ಯಾತ್ರಿಕರ ಬಸ್ ಮೇಲೆ ಪರ್ವತದ ಭಾಗ ಕುಸಿತ; 6 ಮಂದಿ ಸಾವು

ಚಮೋಲಿಯ ಲಂಬಾಬಾದ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಬದ್ರಿನಾಥ್ ಧಾಮ್‌ನಿಂದ ಹಿಂದಿರುಗುತ್ತಿದ್ದ ಯಾತ್ರಿಕರ ಬಸ್ ಅಪಘಾತಕ್ಕೀಡಾಗಿದೆ. 

Last Updated : Aug 6, 2019, 12:46 PM IST
ಯಾತ್ರಿಕರ ಬಸ್ ಮೇಲೆ ಪರ್ವತದ ಭಾಗ ಕುಸಿತ; 6 ಮಂದಿ ಸಾವು title=

ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿ ಪರ್ವತದ ಒಂದು ಭಾಗ ಪ್ರಯಾಣಿಕರಿಂದ ತುಂಬಿದ್ದ ಬಸ್ ಮೇಲೆ ಬಿದ್ದ ಪರಿಣಾಮ 5 ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. 

ಚಮೋಲಿಯ ಲಂಬಾಬಾದ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಬದ್ರಿನಾಥ್ ಧಾಮ್‌ನಿಂದ ಹಿಂದಿರುಗುತ್ತಿದ್ದ ಯಾತ್ರಿಕರ ಬಸ್ ಅಪಘಾತಕ್ಕೀಡಾಗಿದೆ. ಈ ಬಸ್‌ನಲ್ಲಿ 13 ಪ್ರಯಾಣಿಕರಿದ್ದರು ಎನ್ನಲಾಗಿದೆ. ಬಸ್‌ನ ಚಾಲಕ ಸೇರಿದಂತೆ 5 ಜನರನ್ನು ಪಾಂಡುಕೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೃತಪಟ್ಟ 6 ಮಂದಿ ಮುಂಬೈ ಮೂಲದವರು ಎನ್ನಲಾಗಿದೆ.  

ಕೂಡಲೇ ಸ್ಥಳಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿವೆ. ಇದುವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಇನ್ನೂ 8 ಮಂದಿ ಮಣ್ಣಿನ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. 

Trending News