ಎಸ್ಪಿ-ಬಿಎಸ್ಪಿ ಮೈತ್ರಿಕೂಟ ದೇಶಕ್ಕೆ ನೂತನ ಪ್ರಧಾನಿ ಕೊಡುಗೆ ನೀಡಲಿದೆ -ಅಖಿಲೇಶ್ ಯಾದವ್

ನಾಲ್ಕನೇ ಹಂತದ ಲೋಕಸಭಾ ಚುನಾವಣಾ ಪ್ರಚಾರದ ದೇಶದೆಲ್ಲಡೆ ತೀವ್ರಗೊಂಡಿದ್ದು, ಈಗ ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಮುಂದಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಸವಾಲಾಗಿರುವ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ರಾಜಕೀಯ ಸಮೀಕರಣದ ಬದಲಾವಣೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Last Updated : Apr 25, 2019, 04:50 PM IST
ಎಸ್ಪಿ-ಬಿಎಸ್ಪಿ ಮೈತ್ರಿಕೂಟ ದೇಶಕ್ಕೆ ನೂತನ ಪ್ರಧಾನಿ ಕೊಡುಗೆ ನೀಡಲಿದೆ -ಅಖಿಲೇಶ್ ಯಾದವ್   title=

ನವದೆಹಲಿ: ನಾಲ್ಕನೇ ಹಂತದ ಲೋಕಸಭಾ ಚುನಾವಣಾ ಪ್ರಚಾರದ ದೇಶದೆಲ್ಲಡೆ ತೀವ್ರಗೊಂಡಿದ್ದು, ಈಗ ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಮುಂದಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಸವಾಲಾಗಿರುವ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ರಾಜಕೀಯ ಸಮೀಕರಣದ ಬದಲಾವಣೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆ ಹಿನ್ನಲೆಯಲ್ಲಿ ಕನೌಜ್ ದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಎಸ್ಪಿ ನಾಯಕ ಅಖಿಲೇಶ್ ಯಾದವ್  "ದೇಶಕ್ಕೆ ಎಸ್ಪಿ -ಬಿಎಸ್ಪಿ ಮೈತ್ರಿಕೂಟ ನೂತನ ಪ್ರಧಾನಿಯ ಕೊಡುಗೆ ನೀಡಲಿದೆ " ಎಂದು ಹೇಳಿದರು. 

ಇನ್ನೊಂದೆಡೆ ಪ್ರಧಾನಿ ಮೋದಿ ವಾರಣಾಸಿಯಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ಈ ಕ್ಷೇತ್ರದಿಂದ ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಬಿಜೆಪಿ 70ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಏಕಾಏಕಿ ಪ್ರಾಬಲ್ಯವನ್ನು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಮತಗಳು ಚದುರಿ ಹೋಗದಂತೆ ನೋಡಿಕೊಳ್ಳಲು ಜಾತಿ ಸಮೀಕರಣದ ಲೆಕ್ಕಾಚಾರಕ್ಕೆ ಮಾಯಾವತಿ ನೇತೃತ್ವದ ಬಿಎಸ್ಪಿ ಹಾಗೂ ಅಖಿಲೇಶ್ ಯಾದವ್ ಅವರ ಎಸ್ಪಿ ಪಕ್ಷ ಮುಂದಾಗಿವೆ ಎನ್ನಲಾಗಿದೆ.  

Trending News