ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ.
ಡಿಎನ್ಎ ವರದಿಯ ಪ್ರಕಾರ, ತನಿಖಾಧಿಕಾರಿಗಳಿಗೆ ಆರಂಭದಿಂದಲೂ ಪುಷ್ಕರ್ ಅವರನ್ನು ಕೊಂದವರು ಯಾರು ಎಂಬುದು ತಿಳಿದಿದ್ದರೂ ಸಹ ಆ ಸತ್ಯ ಇಂದಿಗೂ ನಿಗೂಢವಾಗಿಯೇ ಇದೆ ಎಂದು ಹೇಳಿದೆ.
ಅಂದಿನ ಜಿಲ್ಲಾಧಿಕಾರಿ ಬಿ.ಎಸ್ ಜೈಸ್ವಾಲ್ ಅವರು ತಯಾರಿಸಿದ ಮೊದಲ ವರದಿಯ ಪ್ರಕಾರ, ಈ ಹಿಂದೆ ಲೀಲಾ ಹೋಟೆಲ್ ನಲ್ಲಿ ತನಿಖೆ ನಡೆಸಿದ್ದ ಉಪವಿಭಾಗದ ಮ್ಯಾಜಿಸ್ಟ್ರೇಟ್ ವಸಂತ್ ವಿಹಾರ ಅಲೋಕ್ ಶರ್ಮಾದಲ್ಲಿ ಮಾತನಾಡಿ ಇದು ಆತ್ಮಹತ್ಯೆಯಲ್ಲ ಎಂದು ಹೇಳಿದ್ದರು.
ಈ ಪ್ರಕರಣದ ಕುರಿತು ಪ್ರತ್ಯೇಕ ವರಡಿ ತಯಾರಿಸಿದ ಡಿಎನ್ಎ, ಉಪ ವಿಭಾಗದ ಮ್ಯಾಜಿಸ್ಟ್ರೇಟ್ ಸರೋಜಿನಿ ನಗರದ ಸ್ಟೇಶನ್ ಹೌಸ್ ಆಫೀಸರ್ಗೆ ಈ ಪ್ರಕರಣವನ್ನು ಕೊಲೆ ಎಂದು ತನಿಖೆ ಮಾಡಲು ಆದೇಶಿಸಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
ಜನವರಿ 17, 2014ರಲ್ಲಿ ದೆಹಲಿಯ ಪಂಚತಾರಾ ಹೋಟೆಲ್ ಒಂದರಲ್ಲಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ಸಾವಿಗೀಡಾಗಿದ್ದರು. ಇವರ ಸಾವಿನ ತನಿಖೆ ನಡೆಸುವಂತೆ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವರ್ಷ ದೆಹಲಿ ಹೈಕೋರ್ಟ್ ತಳ್ಳಿ ಹಾಕಿತ್ತು.