ಬಂದ್ ಆಗಲಿವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(SBI) 9 ಶಾಖೆಗಳು

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿದೇಶಿ ಶಾಖೆಗಳಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗೆ ಉಪಯೋಗವಾಗಲಿದೆ.  

Last Updated : Jun 28, 2018, 11:07 AM IST
ಬಂದ್ ಆಗಲಿವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(SBI) 9 ಶಾಖೆಗಳು title=

ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿದೇಶಿ ಶಾಖೆಗಳಲ್ಲಿ ಖಾತೆ ಹೊಂದಿದ್ದರೆ, ಈ ಸುದ್ದಿ ನಿಮಗೆ ಉಪಯೋಗವಾಗಲಿದೆ. ವಾಸ್ತವವಾಗಿ, ವಿದೇಶದಲ್ಲಿರುವ 9 ಶಾಖೆಗಳನ್ನು ಮುಚ್ಚಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೋಜಿಸಿದೆ. ಇದಕ್ಕೂ ಮುಂಚೆ, SBI ವಿದೇಶದಲ್ಲಿದ್ದ 6 ಶಾಖೆಗಳನ್ನು ಬಂದ್ ಮಾಡಿತ್ತು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕೆ. ಗುಪ್ತಾ ವಿದೇಶಿ ವ್ಯವಹಾರಗಳ ಮರುಸಂಘಟನೆಯ ಅಡಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಸುದ್ದಿ ಸಂಸ್ಥೆಯ ಪಿಟಿಐಗೆ ತಿಳಿಸಿದ್ದಾರೆ. ಕಳೆದ ವರ್ಷ ಈ ಬಗ್ಗೆ ಚರ್ಚಿಸಲಾಗಿತ್ತು. SBI ಪ್ರಸ್ತುತ 36 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಅದು ಒಟ್ಟು 190 ಶಾಖೆಗಳನ್ನು ಹೊಂದಿದೆ.

ಶಾಖೆಗಳನ್ನು ಬಂದ್ ಮಾಡಲು ಕಾರಣ?
ಪ್ರವೀಣ್ ಗುಪ್ತಾ ಪ್ರಕಾರ, ಬ್ಯಾಂಕುಗಳು ಬಂಡವಾಳದ ಸಮಸ್ಯೆಗಳನ್ನು ಹೊಂದಿವೆ, ಈ ಸಂದರ್ಭದಲ್ಲಿ ಹೆಚ್ಚು ಉತ್ತಮವಾದ ಸ್ಥಳದಲ್ಲಿ ಬಂಡವಾಳೀಕರಣ ಅಗತ್ಯವಾಗಿದೆ. ಈ ತಂತ್ರದಡಿಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕ್ ತನ್ನ 6 ವಿದೇಶಿ ಶಾಖೆಗಳನ್ನು ಮುಚ್ಚಿದೆ. ಇದಲ್ಲದೆ, 9 ವಿದೇಶಿ ಶಾಖೆಗಳನ್ನು ಮುಚ್ಚುವ ಯೋಜನೆಯನ್ನು ಹೊಂದಿದೆ. ವಿದೇಶದಲ್ಲಿ ಎಲ್ಲಾ ಸ್ಥಳಗಳಲ್ಲಿ ಪೂರ್ಣ ಪ್ರಮಾಣ ವ್ಯವಸ್ಥೆ ಹೊಂದಿರುವ ಕಚೇರಿಗಳಿಲ್ಲ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಣ್ಣ ಶಾಖೆಗಳಿರುವಂತೆಯೇ ಅನೇಕ ಸ್ಥಳಗಳಲ್ಲಿ ಸಣ್ಣ ಸಣ್ಣ ಖಾತೆಗಳಿವೆ. ಅವುಗಳನ್ನು ಪುನರ್ ರಚನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಹಣಕಾಸು ಇಲಾಖೆ ಸಹ ಆದೇಶ ನೀಡಿದೆ
ಪ್ರವೀಣ್ ಗುಪ್ತಾ ಪ್ರಕಾರ, ವಿದೇಶಗಳಲ್ಲಿ ಪ್ರಾಯೋಗಿಕವಾಗಿಲ್ಲದ ಶಾಖೆಗಳನ್ನು ಮುಚ್ಚಬೇಕೆಂಬ ಹಣಕಾಸು ಇಲಾಖೆಯ ಆದೇಶವನ್ನೂ ಸಹ ಹೊಂದಿದೆ. ಅವರ ಪ್ರಕಾರ, ಎಸ್ಬಿಐ ಸರ್ಕಾರದ ಆದೇಶಕ್ಕೂ ಮುಂಚೆಯೇ ಈ ಯೋಜನೆಯಲ್ಲಿ ಕೆಲಸ ಮಾಡಿದೆ.

ವಿದೇಶಗಳಲ್ಲಿ ಶಾಖೆಗಳನ್ನು ಮುಚ್ಚುವ ಮೂಲಕ ಸಂಪೂರ್ಣ ಕಾರ್ಯಾಚರಣೆಗಳನ್ನು ತೆಗೆದುಹಾಕುವ ಬಗ್ಗೆ ಮಾತನಾಡಿದ ಪ್ರವೀಣ್ ಗುಪ್ತಾ, ಎಸ್ಬಿಐ ಕೇವಲ ಶಾಖೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದರು. ಅದು ಆ ದೇಶದಲ್ಲಿ ವ್ಯವಹಾರವನ್ನು ಮುಚ್ಚುತ್ತಿದೆ ಎಂದು ಅರ್ಥವಲ್ಲ. ಎಸ್ಬಿಐ ಕೇವಲ ಒಂದು ಅಥವಾ ಎರಡು ಶಾಖೆಗಳೊಂದಿಗೆ ಸಣ್ಣ ಶಾಖೆ ಅಥವಾ ವಿಲೀನವನ್ನು ಮುಚ್ಚುತ್ತಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ಮುಂಬರುವ ಮೂರು ವರ್ಷಗಳಲ್ಲಿ ಕೋರ್-ಅಲ್ಲದ ವ್ಯಾಪಾರವನ್ನು ಸಮನ್ವಯಗೊಳಿಸಲು ನಿರ್ಧರಿಸಿದೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಬ್ಯಾಂಕ್ ಈ ನಿರ್ಧಾರ ಮಾಡಿದೆ. ಹಣಕಾಸು ಸಚಿವಾಲಯದ ಅಂಗಸಂಸ್ಥೆಯಾದ ಹಣಕಾಸು ಸೇವೆಗಳ ಇಲಾಖೆ (DFS) ಸುಧಾರಣೆಯ ಈ ಹಂತದ ಬಗ್ಗೆ ತಕ್ಷಣದ ಕ್ರಮವನ್ನು ಕೇಳಿದೆ.

Trending News