Shraddha Walker Murder : 100ಕ್ಕೂ ಹೆಚ್ಚು ಸಾಕ್ಷ್ಯ, 3000 ಪುಟಗಳ ಆರೋಪಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡಿ ದೇಶವನ್ನೇಬೆಚ್ಚಿ ಬೀಳಿಸಿತ್ತು. ಈ ಭಯಾನಕ ಘಟನೆಯು ಮೇ 2022 ರಲ್ಲಿ ಸಂಭವಿಸಿದ್ದರೂ, ಪ್ರಕರಣದ ಹೊಸ ಬೆಳವಣಿಗೆ ಕೇಳಿದಾಗಲೆಲ್ಲಾ ಗೂಸ್‌ಬಂಪ್‌ಗಳನ್ನು ಬರುವಂತಿರುತ್ತವೆ. ಇತ್ತೀಚೆಗೆ, ದೆಹಲಿ ಪೊಲೀಸರು ಆಫ್ತಾಬ್ ಪೂನಾವಾಲಾ ವಿರುದ್ಧ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ.

Written by - Krishna N K | Last Updated : Jan 22, 2023, 03:12 PM IST
  • ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡಿ ದೇಶವನ್ನೇಬೆಚ್ಚಿ ಬೀಳಿಸಿತ್ತು.
  • ದೆಹಲಿ ಪೊಲೀಸರು ಆಫ್ತಾಬ್ ಪೂನಾವಾಲಾ ವಿರುದ್ಧ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ.
  • ಚಾರ್ಜ್‌ಶೀಟ್‌ನಲ್ಲಿ ಫೋರೆನ್ಸಿಕ್ ಸಾಕ್ಷ್ಯಗಳ ಜೊತೆಗೆ 100 ಕ್ಕೂ ಹೆಚ್ಚು ಸಾಕ್ಷಿಗಳ ಸಾಕ್ಷ್ಯಗಳಿವೆ.
Shraddha Walker Murder : 100ಕ್ಕೂ ಹೆಚ್ಚು ಸಾಕ್ಷ್ಯ, 3000 ಪುಟಗಳ ಆರೋಪಪಟ್ಟಿ ಸಲ್ಲಿಸಿದ ದೆಹಲಿ ಪೊಲೀಸರು title=

Shraddha Walker Murder case : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡಿ ದೇಶವನ್ನೇಬೆಚ್ಚಿ ಬೀಳಿಸಿತ್ತು. ಈ ಭಯಾನಕ ಘಟನೆಯು ಮೇ 2022 ರಲ್ಲಿ ಸಂಭವಿಸಿದ್ದರೂ, ಪ್ರಕರಣದ ಹೊಸ ಬೆಳವಣಿಗೆ ಕೇಳಿದಾಗಲೆಲ್ಲಾ ಗೂಸ್‌ಬಂಪ್‌ಗಳನ್ನು ಬರುವಂತಿರುತ್ತವೆ. ಇತ್ತೀಚೆಗೆ, ದೆಹಲಿ ಪೊಲೀಸರು ಆಫ್ತಾಬ್ ಪೂನಾವಾಲಾ ವಿರುದ್ಧ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಫೋರೆನ್ಸಿಕ್ ಸಾಕ್ಷ್ಯಗಳ ಜೊತೆಗೆ 100 ಕ್ಕೂ ಹೆಚ್ಚು ಸಾಕ್ಷಿಗಳ ಸಾಕ್ಷ್ಯಗಳಿವೆ. ವರದಿಗಳ ಪ್ರಕಾರ, ಪೊಲೀಸ್ ಸಿಬ್ಬಂದಿ ಅಫ್ತಾಬ್ ಅವರ ತಪ್ಪೊಪ್ಪಿಗೆಗಳು, ಅವರ ನಾರ್ಕೋ ಪರೀಕ್ಷೆಯ ಫಲಿತಾಂಶ ಮತ್ತು ಅವರ ಫೋರೆನ್ಸಿಕ್ ವರದಿಯನ್ನು ಉಲ್ಲೇಖಿಸಿದ್ದಾರೆ, ಇದನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ. ಇದಲ್ಲದೆ, ಡಿಎನ್‌ಎ ಪರೀಕ್ಷೆಯಲ್ಲಿ ಆಫ್ತಾಬ್ ಕಾಡಿನಲ್ಲಿ ಬಿಟ್ಟುಹೋದ ಮೂಳೆಗಳು ಶ್ರದ್ಧಾ ಅವರದ್ದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: OMG: 2100 ರೂ. ಎಣಿಸಲು ಸಾಧ್ಯವಾಗದ ವರ, ಕೋಪಗೊಂಡು ಮುದುವೆ ಬೇಡವೆಂದ ವಧು!

ಡಿಸೆಂಬರ್ 2022 ರಲ್ಲಿ, ದೆಹಲಿ ಪೊಲೀಸರಿಗೆ ಆರೋಪಿ ಅಫ್ತಾಬ್ ಮತ್ತು ವಾಕರ್ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಸಿಕ್ಕಿತು. ಆಡಿಯೋದಲ್ಲಿ, ಆಫ್ತಾಬ್ ಅವಳೊಂದಿಗೆ ಜಗಳವಾಡುವುದನ್ನು ಕೇಳಬಹುದು. ಪೊಲೀಸರ ಪ್ರಕಾರ, ಆಡಿಯೊ ಕ್ಲಿಪ್ ಪ್ರಕರಣದಲ್ಲಿ 'ದೊಡ್ಡ ಸಾಕ್ಷ್ಯ' ಆಗಬಹುದು ಎನ್ನಲಾಗಿದೆ. ದೆಹಲಿ ನ್ಯಾಯಾಲಯದ ಆದೇಶದ ನಂತರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ದ ಫೊರೆನ್ಸಿಕ್ಸ್ ತಂಡ ಆಫ್ತಾಬ್ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಆಡಿಯೋ ಕ್ಲಿಪ್‌ನಲ್ಲಿದ್ದ ಧ್ವನಿಯ ಜೊತೆ ಹೊಂದಾಣಿಕೆಯಾಗಿದೆ.

ಕಳೆದ ವರ್ಷ ಶ್ರದ್ಧಾ ಕಾಣೆಯಾದ ಬಗ್ಗೆ ಅವರ ತಂದೆ ದೂರು ದಾಖಲಿಸಿದಾಗ ಈ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿತ್ತು. 2022 ಮೇ 18 ರಂದು ದೆಹಲಿಯ ಮೆಹ್ರೌಲಿಯಲ್ಲಿರುವ ಅವರ ಬಾಡಿಗೆ ಫ್ಲಾಟ್‌ನಲ್ಲಿ ಶ್ರದ್ಧಾ ವಾಕರ್ ಅವರನ್ನು ಆಕೆಯ ಗೆಳೆಯ ಆಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದಾಗಿ ತಿಳಿದು ಬಂದಿತ್ತು. ಅಲ್ಲದೆ, ಅಫ್ತಾಬ್‌ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅದನ್ನು 300-ಲೀಟರ್ ಫ್ರಿಜ್‌ನಲ್ಲಿ ಇಟ್ಟಿದ್ದ ಭಯಾನಕ ಮಾಹಿತಿ ಹೊರಬಿದ್ದಿತ್ತು. ಬಳಿಕ ಆಕೆಯ ದೇಹದ ಭಾಗಗಳನ್ನು ಒಂದೊಂದಾಗಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News