Shahbad Dairy murder case : ದೆಹಲಿ ಶಹಬಾದ್ ಡೈರಿ ಕೊಲೆ ಪ್ರಕರಣ ಇಡೀ ರಾಷ್ಟ್ರವನ್ನು ದಂಗುಬಡಿಸಿತ್ತು. ತನಿಖೆ ಕೈಗೊಂಡಿರುವ ಪೊಲೀಸರಿಗೆ ಪ್ರಕರಣದಲ್ಲಿ ಹೆಚ್ಚಿನ ವಿವರಗಳು ಮತ್ತು ಟ್ವಿಸ್ಟ್ಗಳು ಎದುರಾಗುತ್ತಿವೆ. ಇದೀಗ, ಪ್ರಮುಖ ಆರೋಪಿ ಸಾಹಿಲ್ ತನ್ನ ಅಪ್ರಾಪ್ತ ಗೆಳತಿ ಸಾಕ್ಷಿ ಮಾತ್ರವಲ್ಲದೆ ಇನ್ನು ಹೆಚ್ಚಿನ ಜನರನ್ನು ಹತ್ಯೆಗೈಯಲು ಪ್ಲಾನ್ ಮಾಡಿದ್ದ ಎಂಬ ಭಯಾನಕ ವಿಚಾರ ಬಯಲಾಗಿದೆ.
ಹೌದು.. ಮೇ 28ರಂದು ಸಂಜೆ 20 ವರ್ಷದ ಸಾಹಿಲ್ ತನ್ನ 16 ವರ್ಷದ ಗೆಳತಿ ಸಾಕ್ಷಿಯನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ದೇಹದ ಮೇಲೆ ಕಲ್ಲು ಎತ್ತಿಹಾಕಿ ಚಿದ್ರ ಚಿದ್ರ ಮಾಡಿದ್ದ. ಇದೀಗ, ಸಾಹಿಲ್ ಬಳಿ 'ಕೊಲೆ ಪಟ್ಟಿ' ಇತ್ತು ಎಂದು ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಆರೋಪಿ ಹಲವು ಜನರನ್ನು ಕೊಲ್ಲಲು ಪ್ಲಾನ್ ರೂಪಿಸಿದ್ದ ಎಂಬ ವಿಚಾರ ತಿಳಿದು ಬಂದಿದೆ.
ಇದನ್ನೂ ಓದಿ: ಇದು ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್! ದೇಶದ ಮೂಲೆ ಮೂಲೆಗೂ ಇಲ್ಲಿಂದ ಸಿಗುತ್ತೆ ರೈಲು ಸೇವೆ…
ಮಾಹಿತಿ ಪ್ರಕಾರ ಸಾಹಿಲ್ ಐದು ಜನರನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಪಟ್ಟಿಯಲ್ಲಿ ಉಲ್ಲೇಖಿಸಲಾದ ಐದು ಜನರಲ್ಲಿ ಸಾಕ್ಷಿ ಮತ್ತು ಆಕೆಯ ಮಾಜಿ ಗೆಳೆಯ ಪ್ರವೀಣ್ ಕೂಡ ಇಬ್ಬರು. ಇದಲ್ಲದೇ ಇನ್ನೂ ಮೂರು ಹೆಸರುಗಳು ಪಟ್ಟಿಯಲ್ಲಿವೆ. ಇನ್ನು ಕೊಲೆಗೆ ಕಾರಣ ಹುಡುಕಿದಾಗ, ಸಾಕ್ಷಿ ಸಾಯುವ ಕೆಲವು ದಿನಗಳ ಮೊದಲು ಸಾಕ್ಷಿ ಸಾಹಿಲ್‌ನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಳು. ಅಲ್ಲದೆ, ತನ್ನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ ಮಾಜಿ ಗೆಳೆಯ ಪ್ರವೀಣ್‌ನೊಂದಿಗೆ ಮತ್ತೆ ಸಂಪರ್ಕದಲ್ಲಿರಲು ಯೋಜಿಸುತ್ತಿದ್ದಳು. ಈ ಸಂಗತಿ ಸಾಹಿಲ್‌ಗೆ ಕೋಪವನ್ನುಂಟುಮಾಡಿತು, ಅದಕ್ಕಾಗಿ ಅವನು ಕೊಲೆಗಾರನಾಗಲು ರೆಡಿಯಾಗಿದ್ದ.
ಕೊಲೆಗೆ ಒಂದು ದಿನ ಮೊದಲು ಸಾಕ್ಷಿ ಸಾಹಿಲ್‌ಗೆ ಮೇಲೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದಲ್ಲದೆ, ಸಾಹಿಲ್ ಯಾವುದೇ ಹುಡುಗನ ಜೊತೆ ಮಾತನಾಡದಂತೆ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ್ದನಂತೆ. ಸಾಕ್ಷಿ ಮತ್ತು ಸಾಹಿಲ್ ಕಳೆದ ಮೂರು ವರ್ಷಗಳಿಂದ ಲವ್ ಮಾಡುತ್ತಿದ್ದರು ಎಂದು ವರದಿಯಾಗಿದೆ, ಆದರೆ ಅಪ್ರಾಪ್ತ ಸಂತ್ರಸ್ತೆಯ ಪೋಷಕರು ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ವಿಮಾನ ದರ ಹೆಚ್ಚಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸಲಹೆ
ಈ ಪ್ರಕರಣದಲ್ಲಿ ಸಾಕ್ಷಿ ಅವರ ಮಾಜಿ ಗೆಳೆಯ ಪ್ರವೀಣ್‌ಗೂ ಸಮನ್ಸ್ ಜಾರಿ ಮಾಡಲಾಗಿದ್ದು, ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೇ 28 ರಂದು ಶಹಬಾದ್ ಡೈರಿ ಪ್ರದೇಶದ ರಸ್ತೆಯಲ್ಲಿ ಸಾಹಿಲ್ ಸಾಕ್ಷಿ ಮೇಲೆ ದಾಳಿ ಮಾಡಿ ಸಾಹಿಲ್ 22 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದ. ಬಳಿಕ ಸಿಮೆಂಟ್ ಬ್ರೀಕ್ಸ್ ಎತ್ತಿಕೊಂಡು ಅಪ್ರಾಪ್ತ ಬಾಲಕಿಯ ಮೈಮೇಲೆ ಹಾಕಿ ಆಕೆಯ ತಲೆಯನ್ನು ತುಳಿದು ಕೊಲೆ ಮಾಡಿದ್ದ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ