ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಕ್ಕೆ ಶಿವಸೇನೆ ಆಗ್ರಹ

ಭದ್ರತಾ ಪಡೆಗಳು ಜನರನ್ನು ಗುರುತಿಸುವಲ್ಲಿ ಯಾವುದೇ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಈ ನಿಷೇಧವನ್ನು ಶಿಫಾರಸು ಮಾಡಲಾಗಿದೆ. 

Last Updated : May 1, 2019, 10:52 AM IST
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಕ್ಕೆ ಶಿವಸೇನೆ ಆಗ್ರಹ title=

ಮುಂಬೈ: ಈಸ್ಟರ್ ಭಯೋತ್ಪಾದಕ ದಾಳಿಯಿಂದಾಗಿ 250 ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಬೆನ್ನಲ್ಲೇ ಮುನ್ನೆಚಾರಿಕಾ ಕ್ರಮವಾಗಿ ಶ್ರೀಲಂಕಾ ಸರ್ಕಾರ ಬುರ್ಕಾ ನಿಷೇಧಿಸಿರುವಂತೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ನಿಷೇಧಿಸುವಂತೆ ಶಿವಸೇನೆ ಆಗ್ರಹಿಸಿದೆ. 

"ಈ ಹಿಂದೆಯೇ ಶಿವಸೇನೆ ಪಕ್ಷವು ಬುರ್ಕಾ ನಿಷೇಧವನ್ನು ಪ್ರಸ್ತಾಪಿಸಿತ್ತು. ಈ ಕ್ರಮ ರಾವಣನ (ಶ್ರೀಲಂಕಾ) ಲಂಕಾದಲ್ಲಿ ಈಗಾಗಲೇ ಜಾರಿಯಾಗಿದೆ. ಆದರೆ ರಾಮನ ಅಯೋಧ್ಯೆಯಲ್ಲಿ ಯಾವಾಗ ಜಾರಿಯಾಗಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಪ್ರಶ್ನೆ" ಎಂದು ಶಿವಸೇನಾ ಹೇಳಿದೆ.

"ಭದ್ರತಾ ಪಡೆಗಳು ಯಾರನ್ನಾದರೂ ಗುರುತಿಸುವಲ್ಲಿ ಯಾವುದೇ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಈ ನಿಷೇಧವನ್ನು ಶಿಫಾರಸು ಮಾಡಲಾಗಿದೆ. ಜನರು ಬುರ್ಕಾ ಅಥವಾ ಇತರ ಯಾವುದೇ ಮುಖ ಮುಚ್ಚುವ ಉಡುಪನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗುವ ಸಾಧ್ಯತೆಯಿದೆ" ಎಂದು ಶಿವಸೇನೆಯ 'ಸಾಮನಾ' ಮತ್ತು 'ದೋಪಹರ್ ಕಾ ಸಾಮನಾ' ದ ಸಂಪಾದಕೀಯದಲ್ಲಿ ಹೇಳಲಾಗಿದೆ. 

Trending News