"ಪ್ರಸ್ತುತ ರಾಜಕೀಯ ಇತಿಹಾಸ" ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಟ್ವೀಟ್

'ಇತಿಹಾಸವು ಹಿಂದಿನ ರಾಜಕೀಯ ಮತ್ತು ಪ್ರಸ್ತುತ ರಾಜಕೀಯವು ಇತಿಹಾಸ' ಎಂದು ಸಂಜಯ್ ರೌತ್ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

Last Updated : Nov 25, 2019, 09:50 AM IST
"ಪ್ರಸ್ತುತ ರಾಜಕೀಯ ಇತಿಹಾಸ" ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಟ್ವೀಟ್  title=
File Photo

ಮುಂಬೈ: ಮಹಾರಾಷ್ಟ್ರ(Maharashtra)ದ ರಾಜಕೀಯ ಪ್ರಕ್ಷುಬ್ಧತೆಗೆ ಸಂಬಂಧಿಸಿದಂತೆ ಶಿವಸೇನೆ(Shiv Sena) ಮುಖಂಡ ಮತ್ತು ರಾಜಸಭಾ ಸಂಸದ ಸಂಜಯ್ ರೌತ್(Sanjay Raut) ಮತ್ತೊಮ್ಮೆ ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದ ರಾಜಕೀಯದ ಪ್ರಸ್ತುತ ಸ್ಥಿತಿಯನ್ನು ಇತಿಹಾಸವೆಂದು ಅವರು ಹೇಳಿದ್ದಾರೆ.

ಇತಿಹಾಸವು ಹಿಂದಿನ ರಾಜಕೀಯ ಮತ್ತು ಪ್ರಸ್ತುತ ರಾಜಕೀಯವು ಇತಿಹಾಸ'(History is Past Politics and Politics is Present History) ಎಂದು ಸಂಜಯ್ ರೌತ್ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಿವಸೇನೆ ಮುಖಂಡ ಸಂಜಯ್ ರೌತ್ ಟ್ವಿಟ್ಟರ್ ಮೂಲಕ ಮಹಾರಾಷ್ಟ್ರದ ರಾಜಕೀಯವನ್ನು ನಿರಂತರವಾಗಿ ಕೆಣಕುತ್ತಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ರೌತ್ ಅವರು ಬಿಜೆಪಿಗೆ ಟ್ವೀಟ್ ಮಾಡಿದ್ದಾರೆ. ಆದರೆ ಅವರ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ ದೇವೇಂದ್ರ ಫಡ್ನವೀಸ್ ಅವರು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ಬಿಜೆಪಿಯನ್ನು ಕೆಣಕುತ್ತಾ ಟ್ವೀಟ್ ಮಾಡಿದ್ದು, ಜಗತ್ತು ಯಾರನ್ನು ನೋಡಿ ನಕ್ಕಿದೆ ಎಂಬುದು ಇತಿಹಾಸವನ್ನು ಸೃಷ್ಟಿಸಿದೆ ಎಂದು ಹೇಳಿದ್ದರು. ಸಂಜಯ್ ರೌತ್ (ಶನಿವಾರ ಬೆಳಿಗ್ಗೆ) ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದ ರಾಜಕೀಯದ ಚಿತ್ರಣವೇ ಬದಲಾಯಿತು. ನಂತರ ಅವರು 'ಆಕಸ್ಮಿಕ ಶಪಥ!' ಎಂದು ಟ್ವೀಟ್ ಮಾಡಿದ್ದಾರೆ.

Trending News