Shocking Video: LIVE ಕಾರ್ಯಕ್ರಮದಲ್ಲಿ LIVE ಆಗೇ ಮೃತಪಟ್ಟ ರೀತಾ ಜೆತಿಂದರ್!

ಶ್ರೀನಗರದ ದೂರದರ್ಶನ ಕೇಂದ್ರದಲ್ಲಿ ಇಂದು ಬೆಳಗ್ಗೆ 8.30ಕ್ಕೆ ನಡೆಯುತ್ತಿದ್ದ ‘ಗುಡ್​ ಮಾರ್ನಿಂಗ್​ ಜೆಕೆ’ ಕಾರ್ಯಕ್ರಮದಲ್ಲಿ ಲೇಖಕಿ, ಶಿಕ್ಷಣ ತಜ್ಞೆ ಪ್ರೊ.ರೀತಾ ಜೆತಿಂದರ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. 

Last Updated : Sep 10, 2018, 09:35 PM IST
Shocking Video: LIVE ಕಾರ್ಯಕ್ರಮದಲ್ಲಿ LIVE ಆಗೇ ಮೃತಪಟ್ಟ ರೀತಾ ಜೆತಿಂದರ್! title=

ಶ್ರೀನಗರ: ಜಮ್ಮು-ಕಾಶ್ಮೀರದ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗುಡ್ ಮಾರ್ನಿಂಗ್ ಜೆಕೆ' ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಷಾ ತಜ್ಞೆ, ಲೇಖಕಿ ರೀತಾ ಜತಿಂದರ್ ಅವರು ಮಾತನಾಡುತ್ತಲೇ ಕಾರ್ಯಕ್ರಮದ ಮಧ್ಯೆಯೇ ಸಾವನ್ನಪ್ಪಿದ ಧಾರುಣ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. 

ಶ್ರೀನಗರದ ದೂರದರ್ಶನ ಕೇಂದ್ರದಲ್ಲಿ ಇಂದು ಬೆಳಗ್ಗೆ 8.30ಕ್ಕೆ ನಡೆಯುತ್ತಿದ್ದ ‘ಗುಡ್​ ಮಾರ್ನಿಂಗ್​ ಜೆಕೆ’ ಕಾರ್ಯಕ್ರಮದಲ್ಲಿ ಲೇಖಕಿ, ಶಿಕ್ಷಣ ತಜ್ಞೆ ಪ್ರೊ.ರೀತಾ ಜೆತಿಂದರ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶಕರು ರೀತಾ ಅವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಏದುಸಿರು ಬಿಟ್ಟು, ಹಾಗೆಯೇ ಕುರ್ಚಿಗೆ ಒರಗಿದ್ದಾರೆ. ಒಂದೇ ಕ್ಷಣದಲ್ಲಿ ಏನಾಗುತ್ತಿದೆ ಎಂಬುದನ್ನು ಅಲ್ಲಿದ್ದವರು ಆಲೋಚಿಸುವುದರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಅವರು ಹಾರ್ಟ್ ಅಟ್ಯಾಕ್'ನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಈ ಘಟನೆ ಬಗ್ಗೆ IANSಗೆ ಮಾಹಿತಿ ನೀಡಿರುವ ಕಾರ್ಯಕ್ರಮದ ನಿರೂಪಕ ಜಾಹಿದ್ ಮುಖ್ತರ್, "ಅವರು ಕೆಳಗೆ ಬಿದ್ದ ಸಂದರ್ಭದಲ್ಲಿ ಅವರು ನಾಟಕ ಮಾಡುತ್ತಿದ್ದಾರೆ ಎಂದು ನಾವು ಭಾವಿಸಿದೆವು. ಆದರೆ ಕೆಲ ಕ್ಷಣಗಳ ನಂತರ ಆ ಸಂದರ್ಭದ ಗಂಭೀರತೆ ಅರಿವಾಯಿತು. ಅವರು ಮಾತನಾಡುತ್ತಲೇ ಏದುಸಿರುಬಿಡುತ್ತಾ ಹಾಗೇ ಕುರ್ಚಿಗೆ ಒರಗಿದರು. ನಂತರ ನಾವು, ನಮ್ಮ ನಿರ್ಮಾಪಕರು ಎಲ್ಲರೂ ಅವರನ್ನು ಎಚ್ಚರಗೊಳಿಸಲು ಪ್ರಯತ್ನಿಸಿದೆವು. ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು" ಎಂದು ಹೇಳಿದ್ದಾರೆ. 

86 ವರ್ಷ ವಯಸ್ಸಿನ ಪ್ರೊ. ರೀತಾ ಜೆತಿಂದರ್ ಅವರು, ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷೆಗಳ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 'ಗುಡ್ ಮಾರ್ನಿಗ್ ಜೆಕೆ' ಕಾರ್ಯಕ್ರಮ ಸೇರಿದಂತೆ ಇತರ ಎರಡು ಕಾರ್ಯಕ್ರಮಗಳಲ್ಲಿಯೂ ಕೂಡ ಪ್ರೊ. ರೀಟಾ ಜತಿಂದರ್ ಅವರು ಭಾಗವಹಿಸಬೇಕಿತ್ತು. 

ಅವರು ಕಾರ್ಯಕ್ರಮದಲ್ಲಿ ಮೃತಪಟ್ಟ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಿಗ್ಬ್ರಮೆಗೊಳಿಸಿದೆ. 

Trending News