ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ?

ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಾರಾಷ್ಟ್ರದಲ್ಲೇ ಇದೆ. 

Last Updated : May 22, 2020, 08:40 AM IST
ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ? title=

ನವದೆಹಲಿ: ‌ಕೊರೋನಾ ವೈರಸ್  ಕೋವಿಡ್ -19 (Covid-19) ತಡೆಯಬೇಕೆಂದು ಒಂದಲ್ಲ, ಎರಡಲ್ಲ, ಮೂರು ಬಾರಿ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆದರೂ ಕೊರೊನಾ ‌ಸೋಂಕು‌ ಹರಡುವಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಬಹಳ ತೀವ್ರವಾಗಿ ಹರಡುತ್ತಿದೆ. ಪರಿಣಾಮವಾಗಿ ಈಗಾಗಲೇ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1 ಲಕ್ಷದ ಗಡಿಯನ್ನೂ ದಾಟಿದೆ. ಜೊತೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3 ಸಾವಿರದ ದಾಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ದೇಶದ ಯಾವ್ಯಾವ ರಾಜ್ಯಗಳಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಎಷ್ಟೆಷ್ಟಿದೆ ಎಂಬುದನ್ನು ಇಲ್ಲಿ‌ ಪ್ರಸ್ತುತ ಪಡಿಸಲಾಗುತ್ತಿದೆ.

ದೇಶದ ಕೊರೊನಾವೈರಸ್ (Coronavirus) ಪೀಡಿತರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಾರಾಷ್ಟ್ರದಲ್ಲೇ ಇದೆ. ಹಾಗಾಗಿ ಅದೇ ಮೊದಲ ಸ್ಥಾನದಲ್ಲಿದೆ. ಎತಡನೇ ಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ಇದೆ. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ ಸೋಂಕು ಪೀಡಿತರು ಮತ್ತು ಒಟ್ಟು ಸೋಂಕು ಪೀಡಿತರ ವಿವರ ಈ‌ ರೀತಿ ಇದೆ.

  1. ಮಹಾರಾಷ್ಟ್ರ: 2,345 ಹೊಸ ಪ್ರಕರಣಗಳು; ಒಟ್ಟು 41,642
  2. ತಮಿಳುನಾಡು: 776 ಹೊಸ ಪ್ರಕರಣಗಳು, ಒಟ್ಟು 13,967 
  3. ಗುಜರಾತ್: 371 ಹೊಸ ಪ್ರಕರಣಗಳು; ಒಟ್ಟು 12,910
  4. ರಾಜಸ್ಥಾನ: 212 ಹೊಸ ಪ್ರಕರಣಗಳು; ಒಟ್ಟು 6,227
  5. ಮಾಧ್ಯಪ್ರದೇಶ: 248 ಹೊಸ ಪ್ರಕರಣಗಳು; ಒಟ್ಟು 5,981
  6. ಉತ್ತರ ಪ್ರದೇಶ: 340 ಹೊಸ ಪ್ರಕರಣಗಳು; ಒಟ್ಟು 5,515 
  7. ಪಶ್ಚಿಮ‌ಬಂಗಾಳ : 94 ಹೊಸ ಪ್ರಕರಣಗಳು; ಒಟ್ಟು 3,197 
  8. ಪಂಜಾಬ್: 23 ಹೊಸ ಪ್ರಕರಣಗಳು; ಒಟ್ಟು 2,028 
  9. ಬಿಹಾರ: 7 ಹೊಸ ಪ್ರಕರಣಗಳು; ಒಟ್ಟು 1,987
  10. ತೆಲಂಗಾಣ: 38 ಹೊಸ ಪ್ರಕರಣಗಳು; 1,699
  11. ಕರ್ನಾಟಕ: 143 ಹೊಸ ಪ್ರಕರಣಗಳು; ಒಟ್ಟು 1,605
  12. ಜಮ್ಮು ಕಾಶ್ಮೀರ: 59 ಹೊಸ ಪ್ರಕರಣಗಳು; ಒಟ್ಟು 1,449
  13. ಹರಿಯಾಣ: 38 ಹೊಸ ಪ್ರಕರಣಗಳು; ಒಟ್ಟು 1,031 
  14. ಒಡಿಶಾ: 703 ಸಕ್ರಿಯ ಪ್ರಕರಣಗಳು; ಒಟ್ಟು 1,103 
  15. ಕೇರಳ: 24 ಹೊಸ ಪ್ರಕರಣಗಳು; ಒಟ್ಟು 690
  16. ಜಾರ್ಖಂಡ್: 9 ಹೊಸ ಪ್ರಕರಣಗಳು; ಒಟ್ಟು 303 
  17. ಚಂಡೀಗಢ: 37 ಸಕ್ರಿಯ ಪ್ರಕರಣಗಳು; ಒಟ್ಟು 218 
  18. ಅಸ್ಸಾಂ: 4 ಹೊಸ ಪ್ರಕರಣಗಳು; ಒಟ್ಟು 203
  19. ಉತ್ತರಾಖಂಡ: 24 ಹೊಸ ಪ್ರಕರಣಗಳು; ಒಟ್ಟು 146 
  20. ಹಿಮಾಚಲ ಪ್ರದೇಶ: 31 ಹೊಸ ಪ್ರಕರಣಗಳು; ಒಟ್ಟು 141 
  21. ಗೋವಾ: 2 ಹೊಸ ಪ್ರಕರಣಗಳು; ಒಟ್ಟು 52

Trending News