ಸೀಲಿಂಗ್‌ನಿಂದ ಹಾಸಿಗೆ ಮೇಲೆ ಬಿದ್ದ ಬೃಹತ್ ಹಾವು! ಫೋಟೋ ನೋಡಿದ ನೆಟ್ಟಿಗರು ಶಾಕ್

ಸೀಲಿಂಗ್‌ನಿಂದ ಹಾಸಿಗೆ ಮೇಲೆ ಬೃಹತ್ ಹಾವೊಂದು ಬಿದ್ದ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಮನೆಯೊಂದರಲ್ಲಿ ನಡೆದಿದೆ.

Last Updated : Aug 20, 2019, 07:38 PM IST
ಸೀಲಿಂಗ್‌ನಿಂದ ಹಾಸಿಗೆ ಮೇಲೆ ಬಿದ್ದ ಬೃಹತ್ ಹಾವು! ಫೋಟೋ ನೋಡಿದ ನೆಟ್ಟಿಗರು ಶಾಕ್ title=

ನವದೆಹಲಿ: ಹಾಸಿಗೆಯ ಮೇಲೆ ಮುದ್ದಾದ ಬೆಕ್ಕೋ, ನಾಯಿ ಮರಿನೋ ಇದ್ದರೆ ಎಷ್ಟು ಚೆನ್ನಾಗಿರುತ್ತಲ್ವ.. ಆದ್ರೆ ಅದೇ ಹಾಸಿಗೆ ಮೇಲೆ ಹಾವು ಬಂದ್ರೆ!!! 

ಇಂತಹದ್ದೊಂದು ಘಟನೆ ನಡೆದಿರೋದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ. ಬೆಳಿಗ್ಗೆಯಿಂದ ಚೆನ್ನಾಗಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದ ಕೂಡಲೇ ಹಾಸಿಗೆ ಮೇಲೆ ಮಲಗಿ ರೆಸ್ಟ್ ಮಾಡ್ಬೇಕು ಅನ್ಸುತ್ತೆ. ಆದ್ರೆ ಅದೇ, ಹಾಸಿಗೆ ಮೇಲೆ ಹಾವು ನೋಡಿದ್ರೆ ಹೇಗಾಗಬಹುದು ಅಲ್ವಾ!

ಸನ್ ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಎಂಬ ಹಾವು ಹಿಡಿಯುವ ತಂಡವೊಂದು ಈ ವಿಷಯವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು, ಫೋಟೋಗಳನ್ನು ನೋಡಿದ ನೆಟ್ಟಿಗರು ಹೌಹಾರಿದ್ದಾರೆ. "ಮನೆಯೊಳಗೆ ಸೀಲಿಂಗ್ ನಿಂದ ತೂಗಿ ಬಿಡಲಾಗಿದ್ದ ದೀಪದ ಮೇಲೆ ನೇತಾಡುತ್ತಿದ್ದ ಹಾವು ನಿಯಂತ್ರಣ ತಪ್ಪಿ ಹಾಸಿಗೆಯ ಮೇಲೆ ಬಿದ್ದ ಘಟನೆ ಬಗ್ಗೆ ಅದರಲ್ಲಿ ವಿವರಿಸಲಾಗಿದೆ. ಅದೃಷ್ಟವಶಾತ್, ಹಾವು ಬಿದ್ದಾಗ ಹಾಸಿಗೆಯ ಮೇಲೆ ಯಾರೂ ಇರಲಿಲ್ಲ" ಎಂದು ಪೋಸ್ಟ್ ನಲ್ಲಿ ವಿವರಿಸಿದ್ದಾರೆ. 

ಅಷ್ಟೇ ಅಲ್ಲ, ಆ ಹಾವನ್ನು ಹಿಡಿದು, ಬಳಿಕ ಗುಡ್ಡಗಾಡು ಪ್ರದೇಶದಲ್ಲಿ ಬಿಡಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Trending News