ನವದೆಹಲಿ: ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್(ಎಐಸಿಟಿಇ) ಅನುಮತಿಯಿಲ್ಲದೆ ಸ್ವಾಯತ್ತ ಮತ್ತು ಸ್ವಾಯತ್ತ ಹೊಂದುತ್ತಿರುವ ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯಗಳು ಇಂಜಿನಿಯರಿಂಗ್ ಕೋರ್ಸ್ ಗಳನ್ನು ಆರಂಭಿಸಲು ಮತ್ತು ಮುಂದುವರೆಸಿಕೊಂಡು ಹೋಗುವ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಸುಪ್ರಿಂಕೋರ್ಟ್'ನ ಈ ನಿರ್ಧಾರದಿಂದಾಗಿ ವಿಶ್ವವಿದ್ಯಾನಿಲಯಗಳು ಇಂಜಿನಿಯರಿಂಗ್ ಕೋರ್ಸ್'ಗಳನ್ನೂ ಮುಂದುವರೆಸಿಕೊಂಡು ಹೋಗಲು AICTE ಅನುಮತಿ ಪಡೆಯಲೇಬೇಕಾಗಿದೆ. ಅಲ್ಲದೆ, ಈ ಆದೇಶವು ಎಲ್ಲಾ ರಾಜ್ಯಗಳ ವಿಶ್ವವಿದ್ಯಾನಿಲಯಗಳಿಗೆ ಅನ್ವಯಿಸಲಿದೆ ಎನ್ನಲಾಗಿದೆ.
ದೂರದ ಶಿಕ್ಷಣ ಪದ್ಧತಿಯಲ್ಲಿ (ಒರಿಸ್ಸಾ ಲಿಫ್ಟ್ ಇರಿಗೈನಿಂಗ್ ಕಾರ್ಪೋರೇಷನ್ ಲಿಮಿಟೆಡ್ ಮತ್ತು ರಬಿ ಶಂಕರ್ ಪಟ್ರೋ ಮತ್ತು ಒರ್ಸ್) ಎಂಜಿನಿಯರಿಂಗ್ ಕೋರ್ಸುಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯೆಲ್, ಆರ್.ಎಫ್ ನಾರಿಮನ್ ಮತ್ತು ಯು.ಯು.ಲಲಿತ್ ಅವರ ಪೀಠವು ಈ ಆದೇಶವನ್ನು ಜಾರಿಗೊಳಿಸಿದೆ.
ಈ ಮಧ್ಯೆ, AICTE ಯ ಅನುಮತಿಯಿಲ್ಲದೆಯೇ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶವನ್ನೂ ತಡೆಹಿಸಿಯಲಾಗಿದೆ.
"ಸರ್ವೋಚ್ಛ ನ್ಯಾಯಾಲಯ ಜಾರಿಗೊಳಿಸಿದ ಈ ಮದ್ಯಂತರ ತಡೆ ಆದೇಶದಿಂದ ಎಲ್ಲಾ ರಾಜ್ಯಗಳ ವಿಶ್ವವಿದ್ಯಾನಿಲಯಗಳ ಪ್ರವೇಶಾತಿ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಹೊಡೆತ ಬೀಳಲಿದೆ. ಹಾಗಾಗಿ ಎಲ್ಲಾ ಸ್ವಾಯತ್ತ ಮತ್ತು ಸ್ವಾಯತ್ತ ಹೊಂದುತ್ತಿರುವ ವಿಶ್ವವಿದ್ಯಾನಿಲಯಗಳು ಎಐಸಿಟಿಇ ಅನುಮೋದನೆಯನ್ನು ಪಡೆಯುವುದು ಅಗತ್ಯವಾಗಿದೆ" ಎಂದು ಹಿರಿಯ ಶಿಕ್ಷಣ ತಜ್ಞ ರವಿ ಭಾರದ್ವಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.