ನವದೆಹಲಿ: ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆ ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಲ್ಲಿ CURFEW ಜಾರಿಗೊಳಿಸಿವೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಸಂಬೋಧಿಸಿರುವ ಮಹಾರಾಷ್ಟ್ರದ ಮುಖಮಂತ್ರಿ ಉದ್ಧವ್ ಠಾಕ್ರೆ, ಇಂದು ಮಧ್ಯ ರಾತ್ರಿಯಿಂದ ಈ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಿದ್ದಾರೆ. ಪ್ರದೇಶದಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆಯಾಗಿದ್ದರೂ ಕೂಡ ನಾಗರಿಕರು ನಿರಂತರವಾಗಿ ಇದರ ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದೆ ರೀತಿ ಪಂಜಾಬ್ ನಲ್ಲಿಯೂ ಕೂಡ ಕರ್ಫ್ಯೂ ಜಾರಿಯಾಗಿದೆ. ಸದ್ಯ ಕೊರೊನಾ ವೈರಸ್ ನ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು, ಕೊರೊನಾ ಸೋಂಕಿಗೆ ಗುರಿಯಾದವರ ಸಂಖ್ಯೆ ಇದೀಗ 89ಕ್ಕೆ ತಲುಪಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ನ ಪ್ರಕರಣಗಳ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿರುವ ಉದ್ಧವ್ ಠಾಕ್ರೆ, "ಎಷ್ಟೇ ಮನವಿ ಮಾಡಿದರು ಕೂಡ ಜನರು ಸರ್ಕಾರದ ಎಚ್ಚರಿಕೆಯನ್ನು ಕಡೆಗಣಿಸುತ್ತಿದ್ದು, ಕರ್ಫ್ಯೂ ಅನಿವಾರ್ಯವಾಗಿದೆ. ಈ ವೇಳೆ ರಾಜ್ಯದ ಎಲ್ಲ ಧಾರ್ಮಿಕ ಸ್ಥಳಗಳು ಬಂದ್ ಇರಲಿವೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಖಾಸಗಿ ವಾಹನಗಳು ರಸ್ತೆಯ ಮೇಲೆ ಸಂಚರಿಸಬಾರದು. ಆದರೆ, ಇದೇವೇಳೆ ಕರ್ಫ್ಯೂ ಕಾಲಾವಧಿಯಲ್ಲಿ ರೇಶನ್ ಅಂಗಡಿಗಳು, ಬೇಕರಿ, ಮೆಡಿಕಲ್ ಶಾಪ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ" ಎಂದು ಹೇಳಿದ್ದಾರೆ.
CURFEW ಹಾಗೂ LOCKDOWN ನಡುವಿನ ಅಂತರ ಏನು?
ಇದೆ ಮೊದಲ ಬಾರಿಗೆ ದೇಶದ ಜನರು LOCKDOWN ಎದುರಿಸುತ್ತಿದ್ದಾರೆ. ಆದರೆ, CURFEW ಅಂದರೆ ಸಂಪೂರ್ಣ ಬಂದ್ ಎಂದು ಜನರು ಭಾವಿಸುತ್ತಾರೆ. 1893ರಲ್ಲಿ ಮೊದಲ ಬಾರಿಗೆ ಎಪಿಡೆಮಿಕ್ ಅಂದರೆ ಮಹಾಮಾರಿ ಕಾಯ್ದೆಯನ್ನು ಅನುಮೊದಿಸಲಾಗಿತ್ತು. ಈ ಕಾಯ್ದೆಯ ಅಡಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಆರೋಗ್ಯ ಅಧಿಕಾರಿಗಳಿಗೆ ತಮ್ಮ ಪ್ರದೇಶಗಳಲ್ಲಿ ಲಾಕ್ ಡೌನ್ ಮಾಡುವ ಅಧಿಕಾರ ನೀಡಲಾಗಿತ್ತು. ಇದನ್ನು ಜಾರಿಗೊಳಿಸಲಾದ ಬಳಿಕ ಒಟ್ಟಿಗೆ ಐವರು ಸಂಚರಿಸುವುದರ ಮೇಲೆ ನಿರ್ಬಂಧ ವಿಧಿಸಲಾಗುತ್ತಿತ್ತು.
ಲಾಕ್ ಡೌನ್ ವೇಳೆ ಅತ್ಯಾವಶ್ಯಕ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ರೇಶನ್ ಹಾಗೂ ಚಿಲ್ಲರೆ ವ್ಯಾಪಾರಿ ಅಂಗಡಿಗಳು ತೆರೆದುಕೊಳ್ಳುತ್ತಿದ್ದವು. ಬ್ಯಾಂಕ್ ಹಾಗೂ ATMಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ರೆಸ್ಟಾರೆಂಟ್ ಗಳು ತೆರೆದುಕೊಳ್ಳುತ್ತವೆ. ಹಾಲು ಮತ್ತು ತರಕಾರಿ ಅಂಗಡಿಗಳು ಎಂದಿನಂತೆ ತೆರೆದುಕೊಳ್ಳುತ್ತವೆ. ಮಾಧ್ಯಮ ಪ್ರತಿನಿಧಿಗಳ ಸಂಚಾರದ ಮೇಲೆ ಯಾವುದೇ ರೀತಿಯ ನಿರ್ಬಂಧನೆ ಇರುವುದಿಲ್ಲ. ಲಾಕ್ ಡೌನ್ ನಿಯಮಗಳ ಉಲ್ಲಂಘನೆ IPC ಸೆಕ್ಷನ್ ಗಳಾದ 269 ಹಾಗೂ 27೦ ಗಳ ಉಲ್ಲಂಘನೆಯಾಗಿದೆ ಹಾಗೂ ಅತಿ ಹೆಚ್ಚು ಅಂದರೆ 6 ತಿಂಗಳುಗಳ ಜೈಲು ಶಿಕ್ಷೆಗೂ ಅವಕಾಶ ಇದೆ. ಕ್ವಾರಂಟೀನ್ ನಿಂದ ಪರಾರಿಯಾಗುವವರ ಮೇಲೆ IPC ಸೆಕ್ಷನ್ 271 ಅನ್ವಯಿಸುತ್ತದೆ. ಆದರೆ, ಈ ಅಪರಾಧಗಳಲ್ಲಿ ಪೊಲೀಸರು ನ್ಯಾಯಾಲಯದ ಅನುಮತಿ ಇಲ್ಲದೆ ಯಾರನ್ನು ಬಂಧಿಸುವಂತಿಲ್ಲ.
ಕರ್ಫ್ಯೂ ಅಂದರೆ ಏನು?
ಕರ್ಫ್ಯೂ ಜಾರಿಗಾಗುತ್ತಲೇ ಎಲ್ಲ ಅಧಿಕಾರಗಳು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ಕಮಿಷನರ್ ಅಡಿ ಸೇರುತ್ತವೆ. IPCಯ ಸೆಕ್ಷನ್ 144 ಅಡಿ ಕರ್ಫ್ಯೂ ವಿಧಿಸಲಾಗುತ್ತದೆ. ಇದರ ಉಲ್ಲಂಘನೆ IPC 188ರ ಅಡಿ ದಂಡನೀಯ ಅಪರಾಧವಾಗಿದೆ. ಯಾರಾದರು ಇದನ್ನು ಉಲ್ಲಂಘಿಸಿದರೆ ಪೊಲೀಸರು ಅವರನ್ನು ನೇರವಾಗಿ ಬಂಧಿಸಬಹುದು. ಆದರೆ, ಲಾಕ್ ಡೌನ್ ನಲ್ಲಿ ಪೊಲೀಸರಿಗೆ ಈ ಅಧಿಕಾರ ಇರುವುದಿಲ್ಲ. ಕರ್ಫ್ಯೂ ಜಾರಿಯಾಗಿತ್ತಲೇ ಜಿಲ್ಲಾ ಆಡಳಿತಕ್ಕೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಅಧಿಕಾರ ಇರುತ್ತದೆ. ಕರ್ಫ್ಯೂ ಪಾಸ್ ಇಲ್ಲದೆ ಯಾರು ಮನೆಯಿಂದ ಹೊರಗೆ ಬೀಳುವಂತಿಲ್ಲ. ಈ ಅವಧಿಯಲ್ಲಿ ಬ್ಯಾಂಕ್ ಸೇವೆ, ರೇಶನ್ ಅಂಗಡಿಗಳು, ಹಾಲು ಹಾಗೂ ತರಕಾರಿ ಮಾರಾಟವನ್ನು ಸಹ ನಿರ್ಬಂಧಿಸಲಾಗುತ್ತದೆ. ರೆಸ್ಟಾರೆಂಟ್ ಗಳೂ ಕೂಡ ಬಂದ್ ಇರಲಿವೆ. ರಸ್ತೆಯ ಮೇಲೆ ಕೇವಲ ಜಿಲ್ಲಾಡಳಿತ ಹಾಗೂ ಪೋಲೀಸ್ ಅಧಿಕಾರಿಗಳು ಮಾತ್ರ ಕಾಣಿಸಿಕೊಳ್ಳುತ್ತಾರೆ. ಆಸ್ಪತ್ರೆ ಹಾಗೂ ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಅತ್ಯಾವಶ್ಯಕ ಸೌಕರ್ಯಗಳ ಮೇಲೆ ನಿರ್ಬಂಧನೆ ವಿಧಿಸಲಾಗುತದೆ. ಎಲ್ಲಕ್ಕಿಂತ ಹೆಚ್ಚಾಗಿ ಲಾಕ್ ಡೌನ್ ವೇಳೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳಲು ಶಕ್ಯವಿಲ್ಲ. ಆದರೆ, ಕರ್ಫ್ಯೂ ಉಲ್ಲಂಘಿಸುವವರ ವಿರುದ್ದ ಪೊಲೀಸರು ಕ್ರಮಕೈಗೊಳ್ಳಬಹುದು.