ಮಲ ತಂದೆಯಿಂದ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಸಂತ್ರಸ್ತ ಬಾಲಕಿ ಮಲತಂದೆ ಆರೋಪಿ ವಾಸೀಂ ಮತ್ತು ಆತನ ಸಂಬಂಧಿ ತನ್ವೀರ್ ವಿರುದ್ಧ ದೂರು ದಾಖಲಿಸಲಾಗಿದೆ.

Last Updated : Jan 6, 2019, 05:54 PM IST
ಮಲ ತಂದೆಯಿಂದ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ title=

ಮುಜಾಫರನಗರ: 16 ವರ್ಷದ ಬಾಲಕಿ ಮೇಲೆ ಮಲತಂದೆ ಅತ್ಯಾಚಾರ ಎಸಗಿದ್ದಲ್ಲದೆ, ಅದನ್ನು ಆತನ ಸಂಬಂಧಿ ವೀಡಿಯೋ ಮಾಡಿದ ವಿಕೃತ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಖಂಡ್ಲಾ ಪಟ್ಟಣದಲ್ಲಿ ಶನಿವಾರ ನಡೆದಿದೆ. 

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೋಲಿಸ್ ಅಧಿಕಾರಿ ರಾಜೇಶ್ ಕುಮಾರ್ ತಿವಾರಿ ಅವರು, ಸಂತ್ರಸ್ತ ಬಾಲಕಿ ಮಲತಂದೆ ಆರೋಪಿ ವಾಸೀಂ ಮತ್ತು ಆತನ ಸಂಬಂಧಿ ತನ್ವೀರ್ ವಿರುದ್ಧ ದೂರು ದಾಖಲಿಸಲಾಗಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಇವರಿಬ್ಬರ ವಿರುದ್ಧ ಪೋಕ್ಸೋ(POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಅತ್ಯಾಚಾರದ ಬಗ್ಗೆ ಇತರರಿಗೆ ಹೇಳಿದರೆ ವೀಡಿಯೋವನ್ನು ವೈರಲ್ ಮಾಡುವುದಾಗಿ ಆರೋಪಿ ವಾಸೀಂ ಮತ್ತು ತನ್ವೀರ್ ಬಾಲಕಿಗೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮೊದಲನೇ ಪತಿ ನಿಧನರಾದ ಬಳಿಕ ವಾಸೀಮ್ ನನ್ನು ಮದುವೆಯಾಗಿದ್ದಾಗಿ ಸಂತ್ರಸ್ತೆಯ ತಾಯಿ ಹೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. 

Trending News