ಜ.7 ರಂದು ಸಚಿವಾಲಯದಲ್ಲಿ ಬಿಜೆಪಿಯ 109 ಶಾಸಕರಿಂದ 'ವಂದೇ ಮಾತರಂ' ಗಾಯನ: ಶಿವರಾಜ್ ಸಿಂಗ್ ಚೌಹಾಣ್

ಮುಂದಿನ ಜನವರಿ 7 ರಂದು ಮಧ್ಯಪ್ರದೇಶದ ಸಚಿವಾಲಯದ ಮುಂದೆ ಬಿಜೆಪಿಯ 109 ಶಾಸಕ 'ವಂದೇ ಮಾತರಂ' ಹಾಡಲಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

Last Updated : Jan 2, 2019, 11:22 AM IST
ಜ.7 ರಂದು ಸಚಿವಾಲಯದಲ್ಲಿ ಬಿಜೆಪಿಯ 109 ಶಾಸಕರಿಂದ 'ವಂದೇ ಮಾತರಂ' ಗಾಯನ: ಶಿವರಾಜ್ ಸಿಂಗ್ ಚೌಹಾಣ್ title=

ಭೋಪಾಲ್: ಮುಂದಿನ ಜನವರಿ 7 ರಂದು ಮಧ್ಯಪ್ರದೇಶದ ಸಚಿವಾಲಯದ ಮುಂದೆ ಬಿಜೆಪಿಯ 109 ಶಾಸಕ 'ವಂದೇ ಮಾತರಂ' ಹಾಡಲಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

13 ವರ್ಷದ ಹಿಂದಿನ ಪರಂಪರೆಗೆ ಬ್ರೇಕ್:
ಪ್ರತಿ ತಿಂಗಳ ಮೊದಲ ದಿನ ಸಚಿವಾಲಯಗಳಲ್ಲಿ ವಂದೇ ಮಾತರಂ ನ್ನು ಹಾಡಲಾಗುತ್ತಿತ್ತು. ಇದು ಬಿಜೆಪಿ ಸರ್ಕಾರದ ಅವಧಿಯಿಂದಲೂ ನಡೆದುಕೊಂಡು ಬಂದ  ಸಂಪ್ರದಾಯವಾಗಿತ್ತು. 13 ವರ್ಷದ ಹಿಂದಿನ ಪರಂಪರೆಗೆ ಮಧ್ಯಪ್ರದೇಶದ ನೂತನ ಸರ್ಕಾರ ಬ್ರೇಕ್ ಹಾಕಿದೆ. ಆದರೆ ಸಚಿವಾಲಯದಲ್ಲಿ ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಹಾಡುವುದಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕಿದ್ದು ಸ್ವತಃ ಮುಖ್ಯಮಂತ್ರಿ ಕಮಲ್ ನಾಥ್ ಈ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 1 ರಂದು, ಸೆಕ್ರೇಟರಿಯೇಟ್ ಕಚೇರಿಯಲ್ಲಿ ತಿಂಗಳ ಮೊದಲ ದಿನ 'ವಂದೇ ಮಾತರಂ' ಹಾಡಲಿಲ್ಲ.

ಕಾಂಗ್ರೆಸ್ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ವಂದೇ ಮಾತರಂ ಕೇವಲ ರಾಷ್ಟ್ರೀಯ ಗೀತೆಯಲ್ಲ, ಅದು ದೇಶಭಕ್ತಿಯ ಸಮಾನಾರ್ಥ, ಕೂಡಲೇ ಕಾಂಗ್ರೆಸ್ ವಂದೇ ಮಾತರಂ ಹಾಡುವುದನ್ನು ಮತ್ತೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. 

Trending News