ಶೀಲಾ ದೀಕ್ಷಿತ್ ನಿಧನಕ್ಕೆ ಗಣ್ಯರ ಕಂಬನಿ

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ 81 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈಗ ಅವರ ನಿಧನಕ್ಕೆ ಹಲವು ಗಣ್ಯ ನಾಯಕರು ಕಂಬನಿ ಮಿಡಿದಿದ್ದಾರೆ.

Last Updated : Jul 20, 2019, 06:00 PM IST
 ಶೀಲಾ ದೀಕ್ಷಿತ್ ನಿಧನಕ್ಕೆ ಗಣ್ಯರ ಕಂಬನಿ  title=
Pic Courtesy: Twitter@narendramodi

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ 81 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈಗ ಅವರ ನಿಧನಕ್ಕೆ ಹಲವು ಗಣ್ಯ ನಾಯಕರು ಕಂಬನಿ ಮಿಡಿದಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ 'ಶೀಲಾ ದೀಕ್ಷಿತ್ ವರು ನಿಧನರಾಗಿರುವುದು ತೀವ್ರ ದುಃಖ ತರಿಸಿದೆ,ದೆಹಲಿ ಅಭಿವೃದ್ದಿಯಲ್ಲಿ ಅವರ ಪಾತ್ರ ಅನನ್ಯ ಎಂದು ಟ್ವೀಟ್ ಮಾಡಿದ್ದಾರೆ. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 'ಶೀಲಾ ಶಿಕ್ಷಿತ್ ಅವರ ನಿಧನ ನನಗೆ ದಿಗ್ಬ್ರಮೆಗೊಳಿಸಿದೆ. ಅವರ ಸಾವಿನಿಂದಾಗಿ ಈಗ ದೇಶ ಜನಪ್ರಿಯ ಕಾಂಗ್ರೆಸ್ ನಾಯಕಿಯನ್ನು ಕಳೆದುಕೊಂಡಿದೆ. ದೆಹಲಿಯಲ್ಲಿ ಮೂರು ಅವಧಿಗೆ ಸಿಎಂ ಆಗಿದ್ದ ವೇಳೆ ಅವರು ಕೈಗೊಂಡ ಕಾರ್ಯಗಳನ್ನು ದೆಹಲಿ ಜನರು ಸ್ಮರಿಸಲಿದ್ದಾರೆ' ಎಂದರು.

ಪ್ರಿಯಾಂಕಾ ಗಾಂಧಿ ಶೀಲಾ ದೀಕ್ಷಿತ್ ಅವರ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿ ' ಶೀಲಾ ದೀಕ್ಷಿತ್ ಅವರ ನಿಧನ ನಿಜಕ್ಕೂ ದುಃಖ ತರಿಸಿದೆ. ಅವರು ನನ್ನನ್ನು ಇಷ್ಟಪಟ್ಟಿದ್ದರು. ಅವರು ದೆಹಲಿಗೆ ಮತ್ತು ದೇಶಕ್ಕೆ ಮಾಡಿರುವ ಕಾರ್ಯಕ್ಕೆ ಜನರು ಅವರನ್ನು ಸ್ಮರಿಸಲಿದ್ದಾರೆ.  ಅವರು ಪಕ್ಷದ ಅತಿ ಎತ್ತರದ ನಾಯಕಿಯಾಗಿದ್ದರು.ಪಕ್ಷಕ್ಕೆ ದೇಶದ ರಾಜಕಾರಣಕ್ಕೆ ಅದರಲ್ಲೂ ದೆಹಲಿಗೆ ನೀಡಿರುವ ಕೊಡುಗೆ ಮಹತ್ವದ್ದು ಎಂದು ಹೇಳಿದರು.

ರಾಹುಲ್ ಗಾಂಧಿ ಟ್ವೀಟ್ ಮಾಡಿ ' ಶೀಲಾ ದಿಕ್ಸಿತ್ ನಿಧನದ  ಸುದ್ದಿಯನ್ನು ಕೇಳಿ ನನಗೆ ಆಘಾತವಾಗಿದೆ, ಕಾಂಗ್ರೆಸ್ ಪಕ್ಷದ ನಂಬಿಗಸ್ಥ ಮಗಳು, ಅವರ ಜೊತೆ ನಾನು ಅನೂನ್ಯವಾದ ಭಾಂಧ್ಯವ್ಯವನ್ನು ಹೊಂದಿದ್ದೇನೆ' ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. 

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ 'ಅವರನ್ನು ಇತ್ತೀಚಿಗಷ್ಟೇ ಭೇಟಿ ಮಾಡಿದ್ದೇ, ಇದು ನಿಜಕ್ಕೂ ದೊಡ್ಡ ಶಾಕ್ , ಅವರು ನನ್ನನ್ನು ತಾಯಿಯಂತೆ ಸ್ವಾಗತಿಸಿದ್ದು, ನನಗೆ ಇನ್ನು ನೆನಪಿದೆ. ದೆಹಲಿ ಅವರನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳಲಿದೆ. ಎಂದು ಕಂಬನಿ ಮಿಡಿದಿದ್ದಾರೆ. 

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ ' ಈಗಷ್ಟೇ ಶೀಲಾ ದೀಕ್ಷಿತ್ ಅವರು ನಿಧನರಾಗಿರುವ ಸುದ್ದಿಯನ್ನು ಕೇಳ್ಪಟ್ಟೆ. ಅವರ ಸಾವಿನಿಂದ ದೆಹಲಿಗೆ ನಷ್ಟವಾಗಲಿದೆ, ದೆಹಲಿಗೆ ಅವರು ನೀಡಿರುವ ಕೊಡುಗೆಯನ್ನು ಸಧಾ ಸ್ಮರಿಸಲಾಗುವುದು ' ಎಂದು ಟ್ವೀಟ್ ಮಾಡಿದ್ದಾರೆ. 

 

Trending News