ನವದೆಹಲಿ: ಈ ದಿನಗಳಲ್ಲಿ ಹಳೆಯ ನಾಣ್ಯಗಳು ಮತ್ತು ನೋಟುಗಳ ಬೇಡಿಕೆ ಹೆಚ್ಚುತ್ತಿದೆ ಮತ್ತು ಕೆಲವು ಅಪರೂಪದ, ಹಳೆಯ ನಾಣ್ಯಗಳು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಲಕ್ಷ ರೂಪಾಯಿ ಗಳಿಸಲು ಸಹಾಯ ಮಾಡುತ್ತದೆ ಎನ್ನುವುದು ನಿಜಕ್ಕೂ ಆಶ್ಚರ್ಯವಾಗಬಹುದು.ಇದು ಅಚ್ಚರಿಯಾದರೂ ನಿಜ ಸಂಗತಿ. ಕೆಲವು ಕರೆನ್ಸಿಗಳು ಕೆಲವು ದೋಷದಿಂದ ಮುದ್ರಿತವಾಗಿದ್ದರೆ ಈ ನಾಣ್ಯಗಳು ಮತ್ತು ನೋಟುಗಳು ಆನ್‌ಲೈನ್‌ನಲ್ಲಿ ಉತ್ತಮ ಮೊತ್ತವನ್ನು ಪಡೆಯುತ್ತವೆ.
ಇದನ್ನೂ ಓದಿ-JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ
ಉದಾಹರಣೆಗೆ, ನೀವು ರೂ 2 ಹಳೆಯ ನಾಣ್ಯವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದು.ನಾಣ್ಯವೊಂದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 1984 ರಲ್ಲಿ ಬಿಡುಗಡೆ ಮಾಡಿತು. ಈ ನಾಣ್ಯವು ವಿಶೇಷವಾದದ್ದು ಏಕೆಂದರೆ ಅದರ ಹಿಂದೆ ಭಾರತೀಯ ಧ್ವಜವನ್ನು ಕೆತ್ತಲಾಗಿದೆ.ಈ ಹಳೆಯ 2 ನಾಣ್ಯವು Quickr.com ನಲ್ಲಿ 5 ಲಕ್ಷದವರೆಗೆ ಮಾರಾಟವಾಗುತ್ತಿದೆ.
ನಿಮ್ಮ ಅಪರೂಪದ 2 ರೂ. ನಾಣ್ಯವನ್ನು ನೀವು ಆನ್‌ಲೈನ್‌ನಲ್ಲಿ ಹೇಗೆ ಮಾರಾಟ ಮಾಡಬಹುದು ಎಂಬುದು ಇಲ್ಲಿದೆ:
1. Quikr.com ಗೆ ಲಾಗ್ ಇನ್ ಮಾಡಿ.
2. ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
3. ನಿಮ್ಮ ನಾಣ್ಯಕ್ಕಾಗಿ ಹೊಸ ಪಟ್ಟಿಯನ್ನು ರಚಿಸಿ.
4. ನಾಣ್ಯದ ಬಗ್ಗೆ ವಿವರಗಳನ್ನು ನಮೂದಿಸಿ ಮತ್ತು ಅದರ ಫೋಟೋ ಕೂಡ ಅಪ್ಲೋಡ್ ಮಾಡಿ.
5. ಆಸಕ್ತ ಖರೀದಿದಾರರು ನಾಣ್ಯವನ್ನು ಖರೀದಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ.
ಅದೇ ರೀತಿ,1,2,5 ರ ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು ಮತ್ತು ಈ ಅಪರೂಪದ ಮತ್ತು ಹಳೆಯ ಕೆಲವು ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ನೀವು10 ಲಕ್ಷ ಗಳಿಸಬಹುದು.
ಇದನ್ನೂ ಓದಿ-JEE NEET ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ
ಕುತೂಹಲಕಾರಿಯಾಗಿ, ನೀವು ಮಾತೆ ವೈಷ್ಣೋ ದೇವಿಯ ಫೋಟೋದೊಂದಿಗೆ 5 ಮತ್ತು 10 ರೂ ನಾಣ್ಯಗಳನ್ನು ಹೊಂದಿದ್ದರೆ ನೀವು ದೊಡ್ಡ ಮೊತ್ತವನ್ನು ಗಳಿಸಬಹುದು. ಈ ವಿಶೇಷ ನಾಣ್ಯಗಳನ್ನು 2002 ರಲ್ಲಿ ಬಿಡುಗಡೆ ಮಾಡಲಾಯಿತು. ಮಾತಾ ರಾಣಿಯ ಫೋಟೋವನ್ನು ಒಂದು ಧಾರ್ಮಿಕ ಮತ್ತು ಅದೃಷ್ಟದ ವಸ್ತುವಾಗಿ ನೋಡಲಾಗಿದೆ ಮತ್ತು ಜನರು ಈ ನಾಣ್ಯವನ್ನು ಪಡೆಯಲು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.