ರಾಜಸ್ಥಾನ ಖತುಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತ, ಮೂವರು ಭಕ್ತರ ಸಾವು ಹಲವರು ಗಂಭೀರ

Khatushyam Temple Stampede: ಖತುಶ್ಯಾಮ್ ಜಿ ದೇವಸ್ಥಾನವು ರಾಜಸ್ಥಾನದ ಸಿಕಾರ್‌ನಲ್ಲಿದೆ.  ಇಲ್ಲಿ ನಡೆಯುತ್ತಿರುವ ಮಾಸಿಕ ಜಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.   

Written by - Ranjitha R K | Last Updated : Aug 8, 2022, 09:06 AM IST
  • ರಾಜಸ್ಥಾನದ ದೇವಸ್ಥಾನದಲ್ಲಿ ಕಾಲ್ತುಳಿತ
  • ಘಟನೆಯಲ್ಲಿ ಮೂವರು ಭಕ್ತರ ಸಾವು
  • ಇನ್ನೂ ಅನೇಕ ಮಂದಿಗೆ ಗಾಯ
ರಾಜಸ್ಥಾನ ಖತುಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತ, ಮೂವರು  ಭಕ್ತರ ಸಾವು ಹಲವರು ಗಂಭೀರ  title=
Khatushyam Temple Stampede

Khatushyam Temple Stampede : ರಾಜಸ್ಥಾನದ ಖತುಶ್ಯಾಮ್ ಜಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮೂವರು ಭಕ್ತರು ಮೃತಪಟ್ಟಿದ್ದು, ಅನೇಕ ಮಂದಿ ಭಕ್ತರು ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಾಯಗೊಂಡ ಮೂವರು ಯಾತ್ರಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಲು ಏನು ಕಾರಣ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. 

ಗಾಯಗೊಂಡ ಇಬ್ಬರು ಯಾತ್ರಾರ್ಥಿಗಳನ್ನು ಜೈಪುರಕ್ಕೆ  ರವಾನೆ : 
ಖತುಶ್ಯಾಮ್ ಜಿ ದೇವಸ್ಥಾನವು ರಾಜಸ್ಥಾನದ ಸಿಕಾರ್‌ನಲ್ಲಿದೆ. ಇಲ್ಲಿ ನಡೆಯುತ್ತಿರುವ ಮಾಸಿಕ ಜಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡ ಇಬ್ಬರನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಪೊಲೀಸ್  ಭದ್ರತೆ ಏರ್ಪಡಿಸಲಾಗಿದೆ. 

ಇದನ್ನೂ ಓದಿ : IAF Recruitment 2022 : ಭಾರತೀಯ ವಾಯುಪಡೆಯಲ್ಲಿ 152 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ

 ಅವಘಡಕ್ಕೆ ಕಾರಣ ಏನು ? 
ಇಂದು ಅಂದರೆ ಸೋಮವಾರ ಸೋಮವಾರ  ಮುಂಜಾನೆ 5 ಗಂಟೆಗೆ ಖತುಶ್ಯಾಮ್ ಜಿ ದೇವಸ್ಥಾನದ ಪ್ರವೇಶದ್ವಾರವನ್ನು ತೆರೆಯುತ್ತಿದ್ದಂತೆಯೇ ಜನಸಂದಣಿ ಒಮ್ಮೆಲೇ ಹೆಚ್ಚಾದ ಕಾರಣ ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಮೂವರು ಮಹಿಳಾ ಭಕ್ತರು ಸಾವನ್ನಪ್ಪಿದ್ದಾರೆ.ಆದರೂ ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಹೆ ಆರಂಭಿಸಿದ್ದಾರೆ. 

ಮೃತರ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತ:
 ಒಬ್ಬ ಮೃತ ಮಹಿಳೆಯನ್ನು ಗುರುತಿಸಲಾಗಿದ್ದು, ಇನ್ನಿಬ್ಬರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.  ಸಾವನ್ನಪ್ಪಿದವರ  ಮೃತದೇಹಗಳನ್ನು  ಖತುಶ್ಯಾಮ್ ಜಿ ಸಿಎಚ್‌ಸಿಯ ಶವಾಗಾರದಲ್ಲಿ ಇರಿಸಲಾಗಿದೆ. 
 
ಇದನ್ನೂ ಓದಿ : Eknath Shinde : ಸಚಿವ ಸಂಪುಟ ವಿಸ್ತರಣೆ : ಅಧಿಕಾರಿಗಳಿಗೆ ‘ಸೂಪರ್ ಪವರ್’ ನೀಡಿದ ಸಿಎಂ ಶಿಂಧೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News