲಕ್ನೋ: ಉತ್ತರಪ್ರದೇಶದಲ್ಲಿ ಕೊರೊನಾವೈರಸ್ ಸೋಂಕನ್ನು ತಡೆಗಟ್ಟಲು ಮಾಸ್ಕ್‌ಗಳನ್ನು ಅನ್ವಯಿಸಲು ಮತ್ತು  ಸಾಮಾಜಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚನೆಗಳನ್ನು ನೀಡಲಾಗಿದೆ. ಉತ್ತರ ಪ್ರದೇಶ (Uttar Pradesh) ರಾಜ್ಯದಲ್ಲಿ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಮಾಹಿತಿ ನೀಡಿದ್ದು, ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್ ಈ ಬಗ್ಗೆ ಮಾತನಾಡಿ , ಉತ್ತರ ಪ್ರದೇಶದಲ್ಲಿ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಪೊಲೀಸರಿಗೆ (UP Police) ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಯಾರು ಮಾಸ್ಕ್‌ಗಳನ್ನು ಬಳಸುವುದಿಲ್ಲ ಅಂತಹವರಿಗೆ ದಂಡ ವಿಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಾರ್ವಜನಿಕರೇ ಎಚ್ಚರ! ಇನ್ಮುಂದೆ ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಭಾರೀ ದಂಡ

ಮಾಸ್ಕ್‌ಗಳನ್ನು ಧರಿಸದಿದ್ದಕ್ಕಾಗಿ ಏನು ದಂಡ?

  • ಮಾಸ್ಕ್‌ಗಳಿಲ್ಲದೆ ಹೊರಗೆ ಹೋಗುವ ಜನರಿಗೆ ಉತ್ತರ ಪ್ರದೇಶದಲ್ಲಿ ಮೊದಲ ಮತ್ತು ಎರಡನೇ ಬಾರಿಗೆ 100 ರೂ.ಗಳ ದಂಡ ವಿಧಿಸಲಾಗುತ್ತದೆ.
  • ಮೂರನೇ ಬಾರಿಗೆ ಮುಖ ಕವರ್ ಅಥವಾ ಮಾಸ್ಕ್ (Mask) ಧರಿಸದೆ ಮನೆಯಿಂದ ಹೊರಬಂದರೆ 500 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. 
  • ಇದಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ದಂಡ ವಿಧಿಸಲು ಅವಕಾಶವಿದೆ.

VIDEO: ಮಾಸ್ಕ್ ಬದಲಿಗೆ ಹಾವು ಧರಿಸಿ ಬಸ್‌ನಲ್ಲಿ ಹತ್ತಿದ ವ್ಯಕ್ತಿ, ಮುಂದೆ...!

ಉತ್ತರ ಪ್ರದೇಶದಲ್ಲಿ ಕರೋನದ 45 ಸಾವಿರ ಸಕ್ರಿಯ ಪ್ರಕರಣಗಳು:
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಂಒಹೆಚ್‌ಡಬ್ಲ್ಯು) ಅಂಕಿಅಂಶಗಳ ಪ್ರಕಾರ ಉತ್ತರಪ್ರದೇಶದಲ್ಲಿ ಈವರೆಗೆ 4 ಲಕ್ಷ 17 ಸಾವಿರ 437 ಜನರು ಕರೋನಾವೈರಸ್‌ (Coronavirus)ಗೆ ತುತ್ತಾಗಿದ್ದಾರೆ, ಈ ಪೈಕಿ 6092 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾಂಕ್ರಾಮಿಕ ರೋಗದಿಂದ ಈವರೆಗೆ 3 ಲಕ್ಷ 66 ಸಾವಿರ 321 ಜನರನ್ನು ಗುಣಪಡಿಸಲಾಗಿದ್ದು, 45024 ಸಕ್ರಿಯ ಪ್ರಕರಣಗಳು ಉತ್ತರಪ್ರದೇಶದಲ್ಲಿವೆ.
 

Trending News