ಅಸ್ಸಾಂನಲ್ಲಿ ಪ್ರವಾಹಕ್ಕೆ ಮತ್ತೊಬ್ಬ ವ್ಯಕ್ತಿ ಬಲಿ, 2.53 ಲಕ್ಷ ಜನರ ಮೇಲೆ ಪ್ರಭಾವ

ರಾಜ್ಯದಲ್ಲಿ ಧೆಮಾಜಿ ಹೆಚ್ಚು ಬಾಧಿತ ಜಿಲ್ಲೆಯಾಗಿದ್ದು, ಇದರ ನಂತರ ಟಿನ್ಸುಕಿಯಾ, ಮಜುಲಿ ಮತ್ತು ದಿಬ್ರುಗಢ್ ಕೂಡ ಪ್ರವಾಹದ ಪರಿಣಾಮ ಎದುರಿಸುತ್ತಿವೆ.

Last Updated : Jun 27, 2020, 07:45 AM IST
ಅಸ್ಸಾಂನಲ್ಲಿ ಪ್ರವಾಹಕ್ಕೆ ಮತ್ತೊಬ್ಬ ವ್ಯಕ್ತಿ ಬಲಿ, 2.53 ಲಕ್ಷ ಜನರ ಮೇಲೆ ಪ್ರಭಾವ title=

ಗುವಾಹಟಿ: ಮಾನ್ಸೂನ್ ಅಸ್ಸಾಂ (Assam) ತಲುಪಿದ ನಂತರ, ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ ಮತ್ತು ಇದರಿಂದಾಗಿ ರಾಜ್ಯವು ಪ್ರವಾಹಕ್ಕೆ ಸಿಲುಕಿದೆ. ಅಸ್ಸಾಂನ 16 ಜಿಲ್ಲೆಗಳ 704 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ಈ ಮಾಹಿತಿಯನ್ನು ನೀಡಿದರು. 

ಪ್ರವಾಹ (Flood) ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಸ್ಸಾಂನಲ್ಲಿ ಇನ್ನೂ ಒಬ್ಬ ವ್ಯಕ್ತಿಯ ಸಾವಿನ ನಂತರ ಸಾವಿನ ಸಂಖ್ಯೆ 16ಕ್ಕೆ ಏರಿದೆ.

ರಾಜ್ಯದಲ್ಲಿ ಧೆಮಾಜಿ ಹೆಚ್ಚು ಬಾಧಿತ ಜಿಲ್ಲೆಯಾಗಿದ್ದು, ಇದರ ನಂತರ ಟಿನ್ಸುಕಿಯಾ, ಮಜುಲಿ ಮತ್ತು ದಿಬ್ರುಗಢ್ ಕೂಡ ಪ್ರವಾಹದ ಪರಿಣಾಮ ಎದುರಿಸುತ್ತಿವೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ದೈನಂದಿನ ಪ್ರವಾಹ ವರದಿಯ ಪ್ರಕಾರ, ದಿಬ್ರುಗಢಲ್ಲಿನ ಪ್ರವಾಹವು ಇನ್ನೊಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿತು.

ಬ್ರಹ್ಮಪುತ್ರ ನದಿ (Brahmaputra river) ಮತ್ತು ಅದರ ಉಪನದಿಗಳು ಅನೇಕ ಸ್ಥಳಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ ಮತ್ತು ಈ ಕಾರಣದಿಂದಾಗಿ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಉದಲ್ಗುರಿ, ದಾರಂಗ್, ಬಕ್ಸಾ, ಕೊಕ್ರಜಾರ್, ಬಾರ್ಪೇಟಾ, ನಾಗಾನ್, ಗೋಲಘಾಟ್, ಜೋರ್ಹತ್, ಮಜುಲಿ, ಶಿವಸಾಗರ ದಿಬ್ರುಗಢ ಮತ್ತು ಟಿನ್ಸುಕಿಯಾ ಜಿಲ್ಲೆಗಳು ಪ್ರವಾಹದಿಂದ ಪ್ರಭಾವಿತವಾಗಿವೆ ಎಂದು ತಿಳಿದುಬಂದಿದೆ.

ಆರು ಜಿಲ್ಲೆಗಳಲ್ಲಿ ಜಿಲ್ಲಾ ಇಲಾಖೆಗಳು 142 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ಸ್ಥಾಪಿಸಿವೆ, ಅಲ್ಲಿ 18,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂದು ಎಎಸ್‌ಡಿಎಂಎ ತಿಳಿಸಿದೆ.

Trending News