ನವದೆಹಲಿ: ಎಡಪಕ್ಷಗಳ ಹಿರಿಯ ನಾಯಕರಾದ ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಲಾಗಿದೆ.ಇಬ್ಬರು ನಾಯಕರನ್ನು ಬಂಧಿಸಿರುವುದಕ್ಕೆ ಎಡಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
.@SitaramYechury has being detained at Srinagar Airport and not allowed to move anywhere. This despite the fact that he had informed the administration about his visit to meet CPIM MLA MY Tarigami who is not well & other party workers.
We strongly protest this illegal detention.— CPI (M) (@cpimspeak) August 9, 2019
ಟ್ವೀಟ್ ಮೂಲಕ ಪಕ್ಷದ ನಾಯಕರನ್ನು ಬಂಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿಪಿಐ (ಎಂ) 'ಸೀತಾರಾಮ್ ಯೆಚೂರಿ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಮತ್ತು ಅವರಿಗೆ ಬೇರೆಲ್ಲಿಗೂ ತಲುಪಲು ಅನುಮತಿ ಇಲ್ಲ ಎನ್ನಲಾಗಿದೆ. ಸಿಪಿಐ (ಎಂ) ಶಾಸಕ ಎಂ.ವೈ.ತಾರಿಗಾಮಿ ಅವರನ್ನು ಭೇಟಿ ಮಾಡುವ ಬಗ್ಗೆ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರೂ ಅಕ್ರಮವಾಗಿ ಬಂದಿಸಿರುವುದನ್ನು ನಾವು ತೀವ್ರವಾಗಿ ಪ್ರತಿಭಟಿಸುತ್ತೇವೆ ಎಂದು ಹೇಳಿದೆ.
Com D Raja and I are on our way to Srinagar on the 9.55 am Indigo flight to meet Com Yousuf Tarigami and our other comrades in Jammu & Kashmir pic.twitter.com/axRKZkLbV6
— Sitaram Yechury (@SitaramYechury) August 9, 2019
ಪಿಟಿಐ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಯೆಚೂರಿ, “ಅವರು ನಮಗೆ ಕಾನೂನು ಆದೇಶವನ್ನು ತೋರಿಸಿದರು, ಅದು ಶ್ರೀನಗರಕ್ಕೆ ಯಾವುದೇ ಪ್ರವೇಶವನ್ನು ಅನುಮತಿಸಲಿಲ್ಲ. ಭದ್ರತಾ ಕಾರಣಗಳಿಂದಾಗಿ ನಗರದಲ್ಲಿ ಬೆಂಗಾವಲು ಸಂಚಾರಕ್ಕೆ ಅನುಮತಿ ಇಲ್ಲ ಎಂದು ಹೇಳಿದೆ. ನಾವು ಇನ್ನೂ ಅವರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದೇವೆ 'ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು ರಾಜ್ಯವನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿದ ನಂತರ ಅಲ್ಲಿ ರಾಜಕೀಯ ನಾಯಕರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ.