ಪ್ರಧಾನಮಂತ್ರಿ ಆಫೀಸ್ ಗೆ ಹೈಪ್ರೊಫೈಲ್ ವಂಚಕರ ಪಟ್ಟಿ ರವಾಸಿದ್ದರೂ ಯಾವುದೇ ಕ್ರಮವಿಲ್ಲ- ರಘುರಾಮ್ ರಾಜನ್

ಸಂಸತ್ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ವಂಚಕರ  ಪಟ್ಟಿಯನ್ನು ಪ್ರಧಾನ ಮಂತ್ರಿ ಆಫಿಸ್ ಗೆ ಕಳುಹಿಸಿದ್ದರು ಸಹಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ಹೊಸ ಬಾಂಬ್ ಸಿಡಿಸಿದ್ದಾರೆ.

Last Updated : Sep 11, 2018, 06:23 PM IST
ಪ್ರಧಾನಮಂತ್ರಿ ಆಫೀಸ್ ಗೆ ಹೈಪ್ರೊಫೈಲ್ ವಂಚಕರ ಪಟ್ಟಿ ರವಾಸಿದ್ದರೂ ಯಾವುದೇ ಕ್ರಮವಿಲ್ಲ- ರಘುರಾಮ್ ರಾಜನ್   title=

ನವದೆಹಲಿ:ಸಂಸತ್ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ವಂಚಕರ ಪಟ್ಟಿಯನ್ನು ಪ್ರಧಾನ ಮಂತ್ರಿ ಆಫಿಸ್ ಗೆ ಕಳುಹಿಸಿದ್ದರು ಸಹಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ನೇತೃತ್ವವಹಿಸಿರುವ ಸಂಸತ್ ಸಮಿತಿಗೆ ಸಲ್ಲಿಸಿರುವ ವರದಿಯಲ್ಲಿ ಬ್ಯಾಂಕರ್ ಗಳು ನೀಡಿದ ಸಾಲದಿಂದಾಗಿ ಆರ್ಥಿಕ ಕುಸಿತವಾಗಿದೆ ಎಂದು ಅವರು ತಿಳಿಸಿದ್ದಾರೆ.ಅಲ್ಲದೆ ಸಾರ್ವಜನಿಕ ಬ್ಯಾಂಕಗಳಲ್ಲಿ ವಂಚನೆಗಳು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಹೇಳಿಕೆ ನೀಡಿರುವ ರಾಜನ್ "ನಾನು ಆರ್ಬಿಐ ಗವರ್ನರ್ ಆಗಿದ್ದಾಗ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಸೆಲ್ ನನ್ನು ತನಿಖಾ ಸಂಸ್ಥೆಗಳಿಗೆ ತಿಳಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿತ್ತು. ಅಲ್ಲದೆ ಹೈಪ್ರೊಫೈಲ್ ವಂಚನೆ ಪ್ರಕರಣಗಳನ್ನು ಪ್ರಧಾನ ಮಂತ್ರಿ ಆಫಿಸ್ ಗೆ ಕಳಿಸಲಾಗಿತ್ತು, ಇದೆಲ್ಲವನ್ನು ಕಾರ್ಯರೂಪಕ್ಕೆ ತರಲು ಒಂದೆರಡು ಪುಸ್ತಕದಲ್ಲಿ ತರಲಾಗಿತ್ತು. ಆದರೆ ಇದುವರೆಗೂ ಆ ವಿಷಯದಲ್ಲಿ ಆಗಿರುವ ಸುಧಾರಣೆ ನನ್ನ ಗಮನಕ್ಕೆ ಬಂದಿಲ್ಲ ಮತ್ತು ಇದು ತುರ್ತಾಗಿ ಆಗಬೇಕಾಗಿರುವ ಕೆಲಸ" ಎಂದು ರಾಜನ್ ತಿಳಿಸಿದ್ದಾರೆ.  

Trending News